ಶಿವಮೊಗ್ಗ ಲೈವ್.ಕಾಂ |SHIMOGA NEWS | 9 DECEMBER 2020
ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆಗಳು ಮುಂದುವರೆದಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ALSO READ | ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಊಟ ಕೊಡಿಸುವ ನೆಪದಲ್ಲಿ ಸಾಗರ ರಸ್ತೆಗೆ ಕರೆದೊಯ್ದು ಕೃತ್ಯ
ಯಾವ್ಯಾವ ಸಂಘಟನೆಗಳ ಆಗ್ರಹವೇನು?
ಜಯ ಕರ್ನಾಟಕ ಮಹಿಳಾ ಘಟಕ | ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಕೈಗೊಳ್ಳಬೇಕು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಜೀಮಾ, ಪ್ರಧಾನ ಕಾರ್ಯದರ್ಶಿ ಪ್ರೇಮಾ ಸೇರಿದಂತೆ ಹಲವರಿದ್ದರು.
ALSO READ | ಸಾಮೂಹಿಕ ಅತ್ಯಾಚಾರ ಪ್ರಕರಣ, ನಾಲ್ವರು ಆರೋಪಿಗಳು ಆರೆಸ್ಟ್, ಯಾರನ್ನೆಲ್ಲ ಬಂಧಿಸಲಾಗಿದೆ? ವಿಡಿಯೋ ರಿಪೋರ್ಟ್
ಗಂಧದ ಗುಡಿ ಫೌಂಡೇಶನ್ | ಕಪ್ಪು ಬಟ್ಟೆ ಧರಿಸಿ, ಏಕಾಂಗಿಯಾಗಿ, ಮೌನ ಪ್ರತಿಭಟನೆ ನಡೆಸಿದ ಫೌಂಡೇಶನ್ ಜಿಲ್ಲಾಧ್ಯಕ್ಷ ವೇಣುಗೋಪಾಲ್. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ನವ ಕರ್ನಾಟಕ ಯುವ ಶಕ್ತಿ | ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದವರನ್ನು ಗಲ್ಲಿಗೇರಿಸಬೇಕು. ಮೆಗ್ಗಾನ್ ಆಸ್ಪತ್ರೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು. ಜಿಲ್ಲಾ ಗೌರವಾಧ್ಯಕ್ಷೆ ಡಾ.ತಾನಾಜಿ, ಜಿಲ್ಲಾಧ್ಯಕ್ಷ ಸತೀಶ್ ಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ALSO READ | ಶಿವಮೊಗ್ಗದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ತೀವ್ರ ಆಕ್ರೋಶ, ಗಲ್ಲು ಶಿಕ್ಷೆಗೆ ಆಗ್ರಹ
ಎಬಿವಿಪಿ | ಅತ್ಯಾಚಾರಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಗೆ ಸೂಕ್ತ ನೆರವು ನೀಡಬೇಕು. ಪ್ರಮುಖರಾದ ಮಂಜುನಾಥ್, ಪ್ರೇಮ್ ಕುಮಾರ್, ರಘುವೀರ್, ಅರವಿಂದ್, ವಿವೇಕ್ ಪ್ರತಿಭಟನೆಯಲ್ಲಿದ್ದರು.
VIDEO REPORT
ಗ್ರೋ ಗ್ರೀನ್ | ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಶಿವಮೊಗ್ಗ ನಗರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಸಂಘಟನೆ ಅಧ್ಯಕ್ಷೆ ನಿರಂಜನಿ ಸೇರಿದಂತೆ ಹಲವರಿದ್ದರು. ಅತ್ಯಾಚಾರ ತಡೆಗಟ್ಟುವಂತೆ ಆಗ್ರಹಿಸಿ ಪೋಸ್ಟರ್ ಹಿಡಿದು, ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ | ಪೈಶಾಚಿಕ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವ ಸಂತ್ರೆಸ್ತೆಯನ್ನು ಭೇಟಿಯಾಗಿ ಧೈರ್ಯ ತುಂಬಲಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]