ಶಿವಮೊಗ್ಗಕ್ಕೆ ಅಭ್ಯರ್ಥಿ ಘೋಷಣೆಯಾಗಿ ಒಂದು ವಾರ, ಕಾಂಗ್ರೆಸ್‌ನಲ್ಲಿ ಕಾಣದ ಚುನಾವಣಾ ಉತ್ಸಾಹ, ಕಾರಣವೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 15 MARCH 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಅತ್ಯಂತ ಬೇಗ ಅಭ್ಯರ್ಥಿ ಘೋಷಿಸಿದರೆ ಮತದಾರರನ್ನು ತಲುಪುವುದು ಸುಲಭ ಎಂಬುದು ಪಕ್ಷಗಳ ಲೆಕ್ಕಾಚಾರ. ಇದೇ ಕಾರಣಕ್ಕೆ ಕಾಂಗ್ರೆಸ್‌ ಪಕ್ಷ ಮೊದಲ ಪಟ್ಟಿಯಲ್ಲಿಯೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ ವಾರ ಕಳೆದರೂ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಕ್ಷೇತ್ರದ ಕಡೆಗೆ ಮುಖ ಮಾಡಿಲ್ಲ.

ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಪುತ್ರಿ, ಡಾ. ರಾಜ್‌ ಕುಮಾರ್‌ ಕುಟುಂಬದ ಸೊಸೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಹೋದರಿ, ಜಿಲ್ಲೆಯ ಪ್ರಬಲ ಜಾತಿಗೆ ಸೇರಿದವರು ಎಂಬೆಲ್ಲ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್‌ ಪಕ್ಷ ಗೀತಾ ಶಿವರಾಜ್‌ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಕಳೆದ ಶುಕ್ರವಾರ (ಮಾ.8ರಂದು) ಮೊದಲ ಪಟ್ಟಿಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ಅವರ ಹೆಸರನ್ನು ಪ್ರಕಟಿಸಲಾಯಿತು. ಒಂದು ವಾರ ಕಳೆದರೂ ಅಭ್ಯರ್ಥಿ ಕ್ಷೇತ್ರಕ್ಕೇ ಕಾಲಿಟ್ಟಿಲ್ಲ.

ಕಾರ್ಯಕರ್ತರಲ್ಲಿ ಕಾಣದ ಉತ್ಸಾಹ

ಬಿಜೆಪಿಗಿಂತಲು ಮೊದಲು ಅಭ್ಯರ್ಥಿ ಘೋಷಿಸಿದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಬೇಕಿತ್ತು. ಗ್ಯಾರಂಟಿ ಯೋಜನೆಗಳ ಬಲ, ಅಭ್ಯರ್ಥಿ ಹೆಸರು ಪ್ರಕಟವಾಗಿದ್ದನ್ನು ಆಧಾರವಾಗಿಟ್ಟುಕೊಂಡು ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಬೇಕಿತ್ತು. ಆದರೆ ಸದ್ಯಕ್ಕೆ ಇದಾವುದು ಕಾಣುತ್ತಿಲ್ಲ. ಪಕ್ಷದ ಕಚೇರಿಯು ಬಣಗುಡುತ್ತಿದೆ. ಅಭ್ಯರ್ಥಿಯ ಮನೆಯ ಬಳಿಯು ಮೌನ ಆವರಿಸಿದೆ. ಗೀತಾ ಶಿವರಾಜ್‌ ಕುಮಾರ್‌ ಅವರ ಹೆಸರು ಪ್ರಕಟವಾದ ಮರುದಿನ ಕೆಲವೇ ಕೆಲವು ಮುಖಂಡರು, ಕಾರ್ಯಕರ್ತರು ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಮಾಡಿದ್ದು ಹೊರತು ಸಾರ್ವಜನಿಕವಾಗಿ ಇನ್ನಾವುದೇ ಚಟುವಟಿಕೆಯು ನಡೆದಿಲ್ಲ.

