SHIVAMOGGA LIVE | 21 JUNE 2022 | LOAN APP
ಘಟನೆ 1
ಯಾವುದೋ UNKNOWN ನಂಬರ್’ನಿಂದ ವಾಟ್ಸಪ್ ಸಂದೇಶ ಬಂದಿತ್ತು. ಓಪನ್ ಮಾಡಿ ನೋಡಿದಾತನಿಗೆ ಒಂದು ಕ್ಷಣ ಶಾಕ್ ಹೊಡೆದ ಅನುಭವಾಯಿತು. ಕೆಲವೆ ಸೆಕೆಂಡುಗಳ ಮುಂಚೆ ತಾನು, ತನ್ನ ಪ್ರಿಯತಮೆ ಜೊತೆಗೆ ಕೊಠಡಿಯೊಳಗೆ ಇದ್ದ ಫೋಟೊ ವಾಟ್ಸಪ್ ಮೂಲಕ ಬಂದಿತ್ತು. ಆ ಫೋಟೊ ತೆಗೆದಿದ್ದು ಆತನದ್ದೇ ಮೊಬೈಲ್’ನಲ್ಲಿದ್ದ ಕ್ಯಾಮರಾ. ಆದರೆ ಫೋಟೋ ಕ್ಲಿಕ್ಕಿಸಿದ್ದು ಮಾತ್ರ ಆತನಾಗಿರಲಿಲ್ಲ.
![]() |
ಘಟನೆ 2
‘ಈಕೆ ದೊಡ್ಡ ವಂಚಕಿ. ಪಡೆದ ಹಣವನ್ನು ತೀರಿಸದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದಾಳೆ. ಈಕೆ ಮತ್ತು ಈಕೆಯ ಕುಟುಂಬದವರ ಬಗ್ಗೆ ಮಾಹಿತಿ ಕೊಡಿ. ಇಲ್ಲವಾದಲ್ಲಿ ಆಕೆ ಪಡೆದ ಸಾಲವನ್ನು ನೀವೆ ತೀರಿಸಬೇಕು. ತಪ್ಪಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.’ ಹೀಗೊಂದು ಮೆಸೇಜು ಕಚೇರಿಯೊಂದರ ಸಿಬ್ಬಂದಿಗೆಲ್ಲ ವಾಟ್ಸಪ್ ಮೂಲಕ ಬಂದಿತ್ತು. ಅದನ್ನು ಕಂಡು ಎಲ್ಲರು ಬೆಚ್ಚಿಬಿದ್ದಿದ್ದರು.
ಇದು ಯಾರದ್ದೋ ಕಥೆಗಳು ಅಂತಾ ಉಡಾಫೆ ಮಾಡುವಂತೆಯೇ ಇಲ್ಲ. ನಾಳೆ ಈ ಜೇಡರ ಬಲೆಯೊಳಗೆ ನೀವು ಸಿಕ್ಕಿಬೀಳುವ ಸಾದ್ಯತೆ ಇದೆ. ಒಮ್ಮೆ ಸಿಕ್ಕಿಬಿದ್ದರೆ ಈ ಅಗೋಚರ ಆತಂಕವಾದಿಗಳಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ.
ಏನಿದು ಜೇಡರ ಬಲೆ?
ದಾಖಲೆಗಳ ಪರಿಶೀಲನೆಯ ಕಿರಿಕಿರಿ ಇಲ್ಲ. ಹತ್ತಾರು ಭಾರಿ ಬ್ಯಾಂಕಿಗೆ ಓಡಾಡುವ ಅಗತ್ಯವಿಲ್ಲ. ಕುಳಿತಲ್ಲಿಯೆ ತಕ್ಷಣಕ್ಕೆ ಸಾಲ ಒದಗಿಸುತ್ತೇವೆ. ಹೀಗಂತ ಆಮಿಷವೊಡ್ಡಿ, ಜನರನ್ನ ಬಲೆಗೆ ಕೆಡವಿಕೊಳ್ಳುತ್ತಿರುವ ಜಾಲ ಭಾರತದಲ್ಲಿ ಬಹಳ ಬಿರುಸಾಗಿ ಬೆಳೆಯುತ್ತಿದೆ. ಈ ಜೇಡರ ಬಲೆಗೆ ಬಿದ್ದ ಹಲವರು ನೆಮ್ಮದಿಯನ್ನಷ್ಟೆ ಅಲ್ಲ, ಮನೆ – ಮಠ, ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಮೊಬೈಲ್’ನಿಂದ ಎಲ್ಲವನ್ನು ಕಳೆದುಕೊಳ್ಳುವವರೆಗೆ
