SHIVAMOGGA LIVE NEWS | 10 OCTOBER 2023
ಇತ್ತೀಚೆಗಷ್ಟೆ ಚಾನಲ್ ಫೀಚರ್ ಮೂಲಕ ಬಳಕೆದಾರರ ಗಮನ ಸೆಳೆದಿದ್ದ ವಾಟ್ಸಪ್ ಸಂಸ್ಥೆ ಈಗ ಮತ್ತೊಂದು ಅಪ್‌ಡೇಟ್ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೆ ವಾಟ್ಸಪ್ ‘ಸೀಕ್ರೆಟ್ ಕೋಡ್’ (Secret Code) ಫೀಚರ್ ಬಿಡುಗಡೆಯಾಗಲಿದೆ.
ಈ ಹಿಂದೆ ಬೇರಾರೂ ನಮ್ಮ ವಾಟ್ಸಪ್ ಬಳಕೆ ಮಾಡಬಾರದು ಎಂದು PIN CODE ಮತ್ತು ಬಯೋಮೆಟ್ರಿಕ್ ಲಾಕ್ ವ್ಯವಸ್ಥೆ ನೀಡಿತ್ತು. ಈಗ ಸೀಕ್ರೆಟ್ ಕೋಡ್ ಫೀಚರ್ ಬಡುಗಡೆಗೆ ಸಿದ್ಧವಾಗಿದ್ದು, ಬೀಟಾ ವರ್ಷನ್‌ನಲ್ಲಿ ಅಪ್‌ಡೇಟ್ ಲಭ್ಯವಿದೆ.
ಏನಿದು ಸೀಕ್ರೆಟ್ ಕೋಡ್ ಫೀಚರ್?
ಇನ್ಮುಂದೆ ಆಯ್ದ ವಾಟ್ಸಪ್ ಚಾಟ್‌ಗಳು ಯಾರಿಗೂ ಕಾಣದ ಹಾಗೆ ಲಾಕ್ ಮಾಡಬಹುದಾಗಿದೆ. ಸೀಕ್ರೆಟ್ ಕೋಡ್ ಬಳಸಿದರೆ ಮಾತ್ರ ಈ ಚಾಟಿಂಗ್ ಓಪನ್ ಆಗಲಿದೆ. ಯಾವುದಾದರೂ ಪದ ಅಥವಾ ಎಮೋಜಿಯನ್ನು ಸೀಕ್ರೆಟ್ ಕೋಡ್ (Secret Code) ಆಗಿ ಬಳಸಬಹುದಾಗಿದೆ. ಬೇರೆ ಯಾವುದೆ ಡಿವೈಸ್‌ಗಳಲ್ಲಿ ವಾಟ್ಸಪ್ ಲಿಂಕ್ ಆಗಿದ್ದರೆ ಅಲ್ಲಿಯೂ ಆ ವಾಟ್ಸಪ್ ಚಾಟ್‌ಗಳು HIDE ಆಗಲಿದೆ. ಸೀಕ್ರೆಟ್ ಕೋಡ್ ಬಳಸಿದರೆ ಮಾತ್ರವೇ ಲಿಂಕ್ ಆಗಿರುವ ಡಿವೈಸ್‌ಗಳಲ್ಲೂ ಆ ಚಾಟ್‌ಗಳು ಓಪನ್ ಆಗಲಿವೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ವಾಟ್ಸಪ್‌ನಲ್ಲಿ ವಿಡಿಯೋ ಶೇರ್ ಮಾಡಿದವನ ವಿರುದ್ಧ ಕೇಸ್, ಏನದು ವಿಡಿಯೋ?
ಬೀಟಾ ವರ್ಷನ್‌ನಲ್ಲಿ ಸೀಕ್ರೆಟ್ ಕೋಡ್‌ನ ಟೆಸ್ಟಿಂಗ್ ನಡೆಯುತ್ತಿದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಎಲ್ಲರಿಗೂ ಈ ಫೀಚರ್ ಲಭ್ಯವಾಗುವ ಸಾದ್ಯತೆ ಇದೆ. ಟೆಲಿಗ್ರಾಂ ಆಪ್‌ನಲ್ಲಿ ಸೀಕ್ರೆಟ್ ಚಾಟಿಂಗ್ ಆಪ್ಷನ್ ಇದೆ. ಈಗ ವಾಟ್ಸಪ್ ಸೀಕ್ರೆಟ್ ಕೋಡ್ ಫೀಚರ್ ಬಿಡುಗಡೆ ಮಾಡುತ್ತಿದ್ದು, ಟೆಲಿಗ್ರಾಂ ಬಳಕೆದಾರರನ್ನು ಇತ್ತ ಸೆಳೆಯುತ್ತದೆಯೇ ಎಂಬ ಕುತೂಹಲವಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200