SHIVAMOGGA LIVE NEWS
‘ಥೋ.. ಎಂಥಾ ಕಥೆ ಆಗೊಯ್ತಲ್ಲ..!’ ALERT
ಗಾಢ ನಿದ್ರೆಯಿಂದ ಎಚ್ಚರವಾದ ಸುಶಾಂತ್. ಅಷ್ಟರಲ್ಲಿ ರೈಲು ಕುಂಸಿ ನಿಲ್ದಾಣ ತಲುಪಿರುವುದನ್ನು ಕಂಡು ಗಾಬರಿ, ಗಡಿಬಿಡಿಯಾದ. MYSORE – TALAGUPPA TRAINನಲ್ಲಿ ಪ್ರಯಾಣ ಮಾಡುತ್ತಿದ್ದ ಸುಶಾಂತ್ SHIMOGA RAILWAY STATIONನಲ್ಲಿ ಇಳಿಯಬೇಕಿತ್ತು. ಆದರೆ ಜೋರು ನಿದ್ರೆಯಿಂದಾಗಿ ರೈಲು ಮುಂದೆ ಹೋದ್ಮೇಲೆ ಎಚ್ಚರವಾಗಿದೆ.
![]() |
ರಾತ್ರಿ ಪ್ರಯಾಣದ ವೇಳೆ ಇಂತಹ ಸಮಸ್ಯೆ ಸರ್ವೆ ಸಾಮಾನ್ಯ. ಒಬ್ಬರಲ್ಲ ಒಬ್ಬರು ತಾವು ಇಳಿಯಬೇಕಾದ ನಿಲ್ದಣ ಬಿಟ್ಟು ಮುಂದಿನ ನಿಲ್ದಾಣಕ್ಕೆ ತಲುಪಿದಾಗ ಎಚ್ಚರವಾಗಿರುತ್ತಾರೆ. ಅಲ್ಲಿಂದ ಮನೆಗೆ ಮರಳುವ ಸಾಹಸ ಸಣ್ಣದೇನು ಅಲ್ಲ. ಇದೆ ಕಾರಣಕ್ಕೆ ಕೆಲವರು ರಾತ್ರಿ ಪ್ರಯಾಣದ ವೇಳೆ ಆಗಾಗ ಎದ್ದು ರೈಲು ಎಲ್ಲಿದೆ? ಟೈಮು ಎಷ್ಟಾಗಿದೆ ಎಂದು ಖಚಿತ ಪಡಿಸಿಕೊಳ್ಳುತ್ತಿರುತ್ತಾರೆ. ಇದರಿಂದ ನೆಮ್ಮದಿಯೂ ಹಾಳು, ನಿದ್ರೆಯು ಹಾಳು.
ರೈಲ್ವೆ ಇಲಾಖೆಗೂ ತಲೆಬಿಸಿ
ಪ್ರಯಾಣಿಕರ ‘ಗಾಢ ನಿದ್ರೆ’ ರೈಲ್ವೆ ಇಲಾಖೆ ಸಿಬ್ಬಂದಿಗೂ ತಲೆನೋವು ತಂದೊಡ್ಡಿದೆ. ಟಿಕೆಟ್’ನಲ್ಲಿ ಇರುವ ನಿಲ್ದಾಣ ಬಿಟ್ಟು, ಮುಂದಿನ ನಿಲ್ದಾಣದಲ್ಲಿ ಇಳಿಯುವವರಿಗೆ ದಂಡ ವಿಧಿಸಬೇಕಾಗದ ಅನಿವಾರ್ಯತೆ ರೈಲ್ವೆ ಸಿಬ್ಬಂದಿಗೆ ಎದುರಾಗುತ್ತದೆ. ಆಗ ಕೆಲವರ ಬಳಿ ಹಣವಿರಲ್ಲ. ದುಡ್ಡಿದ್ದರೂ ಅದು ಮುಂದಿನ ಪ್ರಯಾಣಕ್ಕಷ್ಟೆ ಇರುತ್ತದೆ. ಇಂತಹ ಸಮಸ್ಯೆಗೆಲ್ಲ ಮುಕ್ತಿ ನೀಡಲು, ರೈಲ್ವೆ ಇಲಾಖೆ ಹೊಸ ಐಡಿಯಾ ಕಂಡುಕೊಂಡಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ತಾಳಗುಪ್ಪ – ಬೆಂಗಳೂರು ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ, ಮಗ ಸಾವು
ವೇಕ್ ಅಪ್ ಕಾಲ್
ಪ್ರಯಾಣಿಕರನ್ನು ಎಚ್ಚರಿಸಲು INDIAN RAILWAY ವತಿಯಿಂದ DESTINATION ALERT FACILITY ಆರಂಭಿಸಲಾಗಿದೆ. ರಾತ್ರಿ ಪ್ರಯಾಣಿಕರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗಿದೆ. ರೈಲು ನಿಲ್ದಾಣ ತಲುಪುವ 20 ನಿಮಿಷ ಮೊದಲು ರೈಲ್ವೆ ಇಲಾಖೆಯಿಂದಲೇ ಪ್ರಯಾಣಿಕರಿಗೆ ಕರೆ ಬರುತ್ತದೆ. ಪ್ರಯಾಣಿಕರು ಎಚ್ಚರವಾಗಿ, ತಮ್ಮ ಲಗೇಜು ಸಿದ್ಧಪಡಿಸಿಕೊಂಡು ಬಾಗಿಲ ಬಳಿ ಬರಲು ಅನುಕೂಲವಾಗಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಅನಾಹುತ ತಪ್ಪಿಸಿದ ಮೈಸೂರು – ತಾಳಗುಪ್ಪ ರೈಲು ಸಿಬ್ಬಂದಿಗೆ ಸನ್ಮಾನ, ಏನಾಗಿತ್ತು?
ಈ ಅಲರ್ಟ್ ಬಳಸುವುದು ಹೇಗೆ?
DESTINATION ALERT FACILITY ಬಳಸುವುದು ತುಂಬಾನೆ ಸುಲಭ. RAILWAY ENQUIRY SERVICE NUMBER 139ಗೆ ಕರೆ ಮಾಡಿ DESTINATION ALERT FACILITY ಬಳಕೆ ಮಾಡಿಕೊಳ್ಳಬಹುದು. TICKET RESERVE ಮಾಡಿಸಿದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. 139ಗೆ ಕರೆ ಮಾಡಿ ಟಿಕೆಟ್ PNR NUMBER ನಮೂದಿಸಿ ಸೌಲಭ್ಯ ಬಳಕೆ ಮಾಡಿಕೊಳ್ಳಬಹುದಾಗಿದೆ.
ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಸಮಸ್ಯೆ ಆಗದಿರಲಿ ಎಂದು ಈ ಸೌಲಭ್ಯ ಆರಂಭಿಸಲಾಗಿದೆ. ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗಿ ಈ ಸೌಲಭ್ಯ ಪಡೆಯಬೇಕಾಗಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದ ಒಂದು ರೈಲು ಸೇರಿ ರಾಜ್ಯದ 5 ರೈಲುಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಳ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200