Use your ← → (arrow) keys to browse
ಶಿವಮೊಗ್ಗದಲ್ಲಿ ಪೊಲೀಸರಿಂದ ಬೈಕ್ ಜಾಥಾ
SHIVAMOGGA LIVE NEWS | 14 JANUARY 2024
SHIMOGA : ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲು ಸಂಚಾರ ಠಾಣೆ ಪೊಲೀಸರು ನಗರದಲ್ಲಿ ಬೈಕ್ ಜಾಥಾ ನಡೆಸಿದರು. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗದಿಂದ ಜಾಥಾಗೆ ಚಾಲನೆ ನೀಡಲಾಯಿತು. ನಗರದ ವಿವಿಧೆಡೆ ಪೊಲೀಸ್ ಸಿಬ್ಬಂದಿ ಜಾಥಾ ನಡೆಸಿದರು. ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್, ಪಿಎಸ್ಐಗಳಾದ ತಿರುಮಲೇಶ್, ನವೀನ್ ಮಠಪತಿ, ಭಾರತಿ, ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ ಇದ್ದರು.
Use your ← → (arrow) keys to browse