ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
KSRTC ಸುದ್ದಿ: ಇನ್ಮುಂದೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಯದ್ವತದ್ವ ಲಗೇಜ್ ಕೊಂಡೊಯ್ಯಲು ಅವಕಾಶವಿಲ್ಲ. KSRTCಯು ಲಗೇಜ್ ನೀತಿ ಜಾರಿಗೊಳಿಸಿದೆ. ನಿಗದಿತ ತೂಕಕ್ಕಿಂತಲು ಹೆಚ್ಚಿನ ಭಾರದ ಲಗೇಜ್ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ » ಫೋನ್ ಪೇಯಲ್ಲಿ ಕರೆಂಟ್ ಬಿಲ್ ಕಟ್ಟಿದ ಶಿವಮೊಗ್ಗದ ವಕ್ತಿಗೆ ಸ್ವಲ್ಪ ಹೊತ್ತಿಗೆ ಕಾದಿತ್ತು ಶಾಕ್
ವಿಮಾನ ಮತ್ತು ರೈಲುಗಳಲ್ಲಿ ಲಗೇಜ್ ನೀತಿ ಇದೆ. ನಿಗದಿಗಿಂತಲು ಹೆಚ್ಚಿನ ತೂಕದ ಲಗೇಜ್ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಇದೇ ಮಾದರಿಯಲ್ಲಿ ಇನ್ಮುಂದೆ KSRTC ಬಸ್ಸುಗಳಲ್ಲಿಯು ಲಗೇಜ್ ನೀತಿ ಪಾಲಿಸಬೇಕಾಗುತ್ತದೆ.
ಏನೇನೆಲ್ಲ ಕೊಂಡೊಯ್ಯಬಹುದು?
ಲಗೇಜ್ ನೀತಿ ಅನ್ವಯ ಪ್ರಯಾಣಿಕರು ಇನ್ಮುಂದೆ ಹಲವು ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿದೆ. ವೈಯಕ್ತಿಕ ಲಗೇಜು ಮಾತ್ರವಲ್ಲದೆ ಫ್ರಿಡ್ಜ್, ವಾಷಿಂಗ್ ಮೆಷಿನ್, ಕಬ್ಬಿಣದ ಪೈಪ್, ಟೈರ್‌ಗಳು, ಪ್ರಾಣಿ – ಪಕ್ಷಿಗಳನ್ನು ಕೂಡ ಸಾಗಿಸಬಹುದು. ಪ್ರಾಣ – ಪಕ್ಷಿಗಳನ್ನು ಸುರಕ್ಷಿತವಾದ ಪೆಟ್ಟಿಗೆ ಅಥವಾ ಕೇಜ್‌ನಲ್ಲಿ ಕೊಂಡೊಯ್ಯಬೇಕು.
ಉಚಿತ ಲಗೇಜ್‌ಗೆ ತೂಕ ನಿಗದಿ
ಇನ್ನು, ಉಚಿತವಾಗಿ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. ಆದರೆ ಅದಕ್ಕು ಮಿತಿ ಇರಲಿದೆ. ವಯಸ್ಕರು 30 ಕೆ.ಜಿ. ತೂಕದ ಲಗೇಜ್, ಮಕ್ಕಳು 15 ಕೆ.ಜಿ. ತೂಕದವರೆಗೆ ಉಚಿತವಾಗಿ ಲಗೇಜ್ ಕೊಂಡೊಯ್ಯಬಹುದು. ಬಟ್ಟೆ, ಪುಸ್ತಕಗಳು, ಅಗತ್ಯ ಆಹಾರ ಮತ್ತು ಇತರೆ ವಯಕ್ತಿಕ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ.

ಒಂದು ವೇಳೆ ನಿಗದಿತ ತೂಕಕ್ಕಿಂತಲು ಹೆಚ್ಚಿನ ಭಾರದ ಲಗೇಜ್ ಇದ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ತೂಕಕ್ಕೆ ತಕ್ಕ ಹಾಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
LATEST NEWS
- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು















