‘ಈ ಯೋಜನೆಗೆ ಕೈ ಹಾಕಿದ್ರೆ ರಕ್ತಪಾತವಾಗುತ್ತೆ ಅನ್ನೋದನ್ನ ಯಡಿಯೂರಪ್ಪ, ಅವರ ಮಗ ನೆನಪಿಟ್ಟುಕೊಳ್ಳಲಿ’

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | 30 ನವೆಂಬರ್ 2018

ಯಡಿಯೂರಪ್ಪ ಮತ್ತು ಅವರ ಮಗ, ಈ ಯೋಜನೆ ಮಾಡಲು ಬಿಡೋದಿಲ್ಲ. ಒಂದು ವೇಳೆ ಯೋಜನೆಗೆ ಕೈ ಹಾಕಿದ್ರೆ ರಕ್ತಪಾತವಾಗುತ್ತೆ. ಹೀಗಂತ ಖಡಕ್ ಎಚ್ಚರಿಕೆ ನೀಡಿದ್ದಾರೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ.

ಶಿಕಾರಿಪುರದಲ್ಲಿ ಇವತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಕಲ್ಲೋಡ್ಡು ನೀರಾವರಿ ಯೋಜನೆಗೆ ಮಾಡೋಕೆ ಬಿಡೋದಿಲ್ಲ. ಯೋಜನೆ ಮಾಡೋಕೆ ಮುಂದಾದರೆ ರಕ್ತಪಾತವಾಗುತ್ತೆ ಅನ್ನೋದನ್ನ ಯಡಿಯೂರಪ್ಪ ಮತ್ತವರ ಮಗ ನೆನಪಿಟ್ಟುಕೊಳ್ಳಬೇಕು ಅಂತಲೂ ಎಚ್ಚರಿಕೆ ನೀಡಿದ್ದಾರೆ.

‘ಯೋಜನೆ ಮಾಡೋಕೆ ರೆಡಿ’

BY Raghavendra 1 1 1

ಮತ್ತೊಂದೆಡೆ ಶಿವಮೊಗ್ಗದಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕಲ್ಲೋಡ್ಡು ಯೋಜನೆ ಕುರಿತು ಪ್ರಸ್ತಾಪಿಸಿದರು. 2006ರಲ್ಲೇ ಕಲ್ಲೋಡ್ಡು ನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಈ ಯೋಜನೆಯಿಂದ 14 ಗ್ರಾಮಗಳ 1950 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ಕಲ್ಪಿಸಬಹುದಾಗಿದೆ ಎಂದರು.

ಕಲ್ಲೋಡ್ಡು ನೀರಾವರಿ ಯೋಜನೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರತಿಷ್ಠೆಯಾಗಿ ರೂಪ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯೋಜನೆ ಕುರಿತು ಎರಡೂ ಪಕ್ಷದವರು ಹೇಳಿಕೆ ನೀಡುತ್ತಿರುವುದು, ಮಹತ್ವ ಪಡೆದುಕೊಂಡಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಕರೆ ಮಾಡಿ | 9964634494

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment