ಶಿವಮೊಗ್ಗ ಲೈವ್.ಕಾಂ | 20 ಏಪ್ರಿಲ್ 2019
ಚೌಕಿದಾರ್ ಚೋರ್ ಹೈ ಅಂತಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ತೀರ್ಥಹಳ್ಳಿಯಲ್ಲಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಅಂತಾ ಹೇಳಿಕೆ ನೀಡಿದ್ದು ಅಸಂಬದ್ಧ. ನರ್ಸರಿ ಶಾಲೆ ಮಕ್ಕಳು ರಿಂಗ ರಿಂಗ ರೋಸಸ್ ಹೇಳಿದಂತೆ ಮಾತಾಡಿದ್ದಾರೆ ಅಂತಾ ವ್ಯಂಗ್ಯವಾಡಿದರು.

ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಬಿಜೆಪಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಎಸ್.ಎಂ.ಕೃಷ್ಣ ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಯಾರಿಗೂ ಬೇಡವಾದ ಪಕ್ಷವಾಗಿದೆ. ಅವರ ಉದ್ಧಟತನದಿಂದಾಗಿ ಮಹಾ ಘಟಬಂಧನದವರು ಕೂಡ ಕಾಂಗ್ರೆಸ್’ನಿಂದ ದೂರ ಉಳಿದಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಸಿಎಂ ಆಗುವುದು ಕನಸು ಎಂದು ಟೀಕಿಸಿದರು.
ಇನ್ನಷ್ಟು ಸರ್ಜಿಕಲ್ ದಾಳಿಗಳಾಗುತ್ತಿತ್ತು
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕಾಂಗ್ರೆಸ್ ಆರೋಪಿಸುತ್ತಿದೆ. ಇಲ್ಲಸಲ್ಲದ ಅವರ ಆರೋಪಗಳಿಗೆ ಕಿಮ್ಮತ್ತಿಲ್ಲದಂತಾಗಿದೆ. ರಫೇಲ್ ಯುದ್ಧ ವಿಮಾನ ಸೂಕ್ತ ಸಮಯದಲ್ಲಿ ದೇಶಕ್ಕೆ ಬಂದಿದ್ದರೆ, ಇನ್ನಷ್ಟು ಸರ್ಜಿಕಲ್ ದಾಳಿಗಳಾಗುತ್ತಿತ್ತು ಎಂದು ಕಾಂಗ್ರೆಸ್ ವಿರುದ್ಧ ಎಸ್.ಎಂ.ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ನಂಜನಗೂಡು ಎಂಎಲ್ಎ ಹರ್ಷವರ್ದನ್, ಮಾಜಿ ಸಚಿವ ಜೀವರಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]