Geetha Shivaraj Kumar

ಅಭ್ಯರ್ಥಿ ಕ್ಷೇತ್ರಕ್ಕೆ ಕಾಲಿಡದೆ ಪ್ರಚಾರ ಕಾರ್ಯ ನಡೆಸುವುದು ಹೇಗೆ ಎಂದು ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ‘ದಂಡನಾಯಕ ಇಲ್ಲದೆ ಯುದ್ದ ಮಾಡುವುದಕ್ಕೆ ಸಾಧ್ಯವಿಲ್ಲ. ಪಕ್ಷದ ಸ್ಥಿತಿಯು ಹೀಗೆ ಆಗಿದೆ. ಅವರು ಯಾವಾಗ ಕ್ಷೇತ್ರಕ್ಕೆ ಬರುತ್ತಾರೋ, ಪ್ರಚಾರ ಕಾರ್ಯ ಯಾವಾಗ ಶುರುವಾಗಲಿದೆಯೋ ಗೊತ್ತಿಲ್ಲ. ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮಗಳಿದ್ದಾಗ ಮಾತ್ರ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ರಣತಂತ್ರ ಸಿದ್ಧಪಡಿಸುವುದು ಹೇಗೆ?ʼ ಅನ್ನುತ್ತಾರೆ ಹೆಸರು ಬಹಿಂಗಪಡಿಸಲು ಇಚ್ಛಿಸದ ಕಾಂಗ್ರೆಸ್‌ ಮುಖಂಡ.

ಆಗ ಮಧು ಸೋಲಿಗೆ ವಿಳಂಬವು ಕಾರಣ

2018ರ ಲೋಕಸಭೆ ಉಪ ಚುನಾವಣೆಗೆ ಮಧು ಬಂಗಾರಪ್ಪ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ಅವರಿಗೆ ಕಾಂಗ್ರೆಸ್‌ ಬೆಂಬಲ ನೀಡಿತ್ತು. ಅಭ್ಯರ್ಥಿ ಎಂದು ಘೋಷಣೆಯಾಗಿದ್ದರು ಮಧು ಬಂಗಾರಪ್ಪ ಕ್ಷೇತ್ರಕ್ಕೆ ತಡವಾಗಿ ಕಾಲಿಟ್ಟಿದ್ದರು. ಇದೇ ಕಾರಣಕ್ಕೆ ಆಗ ಕಾಂಗ್ರೆಸ್‌ ಜಿಲ್ಲಾ ಸಮಿತಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಈ ವಿಳಂಬ ಧೋರಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಅನುಕೂಲವಾಗಿತ್ತು. 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ‘ಚುನಾವಣೆಯಲ್ಲಿ ಸೋಲಾದ ಬಳಿಕ ಮಧು ಬಂಗಾರಪ್ಪ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದರ ಪರಿಣಾಮ 2019ರಲ್ಲಿ ಸೋಲಿನ ಅಂತರ ಹೆಚ್ಚಲು ಕಾರಣವಾಯಿತು’ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ.

Geetha and Shivaraj kumar in Shimoga

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಚಿವ ಮಧು ಜನ್ಮದಿನ, ‘ಸ್ಪೆಷಲ್‌ ಕೇಕ್‌ನ ಸೀಕ್ರೆಟ್‌’ ಬಹಿರಂಗಪಡಿಸಿದ ನಟ ಶಿವರಾಜ್‌ ಕುಮಾರ್‌

ಸಣ್ಣ ಅವಕಾಶವನ್ನೂ ಬಿಡದ ಬಿಜೆಪಿ

ಅಭ್ಯರ್ಥಿ ಘೋಷಣೆಗು ಮೊದಲೆ ಬಿಜೆಪಿ ಲೋಕಸಭೆ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಂಡಿತ್ತು. ಸಂಸದ ಬಿ.ವೈ.ರಾಘವೇಂದ್ರ ಸಣ್ಣ, ಪುಟ್ಟ ಅವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಪರ ಜನಾಭಿಪ್ರಾಯ ರೂಪಿಸಿಕೊಳ್ಳುತ್ತಿದ್ದಾರೆ. ಶಾಲೆ, ಕಾಲೇಜು ಕಾರ್ಯಕ್ರಮಗಳು, ಊರ ಹಬ್ಬಗಳು, ಜಾತ್ರೆ, ಉತ್ಸವ ಸೇರಿದಂತೆ ಗುಂಪು ಸೇರಿದಲ್ಲೆಲ್ಲ ಜನರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕುರಿತು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಒಂದು ತಿಂಗಳಿಂದ ಈಚೆಗೆ ಹಲವು ಜಾತಿ ಸಮಾವೇಶಗಳು, ಸಣ್ಣಪುಟ್ಟ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ತಲುಪಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. 

