JUST MAHITI : ಡಿಜಿಟಲ್ ಪೇಮೆಂಟ್‌ಗೆ ಖ್ಯಾತಿಯಾಗಿರುವ ಗೂಗಲ್ ಪೇ ಆ್ಯಪ್ ಮೂಲಕ ಈಗ ಒಂದು ಲಕ್ಷ ರೂ.ವರೆಗೆ ಸಾಲ (Loan) ಪಡೆಯಬಹುದಾಗಿದೆ. ಗೂಗಲ್ ಸಂಸ್ಥೆ ಹೊಸ ಯೋಜನೆಗೆ ಚಾಲನೆ ನೀಡಲಾಗಿದ್ದು, ಬ್ಯಾಂಕ್‌ಗೆ ಹೋಗದೆ, ಮೊಬೈಲ್‌ನಲ್ಲಿ ಒಂದೇ ಕ್ಲಿಕ್ ಮೂಲಕ ಪರ್ಸನಲ್ ಲೋನ್ ಪಡೆಯಬಹುದಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
‘ಸಾಲ ನೀಡುವ ಹಣಕಾಸು ಸಂಸ್ಥೆ ಮತ್ತು ಗ್ರಾಹಕರ ಮಧ್ಯೆ ಸೇತುವೆಯಾಗಿ ಗೂಗಲ್ ಪೇ ಆ್ಯಪ್ ಕಾರ್ಯ ನಿರ್ವಹಿಸಲಿದೆ. ಪ್ರತಿ ತಿಂಗಳು ಆಯ್ಕೆ ಮಾಡಿದ ಬ್ಯಾಂಕುಗಳ ಮೂಲಕವೇ ಇ.ಎಂ.ಐ ಕಡಿತಗೊಳಿಸಲಾಗುತ್ತದೆʼ ಎಂದು ಗೂಗಲ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಲ ಪಡೆಯೋದು ಹೇಗೆ?
ಸಾಲ ಪಡೆಯುವವರು ಗೂಗಲ್ ಪೇ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಹಣಕಾಸು ಸಂಸ್ಥೆಯು ಅರ್ಜಿ ಪರಿಶೀಲನೆ ಬಳಿಕ ಸಾಲ ನೀಡಲಿದೆ ಎಂದು ಗೂಗಲ್ ತಿಳಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ವಿವರಣೆ.
ಹಂತ 1 » Google Pay ಆ್ಯಪ್‌ನಲ್ಲಿ Manage Your Money ವಿಭಾಗದಲ್ಲಿ Loans ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ Offers ಮೇಲೆ ಕ್ಲಿಕ್ ಮಾಡಿದಾಗ ಲೋನ್ ಆಫರ್‌ಗಳು ಲಭ್ಯವಾಗಲಿವೆ.
ಹಂತ 2 » ನಿಮಗೆ ಅವಶ್ಯವಿರುವ ಲೋನ್ ಆಫರ್‌ಗಳನ್ನು ಆಯ್ಕೆ ಮಾಡಬೇಕು. ಕೆಲವು ಖಾಸಗಿ ಮಾಹಿತಿ, ಉದ್ಯೋಗ ಸಂಬಂಧ ಮಾಹಿತಿ ದಾಖಲಿಸಬೇಕು. Continue ಮೇಲೆ ಕ್ಲಿಕ್ ಮಾಡಬೇಕು.
ಹಂತ 3 » ಎಸ್‌ಎಂಎಸ್ ಮೂಲಕ OTP ಬರಲಿದೆ. ಅದನ್ನು ಗೂಗಲ್ ಪೇ ಆ್ಯಪ್‌ನಲ್ಲಿ ದಾಖಲಿಸಬೇಕು. SUBMIT ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ » WhatsApp : ಇನ್ಮುಂದೆ ನಿಮ್ಮಿಷ್ಟದ ಸೆಲಬ್ರಿಟಿ ಧ್ವನಿಯಲ್ಲಿ ಕಳುಹಿಸಬಹುದು Voice Note
ವೈಯಕ್ತಿಕ ಸಾಲ ನೀಡುವ ಹಣಕಾಸು ಸಂಸ್ಥೆಯು ನಿಮ್ಮ ಅರ್ಜಿ ಪರಿಶೀಲಿಸದೆ. ಅರ್ಹವಾಗಿದ್ದಲ್ಲಿ ಸಾಲ ನೀಡಲಿದೆ. ನಿಮ್ಮ ಅರ್ಜಿಯ ಸ್ಟೇಟಸ್ ಏನು ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಇದಕ್ಕೂ ಗೂಗಲ್ ಪೇ ಆ್ಯಪ್‌ನಲ್ಲಿ ಅವಕಾಶವಿದೆ. ಅರ್ಜಿ ಪುರಸ್ಕೃತವಾಗಿದ್ದರೆ ಹಣ ಸಂದಾಯವಾಗಲಿದೆ. ತಿರಸ್ಕೃತವಾಗಿದ್ದರೆ ಆ್ಯಪ್‌ನಲ್ಲೇ ರಿಜೆಕ್ಟ್ ಎಂದು ತೋರಿಸಲಿದೆ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಡಿಎಂಐ ಫೈನಾನ್ಸ್ ಸಂಸ್ಥೆ ಗೂಗಲ್ ಪೇ ಆ್ಯಪ್ ಮೂಲಕ ಸಾಲ ನೀಡುವ ಯೋಜನೆ ಆರಂಭಿಸಿದೆ. ಈ ಸಂಸ್ಥೆಯು ನವದೆಹಲಿ ಮೂಲದ್ದಾಗಿದೆ.
ಇದನ್ನೂ ಓದಿ » ಇವು ಸಾಮಾನ್ಯ ಗುಂಡಿಗಳಲ್ಲ, ಬಂದ್ ಆಗಲು PM, CMಗಳೆ ಬರಬೇಕು
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





