SHIVAMOGGA LIVE NEWS | 15 MAY 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
WHATSAPP UPDATE : ಮತ್ತಷ್ಟು ಹೊಸ ಫೀಚರ್‌ಗಳು ಮತ್ತು ಬಳಕೆದಾರರ ಸ್ನೇಹಿಯಾಗಲು ವಾಟ್ಸಪ್‌ನ ಲುಕ್ ಅಂಡ್ ಫೀಲ್‌ನಲ್ಲಿ ಹಲವು ಮಹತ್ವದ ಬದಲಾವಣೆ (New Layout) ಮಾಡಲಾಗಿದೆ. ಸದ್ಯದಲ್ಲೇ ಹೊಸ ಅಪ್‌ಡೇಟ್ ಎಲ್ಲ ವಾಟ್ಸಪ್‌ನಲ್ಲಿ ಕಾಣಿಸಲಿದೆ.
ಹೇಗಿರುತ್ತೆ ಹೊಸ ಲುಕ್?
ಹೊಸತನ, ಸುಲಭ ಬಳಕೆಯ ಗುರಿಯೊಂದಿಗೆ ಹೊಸ ಲುಕ್ ರೆಡಿ ಮಾಡಲಾಗಿದೆ ಎಂದು ವಾಟ್ಸಪ್ ಸಂಸ್ಥೆ ತಿಳಿಸಿದೆ. ಬಳಕೆದಾರರಿಗೆ ಉತ್ತಮ ಫೀಲ್ ನೀಡಲು ಹಸಿರು ಬಣ್ಣದ ಲೇಔಟ್ ಸಿದ್ದಪಡಿಸಲಾಗಿದೆ. 35 ಬಣ್ಣದ ಮಾದರಿಗಳನ್ನು ಟೆಸ್ಟ್ ಮಾಡಿ ಅಂತಿಮವಾಗಿ ತನ್ನ ಲೋಗೋಗೆ ಹೋಲುವಂತೆ ಹಸಿರು ಬಣ್ಣವನ್ನು ಉಳಿಸಿಕೊಳ್ಳಲಾಗಿದೆ. ಡಾರ್ಕ್ ಮೋಡ್ ಮತ್ತಷ್ಟು ಡಾರ್ಕ್ ಮಾಡಲಾಗಿದೆ.

ಐಕಾನ್‌ಗಳು ಬದಲಾಗಿವೆ. ರೌಂಡ್ ಮತ್ತು ಹಸಿರು ಔಟ್ ಲೈನ್ ಇರುವಂತೆ ಐಕಾನ್ ಸಿದ್ದಪಡಿಸಲಾಗಿದೆ. ಆನಿಮೇಷನ್ ಕೂಡ ಹೊಸ ರೂಪದಲ್ಲಿದೆ. ಚಾಟಿಂಗ್ ಬ್ಯಾಕ್‌ಗ್ರೌಂಡ್ ನೋಡಲು ಮತ್ತಷ್ಟು ಸುಲಭವೆನಿಸುವಂತೆ ಡಿಸೈನ್ ಮಾಡಲಾಗಿದೆಯಂತೆ.

ಚಾಟ್, ಅಪ್‌ಡೇಟ್, ಕಮ್ಯೂನಿಟಿ ಮತ್ತು ಕಾಲ್ ಬಟನ್‌ಗಳನ್ನು ಕೆಳಗೆ ನೀಡಲಾಗಿದೆ. ನಾಲ್ಕು ಬಟನ್‌ಗಳ ಮಧ್ಯೆ ಅಂತರ ಇರಿಸಲಾಗಿದೆ. ಇನ್ನು, ಡಾಕ್ಯೂಮೆಂಟ್, ಫೈಲ್‌ಗಳನ್ನು ಕಳುಹಿಸಲು ಅನುಕೂಲ ಆಗುವಂತೆ ಬಟನ್ ನೀಡಲಾಗಿದೆ.

ಇನ್ನು, ಮೇಲ್ಭಾಗದಲ್ಲಿ ಎಲ್ಲ ಚಾಟ್‌ಗಳು, ಓದದೆ ಉಳಿದಿರುವ ಮೆಸೇಜ್ ಮತ್ತು ಗ್ರೂಪ್ ಎಂದು ಪ್ರತ್ಯೇಕ ಟ್ಯಾಬ್ ನೀಡಲಾಗಿದೆ. ಸರ್ಚ್ ಬಟನ್ ಕೂಡ ವಿಸ್ತಾರವಾಗಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಹೊಸ ಲೇಔಟ್ ಇನ್‌ಸ್ಟಾಲ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ – ‘ಎಣ್ಣೆ ಬೇಡ’ ಅಂತಾ ಬೀದಿಗಿಳಿದ ಗ್ರಾಮಸ್ಥರು, ಶಿವಮೊಗ್ಗ ರಕ್ಷಣಾಧಿಕಾರಿ ಕಚೇರಿಗೆ ತೆರಳಿ ದೂರು
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