ಇದನ್ನೂ ಓದಿ – ಲೋಕಸಭೆ ಚುನಾವಣೆಗೆ ಗೀತಾ, ಶಿವಮೊಗ್ಗದಲ್ಲಿ ನಟ ಶಿವರಾಜ್‌ ಕುಮಾರ್‌ ಹೇಳಿದ್ದೇನು? ಇಲ್ಲಿದೆ 3 ಪ್ರಮುಖ ಪಾಯಿಂಟ್

ಕಾಂಗ್ರೆಸ್‌ ಅಭ್ಯರ್ಥಿಗೆ ಸಾಲು ಸಾಲು ಪ್ರಶ್ನೆ

ಇನ್ನು, ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಕಾಂಗ್ರೆಸ್‌ ಪಕ್ಷ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ. ಇದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಇರಿಸು, ಮುರಿಸು ಉಂಟು ಮಾಡಿದೆ. ಬಿಜೆಪಿ ಕಾರ್ಯಕರ್ತರ ಪ್ರಶ್ನೆಯ ವಿವರ ಇಲ್ಲಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ‘ಚುನಾವಣೆಗೆ ಸ್ಪರ್ಧಿಸಲು ಗೀತಾ ಶಿವರಾಜಕುಮಾರ್‌ಗೆ ಏನು ಅರ್ಹತೆ ಇದೆ ಎಂದು ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಆರಂಭಿಸಿದ್ದಾರೆ. ಹಾಗಿದ್ದರೆ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಬಿ.ವೈ.ರಾಘವೇಂದ್ರ ಅವರಿಗೆ ಏನು ಅರ್ಹತೆ ಇತ್ತು. ಸಾಮಾಜಿಕ ಜಾಲತಾಣ ನಂಬಿಕೊಂಡು ಚುನಾವಣೆ ಮಾಡಲು ಆಗೊಲ್ಲ. ಅದನ್ನೆಲ್ಲ ಕಸದ ಬುಟ್ಟಿಗೆ ಹಾಕಿ. ಗೀತಾ ಶಿವರಾಜ ಕುಮಾರ್ ಅವರು ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಗೆಲುವು ನಮ್ಮದೆʼ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿನ ಆ ಮೂರು ಸೋಲಿಗೆ ಪ್ರತ್ಯುತ್ತರ ನೀಡ್ತಾರಾ ಗೀತಾ ಶಿವರಾಜ್‌ ಕುಮಾರ್‌?

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ, ಮನೆಗೂ ತಲುಪಿವೆ. ಇದೇ ಆಧಾರದಲ್ಲಿ ಪ್ರಚಾರ ನಡೆಸಲು ಕಾಂಗ್ರೆಸ್‌ ಕಾರ್ಯಕರ್ತರು ಉತ್ಸುಕವಾಗಿದ್ದಾರೆ. ಆದರೆ ಅಭ್ಯರ್ಥಿ ಇಲ್ಲದೆ ಪ್ರಚಾರಕ್ಕಿಳಿದರೆ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪೇಚಿಗೆ ಸಿಲುಕಬೇಕು ಎಂದು ಪ್ರಚಾರ ಕಾರ್ಯದಿಂದ ಮುಖಂಡರು, ಕಾರ್ಯಕರ್ತರು ಹಿಂದುಳಿದಿದ್ದಾರೆ. ಇದನ್ನು ಬಿಜೆಪಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ್‌ ಮನೆ ರೆಡಿ, ವಾರ್‌ ರೂಂ ಕೂಡ ಸಿದ್ಧ, ಎಲ್ಲಿದೆ ಮನೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment