ಶಿವಮೊಗ್ಗ ಲೈವ್.ಕಾಂ | 8 ಮಾರ್ಚ್ 2019
ಇನ್ನು 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು, ಸಿಗಂದೂರು ಸೇತುವೆ ಲೋಕಾರ್ಪಣೆಗೊಳ್ಳಲಿದೆ ಅಂತಾ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಗಂದೂರು ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕಾಮಗಾರಿಯೂ ಶುರುವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಶರಾವತಿ ಹಿನ್ನೀರು ಭಾಗದ ಅಂಬರಗೋಡ್ಲು ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಆನ್’ಲೈನ್’ನಲ್ಲಿ ಅಧಿಕೃತವಾಗಿ ಟೆಂಡರ್ ಕರೆಯಲಾಗಿದ್ದು, ಮಾರ್ಚ್ 22ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಸ ಕಲ್ಪಿಸಲಾಗಿದೆ ಎಂದರು.
ಹತ್ತು ವರ್ಷ ನಿರ್ವಹಿಸಬೇಕು
425 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ಸೇತುವೆ ಕಾಮಗಾರಿ ನಡೆಯಲಿದೆ. 2.44 ಕಿ.ಮೀ ಸೇತುವೆಯನ್ನು 30 ತಿಂಗಳಲ್ಲಿ ನಿರ್ಮಿಸಬೇಕು ಮತ್ತು ಹತ್ತು ವರ್ಷ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ ಅಂತಾ ರಾಘವೇಂದ್ರ ಸ್ಪಷ್ಟಪಡಿಸಿದರು.
ಬಿಜೆಪಿ ಪ್ರಮುಖರಾದ ಡಿ.ಎಸ್.ಅರುಣ್, ಮಧುಸೂದನ್, ಪ್ರಸನ್ನ, ಶ್ರೀನಿವಾಸ್ ಮೇಸ್ತ್ರಿ, ನಾಗರಾಜ್, ರತ್ನಾಕರ್ ಶೆಣೈ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
