ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | NUMBERGALALLI NAMMURU | 6 ಅಕ್ಟೋಬರ್ 2020
ನಂಬರ್ಗಳ ಮೂಲಕ ನಮ್ಮೂರು ಶಿವಮೊಗ್ಗ ಜಿಲ್ಲೆಯ ಹಿರಿಮೆ, ಕುತೂಹಲಕಾರಿ ಸಂಗತಿ ತಿಳಿಸುವ ಪ್ರಯತ್ನವೇ ನಂಬರ್ಗಳಲ್ಲಿ ನಮ್ಮೂರು ಅಂಕಣ ಸರಣಿ.
ನಮ್ಮೂರಿಗೆ ಅತಿ ಹೆಚ್ಚು ಜ್ಞಾನಪೀಠ
ಸಿನಿಮಾ ಜಗತ್ತಿಗೆ ಆಸ್ಕರ್ ಪ್ರಶಸ್ತಿ ಹೇಗೋ ಭಾರತೀಯ ಸಾಹಿತ್ಯ ಪ್ರಪಂಚಕ್ಕೆ ಜ್ಞಾನಪೀಠ. ಸಾಹಿತ್ಯ ಲೋಕದ ಮೇರು ಪ್ರಶಸ್ತಿಗಳಲ್ಲಿ ಒಂದು ಜ್ಞಾನಪೀಠ. ಕನ್ನಡ ಸಾರಸ್ವತ ಲೋಕಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಈ ಪೈಕಿ ಅತಿ ಹೆಚ್ಚು ಜ್ಞಾನಪೀಠ ಪಡೆದಿರುವ ಜಿಲ್ಲೆ ನಮ್ಮದು.
ಶಿವಮೊಗ್ಗಕ್ಕೆ ಅತಿ ಹೆಚ್ಚು ಜ್ಞಾನಪೀಠ
ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಜಿಲ್ಲೆ ನಮ್ಮದು. ಶಿವಮೊಗ್ಗ ಜಿಲ್ಲೆಯ ಇಬ್ಬರು ಸಾಹಿತಿಗಳಿಗೆ ಈ ಪ್ರಶಸ್ತಿ ಸಿಕ್ಕಿದೆ. ರಾಷ್ಟ್ರಕವಿ ಕುವೆಂಪು ಮತ್ತು ಡಾ.ಯು.ಆರ್.ಅನಂತಮೂರ್ತಿ ಅವರಿಗೆ ಜ್ಞಾನಪೀಠ ಲಭಿಸಿದೆ. ಇಬ್ಬರು ಸಾಹಿತಿಗಳು ತೀರ್ಥಹಳ್ಳಿ ತಾಲೂಕಿನವರು ಮತ್ತೊಂದು ವಿಶೇಷ.
ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಿಭಿಸಿದೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲಿಗರು ಕುವೆಂಪು.
ಡಾ.ಯು.ಆರ್.ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯಕ್ಕೆ 1994ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡಕ್ಕೆ ಆರನೆ ಜ್ಞಾನಪೀಠ ತಂದುಕೊಟ್ಟ ಹೆಮ್ಮೆ ಇವರದ್ದು.
ಮತ್ಯಾರಿಗೆಲ್ಲ ಜ್ಞಾನಪೀಠ ಲಭಿಸಿದೆ?
1973ರಲ್ಲಿ ದ.ರಾ.ಬೇಂದ್ರೆ (ಧಾರವಾಡ), 1977ರಲ್ಲಿ ಕೆ.ಶಿವರಾಮ ಕಾರಂತ (ಉಡುಪಿ), 1983ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಕೋಲಾರ), 1990ರಲ್ಲಿ ವಿ.ಕೃ.ಗೋಕಾಕ (ಹಾವೇರಿ), 1998ರಲ್ಲಿ ಗಿರೀಶ್ ಕಾರ್ನಾಡ್ (ಬೆಂಗಳೂರು), 2010ರಲ್ಲಿ ಡಾ.ಚಂದ್ರಶೇಖರ ಕಂಬಾರ (ಬೆಳಗಾವಿ) ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ.
ಏನಿದು ಜ್ಞಾನಪೀಠ?
ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಜ್ಞಾನಪೀಠ. 1961ರಿಂದ ಸಾಹು ಜೈನ್ ಕುಟುಂಬ ಈ ಪ್ರಶಸ್ತಿ ನೀಡುತ್ತಿದ್ದಾರೆ. ಪ್ರಶಸ್ತಿ ವಿಜೇತರಿಗೆ ಒಂದು ಫಲಕ, 11 ಲಕ್ಷ ರೂ. ನಗದು ಮತ್ತು ವಾಗ್ದೇವಿಯ ಕಂಚಿನ ವಿಗ್ರಹ ನೀಡಿ ಗೌರವಿಸಲಾಗುತ್ತದೆ. ಈವರೆಗೆ ಹಿಂದಿ ಭಾಷಗೆ 11 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಎರಡನೇ ಸ್ಥಾನದಲ್ಲಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422