SHIVAMOGGA LIVE NEWS | 2 SEPTEMBER 2023
SHIMOGA : ಸೋಗಾನೆಯ ವಿಮಾನ ನಿಲ್ದಾಣಕ್ಕೆ ಪ್ರೈವೇಟ್ ಜೆಟ್ಗಳು ಆಗಮಿಸುತ್ತಿವೆ. ಸಾರ್ವಜನಿಕ ಸೇವೆಗೆ ವಿದ್ಯುಕ್ತ ಚಾಲನೆ ದೊರೆತ ಬೆನ್ನಿಗೆ ಸೆ.1ರಂದು ಖಾಸಗಿ ವಿಮಾನವೊಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಇದನ್ನೂ ಓದಿ – ಶಿವಮೊಗ್ಗದ ಮೊದಲ ವಿಮಾನ, ಲ್ಯಾಂಡಿಂಗ್ನಿಂದ ಟೇಕಾಫ್ವರೆಗೆ ಏನೇನಾಯ್ತು? ಇಲ್ಲಿದೆ ಪೂರ್ತಿ ಮಾಹಿತಿ
ಶುಕ್ರವಾರ ಬೆಳಗ್ಗೆ 9.52ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10.31ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿತ್ತು. ಮಧ್ಯಾಹ್ನ 1.21ಕ್ಕೆ ಶಿವಮೊಗ್ಗದಿಂದ ಹೊರಟು ಕೇವಲ 25 ನಿಮಿಷಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ತಲುಪಿದೆ. ಪ್ರವೇಟ್ ಜೆಟ್ ಆಗಮಿಸಿದ ಕುರಿತು ಹಿರಿಯ ಪತ್ರಕರ್ತ ಡಿ.ಪಿ.ಸತೀಶ್ ಅವರು ತಮ್ಮ ಟ್ವಿಟರ್ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
A private jet has already landed! Kuvempu Airport, Shimoga/Shivamogga. pic.twitter.com/jM2IbPg2eT
— DP SATISH (@dp_satish) September 1, 2023
ಉದ್ಯಮಿಗಳು, ರಾಜಕೀಯ ನಾಯಕರು ತುರ್ತು ಭೇಟಿ ವೇಳೆ ಖಾಸಗಿ ವಿಮಾನಗಳನ್ನು ಬಳಸಿಕೊಳ್ಳುತ್ತಾರೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕು ಈಗ ಖಾಸಗಿ ವಿಮಾನಗಳ ಮೂಲಕ ಉದ್ಯಮಿಗಳು, ಗಣ್ಯರು ಆಗಮಿಸುತ್ತಿರುವುದು ಗಮನಾರ್ಹ.