ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಜುಲೈ 2020
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತಷ್ಟು ಮಂದಿಗೆ ಕರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸಿಟಿ ವ್ಯಾಪ್ತಿಯಲ್ಲಿ ಇವತ್ತು ಎಂಟು ಕಡೆ ಸೀಲ್ ಡೌನ್ ಮಾಡಲಾಗಿದೆ.
ಇವತ್ತು ಎಂಟು ಕಡೆ ಸೀಲ್ ಡೌನ್
ನಗರದ ಗೋಪಾಲಗೌಡ ಬಡಾವಣೆಯ ಈ ಬ್ಲಾಕ್, ಅಶೋಕ ನಗರ, ಬಸವನಗುಡಿ, ಕಿನಿ ಲೇಔಟ್ ಸೇರಿದಂತೆ ಇವತ್ತು ಒಂದೇ ದಿನ ಎಂಟು ಕಡೆ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಒಟ್ಟು ಸೀಲ್ ಡೌನ್ ಪ್ರದೇಶಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಸೀಲ್ ಡೌನ್ ಸಂಖ್ಯೆ ಹೆಚ್ಚಳ
ಶಿವಮೊಗ್ಗ ಸಿಟಿಯಲ್ಲಿ ಈವರೆಗೂ 40 ಕಡೆ ಸೀಲ್ ಡೌನ್ ಮಾಡಲಾಗಿದೆ. ಸಂಜೆ ವೇಳೆ ಎಂಟು ಕಡೆ ಸೀಲ್ ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಒಟ್ಟು ಸೀಲ್ ಡೌನ್ ಪ್ರದೇಶಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಇದು ಇನ್ನಷ್ಟು ಹೆಚ್ಚುವ ಸಾದ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]