ಮೊಬೈಲ್ ನ್ಯೂಸ್: ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ (Apple) ಬೆಂಗಳೂರಿನ ಹೆಬ್ಬಾಳದಲ್ಲಿ ಇವತ್ತು ಆರಂಭವಾಗಿದೆ. ಮೊದಲ ದಿನವೇ ಆ್ಯಪಲ್ ಸ್ಟೋರ್‌ಗೆ ದೊಡ್ಡ ಸಂಖ್ಯೆಯ ಗ್ರಾಹಕರು ಲಗ್ಗೆ ಇಟ್ಟರು. ಬೆಳಗ್ಗೆ 6 ಗಂಟೆಯಿಂದಲೇ ಕ್ಯೂನಲ್ಲಿ ನಿಂತು ಆ್ಯಪಲ್ ಸ್ಟೋರ್‌ಗೆ ಬಂದು ಖರೀದಿ ಮಾಡಿ ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಹೇಗಿದೆ ಬೆಂಗಳೂರು ಆ್ಯಪಲ್ ಸ್ಟೋರ್?
ಮುಂಬೈ, ದೆಹಲಿ ಬಳಿಕ ಆ್ಯಪಲ್ ಸಂಸ್ಥೆ ದಕ್ಷಿಣ ಭಾರತದಲ್ಲಿ ಮೊದಲ ಸ್ಟೋರ್ ತೆರೆದಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ಬೃಹತ್ ಆ್ಯಪಲ್ ಸ್ಟೋರ್ ಆರಂಭವಾಗಿದೆ. ಇಲ್ಲಿ ಆ್ಯಪಲ್ ಸಂಸ್ಥೆಯ ಫೋನುಗಳು, ಮ್ಯಾಕ್‌ಬುಕ್‌ಗಳು, ಐಪಾಡ್, ಪೆನ್ಸಿಲ್ ಪ್ರೋ, ವಾಚ್ ಸೀರಿಸ್, ಏರ್‌ಪಾಡ್‌ಗಳು, ಏರ್ ಟ್ಯಾಗ್‌ಗಳೆಲ್ಲು ಲಭ್ಯವಿದೆ. ಆ್ಯಪಲ್ 16 ಸೀರಿಸ್‌ನ ಮೊಬೈಲ್‌ಗಳು, ಮ್ಯಾಕ್ ಬುಕ್ ಎಂ4 ಚಿಪ್ ಸೇರಿದಂತೆ ಇತ್ತೀಚಿಗೆ ಬಿಡುಗಡೆಯಾದ ಎಲ್ಲ ಬಗೆಯ ಆ್ಯಪಲ್ ಪ್ರಾಡೆಕ್ಟ್‌ಗಳು ಇಲ್ಲಿ ಲಭ್ಯ.

ಬೆಂಗಳೂರಿನ ಹೆಬ್ಬಾಳದ ವಿಶಾಲವಾದ ಆ್ಯಪಲ್ ಸ್ಟೋರ್‌ನಲ್ಲಿ 15 ರಾಜ್ಯದ 70 ಮಂದಿ ಕೆಲಸ ಮಾಡಲಿದ್ದಾರೆ. ಇದರಲ್ಲಿ ಸೇಲ್ಸ್, ಫೈನಾನ್ಸ್ ಸೇರಿ ಗ್ರಾಹಕರಿಗೆ ಸಲಹೆ ನೀಡಲು ಸಿಬ್ಬಂದಿ ನೇಮಿಸಲಾಗಿದೆ.

ಇದನ್ನೂ ಓದಿ » ಓಲಾ ಸ್ಕೂಟರ್ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗದ ಗ್ರಾಹಕ ನ್ಯಾಯಾಲಯ, ಮಹತ್ವದ ತೀರ್ಪು ಪ್ರಕಟ
ಇನ್ಮುಂದೆ ಆ್ಯಪಲ್ ಸಂಸ್ಥೆಯ ಪ್ರಾಡೆಕ್ಟ್‌ಗಳ ಖರೀದಿಗೆ ಗ್ರಾಹಕರು ದೆಹಲಿ, ಮುಂಬೈಗೆ ಹೋಗಬೇಕಿಲ್ಲ. ಬೆಂಗಳೂರಿನ ಹೆಬ್ಬಾಳದ ಆ್ಯಪಲ್ ಸ್ಟೋರ್‌ಗೆ ಭೇಟಿ ನೀಡಿದರೆ ಎಲ್ಲ ಪ್ರಾಡೆಕ್ಟ್ ಒಂದೇ ಸೂರಿನಡಿ ದೊರೆಯಲಿದೆ.
Apple Store in Bengaluru
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






