ಮೈಸೂರು – ತಾಳಗುಪ್ಪ ಸೇರಿ ರಾಜ್ಯದ ವಿವಿಧೆಡೆಗೆ ಚುನಾವಣೆಗಾಗಿ ವಿಶೇಷ ರೈಲು, ಟೈಮಿಂಗ್‌ ಏನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 MAY 2024

RAILWAY NEWS : ಮೇ 7ರಂದು ರಾಜ್ಯದಲ್ಲಿ ಲೋಕಸಭೆಯ ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ರೈಲ್ವೆ ಇಲಾಖೆ ವಿಶೇಷ ರೈಲು ಒದಗಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರು – ತಾಳಗುಪ್ಪ ವಿಶೇಷ ರೈಲು

ಮೈಸೂರು – ತಾಳಗುಪ್ಪ – ಮೈಸೂರು ವಿಶೇಷ ರೈಲು. ಏ.6ರಂದು ರಾತ್ರಿ 9.30ಕ್ಕೆ ಮೈಸೂರಿನಿಂದ ಹೊರಟು ಏ.7ರಂದು ಬೆಳಗ್ಗೆ 9ಕ್ಕೆ  ತಾಳಗುಪ್ಪ ತಲುಪಲಿದೆ. ಏ.7ರಂದು ಸಂಜೆ 6.30ಕ್ಕೆ ಹೊರಟು ಏ.8ರಂದು ಬೆಳಗ್ಗೆ 4 ಗಂಟೆಗೆ ಮೈಸೂರು ತಲುಪಲಿದೆ. ಈ ರೈಲು ಬೆಂಗಳೂರು, ತುಮಕೂರು, ಬೀರೂರು ಮಾರ್ಗದಲ್ಲಿ ಸಂಚರಿಸಲಿದೆ.

ರಾಜ್ಯದ ವಿವಿಧೆಡೆ ವಿಶೇಷ ರೈಲು

ಬೆಂಗಳೂರು – ವಿಜಯಪುರ – ಬೆಂಗಳೂರು – ಮೇ.6ರಂದು ಸಂಜೆ 7ಕ್ಕೆ ಹೊರಟು ಮೇ.7ರಂದು ಬೆಳಗ್ಗೆ 10.30ಕ್ಕೆ ವಿಜಯಪುರ ತಲುಪಲಿದೆ. ಮೇ.7ರಂದು ಸಂಜೆ 7ಕ್ಕೆ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಬೆಂಗಳೂರು ತಲುಪಲಿದೆ.

ಯಶವಂತಪುರ – ಬೀದರ್‌ – ಯಶವಂತಪುರ – ಮೇ.6ರಂದು ರಾತ್ರಿ 11ಕ್ಕೆ ಯಶವಂತಪುರದಿಂದ ಹೊರಟು ಮೇ.7ರಂದು ಮಧ್ಯಾಹ್ನ 12ಕ್ಕೆ ಬೀದರ್ ತಲುಪಲಿದೆ. ಮೇ.7ರಂದು ಮಧ್ಯಾಹ್ನ 2.10ಕ್ಕೆ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ಯಶವಂತಪುರ ತಲುಪಲಿದೆ.

ಯಶವಂತಪುರ – ವಿಜಯನಗರ – ಯಶವಂತಪುರ : ಮೇ.6ರಂದು ರಾತ್ರಿ 9.55ಕ್ಕೆ ಹೊರಟು ಮೇ.7ರಂದು ಬೆಳಗ್ಗೆ 10.30ಕ್ಕೆ ವಿಜಯನಗರ ತಲುಪಲಿದೆ. ಮೇ.7ರಂದು ಸಂಜೆ 4.30ಕ್ಕೆ ಹೊರಟು ಮರುದಿನ ಬೆಳಗ್ಗೆ 5.25ಕ್ಕೆ ಯಶವಂತಪುರ ತಲುಪಲಿದೆ.

ಬೆಳಗಾವಿ – ಯಶವಂತಪುರ : ಮೇ.6ರಂದು ಬೆಳಗ್ಗೆ 8ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 8 ಗಂಟೆಗೆ ಯಶವಂತಪುರ ತಲುಪಲಿದೆ.

ಬೆಳಗಾವಿ – ಮೈಸೂರು : ಮೇ.6ರಂದು ಬೆಳಗ್ಗೆ 8.45ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 8.15ಕ್ಕೆ ಮೈಸೂರು ತಲುಪಲಿದೆ.

ಮೈಸೂರು – ಕಾರವಾರ : ಮೇ.3 ಮತ್ತು ಮೇ.6 ರಾತ್ರಿ 8.15ಕ್ಕೆ ಮೈಸೂರಿನಿಂದ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಕಾರವಾರ ತಲುಪಲಿದೆ.

ಕಾರವಾರ – ಮೈಸೂರು : ಮೇ.4 ಮತ್ತು ಮೇ.7 ರಾತ್ರಿ 10ಕ್ಕೆ ಕಾರವಾರದಿಂದ ಹೊರಟು ಮರುದಿನ ಸಂಜೆ 6.25 ಗಂಟೆಗೆ ಕಾರವಾರ ತಲುಪಲಿದೆ.

ಇದನ್ನೂ ಓದಿ – ಅಡಿಕೆ ಧಾರಣೆ | 2 ಮೇ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment