ರೈಲ್ವೆ ಸುದ್ದಿ: ಕೆಲವೇ ದಿನದಲ್ಲಿ ನಾಡಹಬ್ಬ ದಸರಾಗೆ ಚಾಲನೆ ಸಿಗಲಿದೆ. ಮೈಸೂರನಲ್ಲಿ ನವರಾತ್ರಿ ಕಣ್ತುಂಬಿಕೊಳ್ಳುವ ಸಂಭ್ರಮೆ ವಿಭಿನ್ನ ಅನುಭವ. ಶಿವಮೊಗ್ಗ ಜಿಲ್ಲೆಯಿಂದ ಮೈಸೂರಿಗೆ ಪ್ರತಿದಿನ ಓಡಾಡಲು ರೈಲುಗಳ (Trains) ವ್ಯವಸ್ಥೆ ಇದೆ. ಶಿವಮೊಗ್ಗದಿಂದ ಮೈಸೂರಿಗೆ ಎಷ್ಟು ರೈಲುಗಳಿವೆ? ಟೈಮಿಂಗ್ ಏನು? ಇಲ್ಲಿದೆ ಡಿಟೇಲ್ಸ್
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಯಾವ್ಯಾವ ರೈಲು ಯಾವಾಗ ಹೊರಡುತ್ತವೆ?
♦ ಕುವೆಂಪು ಎಕ್ಸ್‌ಪ್ರೆಸ್ : ತಾಳಗುಪ್ಪದಿಂದ ಬೆಳಗ್ಗೆ 6.15ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಬೆಳಗ್ಗೆ 8.20ಕ್ಕೆ ಹೊರಡಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ. ವಾರದ ಎಲ್ಲ ದಿನವು ಈ ರೈಲು ಸಂಚರಿಸಲಿದೆ.
♦ ಶಿವಮೊಗ್ಗ – ಮೈಸೂರು ಎಕ್ಸ್‌ಪ್ರೆಸ್ : ಬೆಳಗ್ಗೆ 11.15ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡಲಿದೆ. ಸಂಜೆ 5.05ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ. ವಾರದ ಎಲ್ಲ ದಿನವು ಈ ರೈಲು ಸಂಚರಿಸಲಿದೆ.

♦ ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ : ತಾಳಗುಪ್ಪದಿಂದ ಮಧ್ಯಾಹ್ನ 2.50ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಸಂಜೆ 4.50ಕ್ಕೆ ಹೊರಡಲಿದೆ. ರಾತ್ರಿ 10.30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ. ವಾರದ ಎಲ್ಲ ದಿನವು ಈ ರೈಲು ಸಂಚರಿಸಲಿದೆ.
♦ ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ : ತಾಳಗುಪ್ಪದಿಂದ ರಾತ್ರಿ 8.55ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ 11 ಗಂಟೆಗೆ ಹೊರಡಲಿದೆ. ಬೆಳಗ್ಗೆ 4.50ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.
ಇದನ್ನೂ ಓದಿ » ರಾಗಿಗುಡ್ಡ ESI ಆಸ್ಪತ್ರೆಗೆ ಕೇಂದ್ರ ಸಚಿವೆ ಭೇಟಿ, ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಹಾಕುವ ಎಚ್ಚರಿಕೆ

Shimoga to mysore Trains timetable
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





