ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಬದಲು, ಹೊಸ ಟೈಮ್‌ಟೇಬಲ್‌ ಏನು? ಯಾವಾಗ ಜಾರಿ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರೈಲ್ವೆ ಸುದ್ದಿ: ತಾಳಗುಪ್ಪ – ಮೈಸೂರು ರೈಲಿನ ವೇಳಾಪಟ್ಟಿ (Timetable) ಬದಲಾಗಿದೆ. ನವೆಂಬರ್‌ 2ರಿಂದ ಹೊಸ ಟೈಮ್‌ಟೇಬಲ್‌ನಂತೆ ರೈಲು ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16221) ಈಗ ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಟು ಮಧಾಹ್ನ 3.35ಕ್ಕೆ ಮೈಸೂರು ತಲುಪುತ್ತಿದೆ. ನವೆಂಬರ್‌ 2ರಿಂದ ಈ ರೈಲು ಬೆಳಗ್ಗೆ 5.50ಕ್ಕೆ ತಾಳಗುಪ್ಪದಿಂದ ಹೊರಟು ಮಧ್ಯಾಹ್ನ 3.30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.

ಹೊಸ ಮತ್ತು ಹಳೆಯ ಟೈಮಿಂಗ್‌ ಇಲ್ಲಿದೆ

Train-Jan-Shatabdi-General-Image

ಕುವೆಂಪು ಎಕ್ಸ್‌ಪ್ರೆಸ್‌ ರೈಲು ಸಂಚರಿಸುವ ಮಾರ್ಗದ ಪ್ರಮುಖ ನಿಲ್ದಾಣಗಳ ಹೊಸ ಮತ್ತು ಹಳೆಯ ಟೈಮಿಂಗ್‌ ಇಲ್ಲಿದೆ. ಇದು ಹೊರಡುವ ಸಮಯ.

ನಿಲ್ದಾಣಈಗಿನ ಟೈಮಿಂಗ್‌ಹೊಸ ಟೈಮ್‌ಟೇಬಲ್‌
ತಾಳಗುಪ್ಪಬೆಳಗ್ಗೆ 6.15ಬೆಳಗ್ಗೆ 5.50
ಸಾಗರ ಜಂಬಗಾರುಬೆಳಗ್ಗೆ 6.35ಬೆಳಗ್ಗೆ 6.10
ಶಿವಮೊಗ್ಗಬೆಳಗ್ಗೆ 8.20ಬೆಳಗ್ಗೆ 7.55
ಭದ್ರಾವತಿಬೆಳಗ್ಗೆ 8.45ಬೆಳಗ್ಗೆ 8.20
ತರೀಕೆರೆಬೆಳಗ್ಗೆ 9.15ಬೆಳಗ್ಗೆ 8.43
ಬೀರೂರುಬೆಳಗ್ಗೆ 10.20ಬೆಳಗ್ಗೆ 9.35
ಅರಸೀಕೆರೆಬೆಳಗ್ಗೆ 11.20ಬೆಳಗ್ಗೆ 10.50
ಹಾಸನಮಧ್ಯಾಹ್ನ 12.30ಬೆಳಗ್ಗೆ 11.47
ಹೊಳೆನರಸೀಪುರಮಧ್ಯಾಹ್ನ 1.10ಮಧ್ಯಾಹ್ನ 12.27
ಮೈಸೂರುಮಧ್ಯಾಹ್ನ 3.35ಮಧ್ಯಾಹ್ನ 3.30

ಸಂಸದ ರಾಘವೇಂದ್ರ ಮನವಿಗೆ ಸ್ಪಂದನೆ

BY-Raghavendra-meets-Minister-V-Somanna-at-Delhi Discuss about mysore train

ಕುವೆಂಪು ಎಕ್ಸ್‌ಪ್ರೆಸ್‌ ರೈಲು ತಾಳಗುಪ್ಪದಿಂದ ಸ್ವಲ್ಪ ಮುಂಚಿತವಾಗಿ ಹೊರಟರೆ ಬೆಂಗಳೂರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಅವರು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಜುಲೈ 24ರಂದು ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ » ಶಿವಮೊಗ್ಗದ ರೈಲ್ವೆ ಪ್ರಯಾಣಿಕರೆ ಗಮನಿಸಿ, ಕೆಲವು ರೈಲು ರದ್ದಾಗಿವೆ, ಕೆಲವು ತಡವಾಗಿ ಚಲಿಸಲಿವೆ, ಇಲ್ಲಿದೆ ಲಿಸ್ಟ್‌

ಸಿದ್ದಗಂಗಾ ಎಕ್ಸ್‌ಪ್ರೆಸ್‌ ಮತ್ತು ಪುದುಚೇರಿ ಎಕ್ಸ್‌ಪ್ರೆಸ್‌ ರೈಲುಗಳು ಬೀರೂರಿಗೆ ಬೆಳಗ್ಗೆ 9.50ರ ಹೊತ್ತಿಗೆ ತಲುಪುತ್ತವೆ. ಇವುಗಳಿಗಿಂತಲು ಮುಂಚೆ ಕುವೆಂಪು ಎಕ್ಸ್‌ಪ್ರೆಸ್ ರೈಲು‌ ಅಲ್ಲಿಗೆ ತಲುಪಿದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಕುವೆಂಪು ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 10.20ಕ್ಕೆ ಬೀರೂರು ತಲುಪುತ್ತಿದೆ. ಈ ರೈಲು ಬೆಳಗ್ಗೆ 9.35 ಅಥವಾ ಬೆಳಗ್ಗೆ 9.40ಕ್ಕೆ ಬೀರೂರು ತಲುಪಿದರೆ ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಮನವಿ ಮಾಡಿಕೊಂಡಿದ್ದರು.

ಈ ಬದಲಾವಣೆ ಬೆಂಗಳೂರಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

– ಬಿ.ವೈ.ರಾಘವೇಂದ್ರ, ಸಂಸದ

RED-LINE-

ಸಂಸದ ರಾಘವೇಂದ್ರ ಅವರ ಮನವಿಗೆ ಸ್ಪಂದಿಸದ ರೈಲ್ವೆ ಇಲಾಖೆ ಕುವೆಂಪು ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಿಸಿದೆ.

Talaguppa Mysore Kuvempu Express Timetable changed

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment