ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 JANUARY 2021
ಜೆಡಿಎಸ್ ಪಕ್ಷ ಸಂಘಟನೆಗೆ ಹೊಸ ಪ್ಲಾನ್ ಸಿದ್ಧವಾಗಿದೆ. ವಿಭಾಗವಾರು ವೀಕ್ಷಕರನ್ನು ನೇಮಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೀಕ್ಷಕರ ಪಟ್ಟಿ ಸಿದ್ಧಪಡಿಸಲಾಗಿದೆ. ಶಿವಮೊಗ್ಗಕ್ಕೂ ನಾಲ್ವರು ವೀಕ್ಷಕರ ಸಮಿತಿ ನೇಮಿಸಲಾಗಿದೆ. ಜೆಡಿಎಸ್ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಈ ಸಮಿತಿಯಲ್ಲಿದ್ದಾರೆ.
ಸಂಘಟನೆ ಅಷ್ಟು ಸುಲಭವಲ್ಲ
ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಅಷ್ಟು ಸುಲಭವಿಲ್ಲ. ನಾಯಕತ್ವ ವಹಿಸಿಕೊಳ್ಳುವವರು ತಳ ಹಂತದಿಂದ ಕಾರ್ಯಕರ್ತರನ್ನು ಜೋಡಿಸಿಕೊಳ್ಳಬೇಕಿದೆ. ಇಲ್ಲಿ ಪಕ್ಷದ ಸ್ಥಿತಿ ಶೋಚನೀಯವಾಗಿದೆ.
ಈಗ ಹೇಗಿದೆ ಶಿವಮೊಗ್ಗ ಜೆಡಿಎಸ್?
ಕಳೆದ ವಿಧಾನಸಭೆಯಲ್ಲಿ ಶಿವಮೊಗ್ಗದಿಂದ ಮೂವರು ಜೆಡಿಎಸ್ ಶಾಸಕರಿದ್ದರು. ಶಿವಮೊಗ್ಗ ಗ್ರಾಮಾಂತರದಿಂದ ಶಾರದಾ ಪೂರ್ಯಾನಾಯ್ಕ್, ಸೊರಬದಿಂದ ಮಧು ಬಂಗಾರಪ್ಪ, ಭದ್ರಾವತಿಯಲ್ಲಿ ಅಪ್ಪಾಜಿಗೌಡ ಶಾಸಕರಾಗಿದ್ದರು.
ಈಗ ಜೆಡಿಎಸ್ ಪಕ್ಷದ ಶಾಸಕರಿಲ್ಲ. ಕಾರ್ಯಕರ್ತರ ಸಂಖ್ಯೆಯು ಕಡಿಮೆಯಾಗಿದೆ.
ಜೆಡಿಎಸ್ ಪಕ್ಷದ ಮುಖಂಡರು ಆಯಾ ಕ್ಷೇತ್ರಕ್ಕೆ ಸೀಮಿತವಾಗಿದ್ದು, ವಯುಕ್ತಿಕ ವರ್ಚಸ್ಸಿನಿಂದ ಬೆಂಬಲಿಗರನ್ನು ಹೊಂದಿದ್ದಾರೆ.
ಮಧು ಬಂಗಾರಪ್ಪ, ಅರ್.ಎಂ.ಮಂಜುನಾಥಗೌಡ ಅವರು ಕಾಂಗ್ರೆಸ್ ಪಕ್ಷದ ಹೊಸ್ತಿಲಲ್ಲಿದ್ದಾರೆ. ಅವರೊಂದಿಗೆ ಹಿಂಬಾಲಕರು ಕೂಡ ಕೈ ಹಿಡಿಯುವ ಸಾದ್ಯತೆ ಇದೆ.
ಅಪ್ಪಾಜಿಗೌಡ ಅವರ ನಿಧನದಿಂದಾಗಿ ಭದ್ರಾವತಿಯಲ್ಲಿ ನಾಯಕತ್ವ ಕೊರತೆ ಇದೆ. ಮುಂದೆ ನೊಗ ಹೊರುವವರು ಯಾರು ಅನ್ನುವುದು ಇನ್ನೂ ನಿಶ್ಚಿಯವಾಗಿಲ್ಲ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ರಾಜಕೀಯ ಚಟುವಟಿಕೆ ಎಂದಿನಂತಿದೆ. ಜನರ ಅಹವಾಲು ಆಲಿಸಿವುದು ಮುಂದುವರೆದಿದೆ.
ಶಿಕಾರಿಪುರ ಮತ್ತು ಸಾಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ಇದೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪಕ್ಷ ಪಾರ್ಯಾಯ ಎಂದು ಜನರಿಗೆ ಅನಿಸಿಲ್ಲ.
ಶಿವಮೊಗ್ಗದಲ್ಲಿ ಎಂ.ಶ್ರೀಕಾಂತ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಬಾಗಿಲು ತೆಗೆಯದ ಜಿಲ್ಲಾ ಕಚೇರಿ
ನೆಹರೂ ರಸ್ತೆಯಲ್ಲಿರುವ ಗಾಂಧಿ ಮಂದಿರ ಜಿಲ್ಲಾ ಜೆಡಿಎಸ್‍ನ ಪ್ರಧಾನ ಕಚೇರಿ. ಈ ಕಟ್ಟಡ ಮುಖಂಡರು, ಕಾರ್ಯಕರ್ತರನ್ನು ಕಾಣದೆ ಹಲವು ತಿಂಗಳಾಗಿದೆ. ಹಾಗಾಗಿ ಪಕ್ಷದ ಕಚೇರಿಯ ಬಾಗಿಲು ಸದಾ ಮುಚ್ಚಿರುತ್ತದೆ. ಬೆರಳೆಣಿಕೆಯಷ್ಟು ಮಂದಿ ಕಚೇರಿಗೆ ಬಂದು, ಪತ್ರಿಕೆ ಓದುವುದು ನಿತ್ಯ ಕಾಣುವ ದೃಶ್ಯ.
ವೀಕ್ಷಕರ ತಂಡದ ಮುಂದಿರುವ ಸವಾಲು
ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಮಹತ್ವದ ಜವಾಬ್ದಾರಿ ಇದೆ.
ಜಿಲ್ಲಾ ಜೆಡಿಎಸ್‍ಗೆ ನೂತನ ಸಾರಥಿಯನ್ನು ನೇಮಿಸಿ, ಹೊಸ ಹುರುಪು ನೀಡಬೇಕಿದೆ.
ಜೆಡಿಎಸ್ ಕಚೇರಿಗೆ ಸದಾ ಕಾರ್ಯಕರ್ತರು ಬಂದು ಹೋಗುವಂತೆ ನೋಡಿಕೊಳ್ಳಬೇಕಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ರೂಪಿಸಬೇಕಿದೆ.
ಜೆಡಿಎಸ್ ಸ್ಥಿತಿ ಹೇಗಿದೆ? ಸವಾಲುಗಳೇನು? ಇಲ್ಲಿದೆ ವಿಡಿಯೋ ವಿಶ್ಲೇಷಣೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422