ಸಾವಿರಾರು INSTANT LOAN APPಗಳು ಭಾರತದಲ್ಲಿ ಸಕ್ರಿಯವಾಗಿವೆ. ಈ LOAN APPಗಳು ಒಂದು ಸಾವಿರ ರೂ.ನಿಂದ ಲಕ್ಷ ರೂ.ವರೆಗೂ ಸಾಲ ಕೊಡುತ್ತವೆ. LOAN APP ಡೌನ್ ಲೋಡ್ ಮಾಡಿಕೊಂಡು, ಫೋಟೊ, ಪ್ಯಾನ್ ಕಾರ್ಡ್ ಡಿಟೇಲ್ ಕೊಟ್ಟರೆ ಸಾಕು. ಫಟಾಫಟ್ ನಿಮ್ಮ ಬ್ಯಾಂಕ್ ಅಕೌಂಟ್’ಗೆ ಹಣ ಬಂದು ಬೀಳುತ್ತೆ. ಆಮೇಲೆ ಕಂತು ಕೊಟ್ಟಿಕೊಂಡು ಹೋದರೆ ಮುಗಿಯಿತು. ಇಷ್ಟು ಸುಲಭವಾಗಿ ಸಾಲ ಸಿಗುತ್ತೆ ಅಂದರೆ ಯಾರು ತಾನೆ ಬೇಡ ಅನ್ನುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡು LOAN APPಗಳು ಸಾಲು ಸಾಲು ಜನರಿಗೆ ಸಾಲ ಕೊಡುತ್ತಿವೆ. ಆದರೆ ಇವುಗಳ ನಿಜವಾದ ಕಥೆಯೇ ಬೇರೆ.
ಏನಿದು ರಿಯಲ್ ಕಥೆ?
ಮೇಲ್ನೋಟಕ್ಕೆ LOAN APPಗಳು ಫೋಟೋ, ಪ್ಯಾನ್ ಕಾರ್ಡ್ ಮಾಹಿತಿಯನ್ನಷ್ಟೆ ಪಡೆಯುತ್ತವೆ. ಆದರೆ ವಾಸ್ತವದಲ್ಲಿ ಈ APPಗಳು ನಿಮ್ಮ ಕಾಂಟ್ಯಾಕ್ಟ್ ಡಿಟೇಲ್ಸ್, ಗ್ಯಾಲರಿ, ಕ್ಯಾಮರಾ ಆಪ್ಷನ್ ಸೇರಿದಂತೆ ಸಂಪೂರ್ಣವಾಗಿ ನಿಮ್ಮ ಮೊಬೈಲ್ ಫೋನನ್ನೆ ತಮ್ಮ ಕಂಟ್ರೋಲ್ ತೆಗೆದುಕೊಳ್ಳುತ್ತವೆ. ನಿಮ್ಮ ಮೊಬೈಲ್ ಫೋನನ್ನು ನೀವಷ್ಟೆ ಅಲ್ಲ, ಅಗತ್ಯಬಿದ್ದರೆ LOAN APP ನಡೆಸುವವರು ಕೂಡ ಬಳಸುತ್ತಾರೆ. ಅದರೆ ಅದು ನಿಮಗೆ ಗೊತ್ತೆ ಆಗುವುದಿಲ್ಲ.
ಅವರೇಕೆ ನಮ್ಮ ಮೊಬೈಲ್ ಬಳಸುತ್ತಾರೆ?
LOAN APPನವರು ಮೊದಲು ಕೊಡುವ ಭರವಸೆಯೊಂದು, ಆಮೇಲೆ ನಡೆದುಕೊಳ್ಳುವ ರೀತಿಯೇ ಒಂದು. 5 ಸಾವಿರ ರೂ. ಸಾಲ ಕೊಟ್ಟು, ಮನಸೋಯಿಚ್ಛೆ ಅಸಲು, ಬಡ್ಡಿ ವಸೂಲಿ ಮಾಡುತ್ತಾರೆ. ಹಣ ಕೊಡದೆ ಇದ್ದಾಗ ಮೊಬೈಲ್’ನಲ್ಲಿ ಇರುವ ಕಾಂಟ್ಯಾಕ್ಟ್ ಬಳಕೆ ಮಾಡಿಕೊಳ್ಳುತ್ತಾರೆ. ಎಲ್ಲಾ ಕಾಂಟ್ಯಾಕ್ಟ್’ಗಳಿಗೂ ನೀವು ವಂಚಕರು ಎಂದು ಮೆಸೇಜ್ ಕಳುಹಿಸುತ್ತಾರೆ. ಮೊಬೈಲ್ ಗ್ಯಾಲರಿಯಲ್ಲಿರುವ ಖಾಸಗಿ ಫೋಟೊಗಳನ್ನು ಕದ್ದು ಬಳಸುತ್ತಾರೆ. ನಿಮಗೇ ಗೊತ್ತಿಲ್ಲದೆ ಕ್ಯಾಮರಾವನ್ನು ಬಳಕೆ ಮಾಡಿಕೊಂಡು ನಿಮ್ಮ ಖಾಸಗಿ ಕ್ಷಣಗಳನ್ನು ಚಿತ್ರಿಸಿಕೊಂಡು, ನಿಮಗೇ ವಾಟ್ಸಪ್ ಮಾಡಿ ಹಣ ಕೊಡುವಂತೆ ಬೆದರಿಸುತ್ತಾರೆ.
