SHIVAMOGGA LIVE NEWS | 1 MAY 2024
ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಕಣದಲ್ಲಿ ಬಂಗಾರಪ್ಪ ಪುತ್ರರ ಮಧ್ಯೆ ಮಾತಿಗೆ ಮಾತು, ಏಟಿಗೆ ಎದಿರೇಟು ಶುರುವಾಗಿದೆ. ಮಧು ಬಂಗಾರಪ್ಪ ರೀಚಾರ್ಜ್ ಹೇಳಿಕೆಗೆ ಕುಮಾರ್ ಬಂಗಾರಪ್ಪ ತಿರುಗೇಟು ಕೊಟ್ಟಿದ್ದಾರೆ. ಇದರ ಮಧ್ಯೆ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಕುಮಾರ್ ಬಂಗಾರಪ್ಪಗೆ ಮಾತಿನೇಟು ನೀಡಿದ್ದಾರೆ.
![]() |
ಮಧು ಬಂಗಾರಪ್ಪ ರೀಚಾರ್ಜ್ ಹೇಳಿಕೆ
ಫ್ರೀಡಂ ಪಾರ್ಕ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಧು ಬಂಗಾರಪ್ಪ, ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ಅವರು ಯಾಕೆ ಸೋತರು. ಇಷ್ಟು ದಿನ ಎಲ್ಲಿದ್ದರು. ಸಾಮಾನ್ಯವಾಗಿ ಮೊಬೈಲ್ ರೀಚಾರ್ಜ್ ಮಾಡಿಸುತ್ತೇವೆ. ಅದಕ್ಕೆ ಹಣ ಪಡೆಯುತ್ತಾರೋ, ಉಚಿತವಾಗಿ ಮಾಡುತ್ತಾರೋ. ಕೆಲವು ಗಿರಾಕಿಗಳು ಹಾಗೆ ಎಂದು ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ, ಮಧುಗೆ ಮಾತ್ರ ಅನ್ವಯ
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ವೇಳೆ ರೀಚಾರ್ಜ್ ವಿಚಾರ ಕುರಿತು ಪ್ರಶ್ನಿಸಿದಾಗ, ಚಾರ್ಜು, ರೀಚಾರ್ಜ್ ವಿಚಾರಗಳು ಡಿ.ಕೆ.ಶಿವಕುಮಾರ್ ಮತ್ತು ಮಧುಗೆ ಮಾತ್ರ ಅನ್ವಯವಾಗುತ್ತವೆ. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲ ಇತ್ತು. ಅವುಗಳನ್ನು ಬಗೆಹರಿಸಿಕೊಂಡು ಬಂದಿದ್ದೇನೆ ಎಂದರು.
ತಂದೆಗೆ ಹೆಗಲು ಕೊಡಲಾಗಲಿಲ್ಲ
ಸಾಗರ ತಾಲೂಕ ಆವಿನಹಳ್ಳಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆಶ್ರಯ ಕೊಡಲಾಗದ ಕುಮಾರ ಬಂಗಾರಪ್ಪ, ಸ್ವಂತ ತಂದೆಯನ್ನು ಮನೆಯಿಂದ ಹೊರ ದೂಡಿದರು. ಇಂತವರಿಂದ ನೀತಿ ಪಾಠದ ಅವಶ್ಯಕತೆ ಇಲ್ಲ. ಕುಮಾರ ಬಂಗಾರಪ್ಪ ಅವರಲ್ಲಿ ‘ಬಂಗಾರಪ್ಪ’ ಎನ್ನುವ ಹೆಸರು ಕಿತ್ತು ಬದಿಗಿಟ್ಟರೆ, ಅವರದು ನಾಯಿ ಪಾಡಾಗಲಿದೆ. ಬಂಗಾರಪ್ಪ ಅವರು ನಿಧನರಾದಾಗ ಸ್ವಂತ ತಂದೆಯ ಪಾರ್ಥೀವ ಶರೀರ ಹೊರುವ ಸೌಭಾಗ್ಯ ಕೂಡ ಅವರಿಗೆ ಸಿಗಲಿಲ್ಲ. ನಾನು ಬಂಗಾರಪ್ಪ ಅವರ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟಿದ್ದೇನೆ. ಇದು ನನ್ನ ಸೌಭಾಗ್ಯ ಎಂದರು.
ಇದನ್ನೂ ಓದಿ – ಶಿರಾಳಕೊಪ್ಪದಲ್ಲಿ ಈಶ್ವರಪ್ಪ ಸಭೆಗೆ ಅಡ್ಡಿ, ನಡುರಸ್ತೆಯಲ್ಲಿ ನಿಂತು ಭಾಷಣ, ಆಗಿದ್ದೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200