ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAILWAY NEWS, 18 OCTOBER 2024 : ರೈಲುಗಳಲ್ಲಿ ಮುಂಗಡ ಟಿಕೆಟ್ (Ticket) ಖರೀದಿಯ ಅವಧಿ ಕಡಿತಗೊಳಿಸಿದೆ. ಈವರೆಗೂ 120 ದಿನ ಮೊದಲು ಟಿಕೆಟ್ ಬುಕ್ ಮಾಡಬಹುದಾಗಿತ್ತು. ಸದ್ಯ ಈ ಅವಧಿಯನ್ನು ಕಡಿತಗೊಳಿಸಲಾಗಿದೆ. ಇನ್ಮುಂದೆ 60 ದಿನ ಮುಂಗಡವಾಗಿ ಮಾತ್ರ ಟಿಕೆಟ್ ರಿಸರ್ವ್ ಮಾಡಿಕೊಳ್ಳಬಹುದಾಗಿದೆ.
ನವೆಂಬರ್ 1ರಿಂದ ಟಿಕೆಟ್ ಕಾಯ್ದಿರಿಸುವ ಹೊಸ ನಿಯಮ ಜಾರಿಗೆ ಬರಲಿದೆ. ಟಿಕೆಟ್ ಬ್ಲಾಕ್ ದಂಧೆಗೆ ಕಡಿವಾಣ ಹಾಕಲು, ಎಲ್ಲ ಪ್ರಯಾಣಿಕರಿಗು ಸೀಟ್ ದೊರೆಯುವಂತೆ ಮಾಡಲು ಈ ಕ್ರಮ ಕೈಗೊಳಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
2015ರ ಏಪ್ರಿಲ್‌ನಿಂದ ಈವರೆಗೂ 120 ದಿನ ಮುಂಗಡವಾಗಿ ಟಿಕೆಟ್ ಖರೀದಿಸಬಹುದಾಗಿತ್ತು. ನವೆಂಬರ್ 1ರಿಂದ ಈ ನಿಯಮ ಬದಲಾವಣೆಯಾಗಲಿದೆ. ಈ ಹಿಂದೆಯೂ ಹಲವು ಬಾರಿ ಟಿಕೆಟ್ ಬುಕಿಂಗ್ ಅವಧಿ ಮಾರ್ಪಾಡು ಮಾಡಲಾಗಿದೆ. ಮೊದಲಿಗೆ 120 ದಿನ, ಆಮೇಲೆ 90 ದಿನ, 60 ದಿನ, 30 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶವಿತ್ತು. ವಿವಿಧ ಸಂದರ್ಭ ಮುಂಗಡ ಟಿಕೆಟ್ ಖರೀದಿಯ ಅವಧಿ ಬದಲಾವಣೆ ಮಾಡಲಾಗುತ್ತಿದೆ.ಹಲವು ಬಾರಿ ಅವಧಿ ಮಾರ್ಪಾಡು
ಇದನ್ನೂ ಓದಿ » ವಂದೇ ಭಾರತ್ ರೈಲು, ಬೋಗಿಯಲ್ಲೇ ಅಡುಗೆ ಮನೆ, ಸ್ನಾನಕ್ಕೆ ಬಿಸಿ ನೀರು, ಇನ್ನೂ ಏನೆಲ್ಲ ಸೌಲಭ್ಯವಿದೆ?
ಅವಧಿ ಕಡಿತಕ್ಕೆ ಕಾರಣವೇನು?
ಹೆಚ್ಚಿದ ಟಿಕೆಟ್ ರದ್ದು ಪ್ರಕರಣಗಳು, ರೈಲ್ವೆ ಬರ್ತ್‌ಗಳು ವ್ಯರ್ಥ ಆಗುವುದು, ಮಧ್ಯವರ್ತಿಗಳಿಂದ ಸೀಟ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಂಡಿರುವುದಾಗಿ ರೈಲ್ವೆ ಮಂಡಳಿ ಹೇಳಿದೆ. ಇದರಿಂದ ಟಿಕೆಟ್ ದೃಢೀಕರಣ ಪ್ರಮಾಣ ಹೆಚ್ಚಾಗಲಿದೆ.
ಇದನ್ನೂ ಓದಿ » ಮಲೆನಾಡಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು, ಸತ್ಯಾಗ್ರಹಕ್ಕೆ ದಿನಾಂಕ ಫಿಕ್ಸ್
ಮುಂಗಡ ಟಿಕೆಟ್ ಬುಕಿಂಗ್‌ಗೆ 120 ದಿನಗಳ ಕಾಲಾವಕಾಶವು ತೀರಾ ಸುದೀರ್ಘ ಸಮಯವಾಗಲಿದೆ. ಪ್ರಯಾಣಿಕರು ಈ ಅವಧಿಯಲ್ಲಿ ತಮ್ಮ ಪ್ರಯಾಣ ಯೋಜನೆ ಬದಲಾಯಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿಯೇ ಟಿಕೆಟ್ ರದ್ದು ಪ್ರಕರಣಗಳು ಹೆಚ್ಚಾಗಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422