ನಾವೇ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ
LOAN APPಗಳನ್ನು ಡೌನ್ ಮಾಡುವುದು ನಾವೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ. ಇವರು ಮನಸೋಯಿಚ್ಛೆ ಹಣ ವಸೂಲಿಗೆ ಇಳಿಯುತ್ತಾರೆ. ಸಾಲ, ಬಡ್ಡಿ ಮರುಪಾವತಿಸದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬೆದರಿಸುತ್ತಾರೆ. ಹೊತ್ತು ಗೊತ್ತಿಲ್ಲದೆ UNKNOWN ನಂಬರ್’ಗಳಿಂದ ಕರೆ ಮಾಡಿ ಹೆದರಿಸುತ್ತಾರೆ. ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್’ನಲ್ಲಿರುವವರಿಗೆ ಮೆಸೇಜ್ ಕಳುಹಿಸಿ, ಅವರಿಗೂ ಬೆದರಿಕೆ ಹಾಕುತ್ತಾರೆ. ಇದೆ ಕಾರಣಕ್ಕೆ LOAN APPಗಳಿಂದ ಸಾಲ ಪಡೆದ ಹಲವರು ಕಂತು ಕಟ್ಟಿ ಕಟ್ಟಿ ಕೊನೆಗೆ ಹಣವಿಲ್ಲದೆ, ಮರ್ಯಾದೆಯನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರ್ಕಾರ ಏನು ಮಾಡುತ್ತಿದೆ?
ಕರೋನ ಲಾಕ್ ಡೌನ್ ಬಳಿಕ LOAN APPಗಳ ಹಾವಳಿ ಹೆಚ್ಚಾಯಿತು. ಕೆಲಸವಿಲ್ಲದೆ, ದುಡಿಮೆಯು ಇಲ್ಲದೆ ಜನ ಹೈರಾಣಾದ ಸಂದರ್ಭವನ್ನೆ ಈ LOAN APPಗಳು ದುರ್ಬಳಕೆ ಮಾಡಿಕೊಳ್ಳಲು ಆರಂಭಿಸಿವೆ. ಇದು ಅರಿವಿಗೆ ಬರುತ್ತಿದ್ದಂತೆ LOAN APPಗಳ ವಿರುದ್ಧ ಸರ್ಕಾರ ಈಗ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. LOAN APPಗಳ ಮೂಲಕ ಸಾಲ ಪಡೆಯದಂತೆ ಜಾಗೃತಿಯನ್ನು ಮೂಡಿಸುತ್ತಿದೆ.
ಈ ಮಧ್ಯೆ ರಿಜರ್ವ್ ಬ್ಯಾಂಕ್ ಈ LOAN APPಗಳ ಕ್ರಮ ಕೈಗೊಳ್ಳುತ್ತಿವೆ. LOAN APPಗಳನ್ನು ನಿರ್ವಹಿಸುತ್ತಿದ್ದ ಫೈನಾನ್ಸ್ ಸಂಸ್ಥೆಗಳ ಲೈಸೆನ್ಸ್ ರದ್ದುಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ LOAN APPಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಯಾವುದೆ ಕಾರಣಕ್ಕೂ ಪ್ಲೇ ಸ್ಟೋರ್’ನಲ್ಲಿ ಈ APPಗಳು ಸಿಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
LOAN APPಗಳ ಬಗ್ಗೆ ಜಾಗೃತಿಯಿಂದ ಇರಬೇಕು. ಇಲ್ಲವಾದರೆ ಪ್ರಾಣಕ್ಕೆ ಕುತ್ತು ಬರುವ ಸಾದ್ಯತೆ ಇದೆ. ಈ ಕುರಿತು ನೀವು ಜಾಗೃತರಾಗಿರಿ.
ಇದನ್ನೂ ಓದಿ | ಪಿಂಚಣಿಗಾಗಿ ಕಾದು ಸುಸ್ತಾಗಿ ಬಿದ್ದ ವೃದ್ಧೆ ಮನೆಗೆ ತಹಶೀಲ್ದಾರ್ ಭೇಟಿ, ವಿಎಗೆ ನೊಟೀಸ್ ಜಾರಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200