ವಂದೇ ಭಾರತ್‌ ರೈಲು, ಬೋಗಿಯಲ್ಲೇ ಅಡುಗೆ ಮನೆ, ಸ್ನಾನಕ್ಕೆ ಬಿಸಿ ನೀರು, ಇನ್ನೂ ಏನೆಲ್ಲ ಸೌಲಭ್ಯವಿದೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

RAILWAY NEWS, 3 SEPTEMBER 2024 : ಭಾರತದ ರೈಲ್ವೆಯಲ್ಲಿ ವ್ಯವಸ್ಥೆಯಲ್ಲಿ ವಂದೇ ಭಾರತ್‌ ರೈಲುಗಳು ಹೊಸ ಶಖೆ ಅರಂಭಿಸಿವೆ. ಈವರೆಗೂ ಕುಳಿತು ಪ್ರಯಾಣಿಸುವ ವಂದೇ ಭಾರತ್‌ ರೈಲುಗಳು ಮಾತ್ರ ಇದ್ದವು. ಈಗ ಸ್ಲೀಪರ್‌ ಕೋಚ್‌ (Sleeper Coach) ವಂದೇ ಭಾರತ್‌ ರೈಲುಗಳು ಹಳಿಗೆ ಇಳಿಯಲು ಸಜ್ಜಾಗಿವೆ.

ಬೆಂಗಳೂರಿನಲ್ಲಿರುವ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ನಲ್ಲಿ (ಬಿಇಎಂಎಲ್‌) ಎರಡು ಮೂಲ ಮಾದರಿ (ಪ್ರೋಟೊಟೈಪ್‌‌) ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ವಿನ್ಯಾಸಗೊಳಿಸಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ಅನಾವರಣಗೊಳಿಸಿದ್ದಾರೆ.

» ಈ ರೈಲಿನ ವಿಶೇಷತೆಗಳೇನು?

ವಂದೇ ಭಾರತ್‌ ರೈಲುಗಳು ಈಗಾಗಲೇ ದೇಶಾದ್ಯಂತ ಪ್ರಯಾಣಿಕರನ್ನು ಆಕರ್ಷಿಸಿದೆ. ವಿವಿಧೆಡೆ ವಂದೇ ಭಾರತ್‌ ರೈಲಿಗೆ ಡಿಮಾಂಡ್‌ ಹೆಚ್ಚಾಗಿದೆ. ಈ ಮಧ್ಯೆ 800 ರಿಂದ 1000 ಕಿ.ಮೀ ದೂರವನ್ನು ಒಂದೇ ರಾತ್ರಿಯಲ್ಲಿ ಕ್ರಮಿಸಲು ಅನುಕೂಲವಾಗುವ ಸ್ಥಳಗಳಿಗೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ಓಡಿಸಲು ಯೋಜಿಸಲಾಗಿದೆ. ಅದಕ್ಕಾಗಿ ವಿಶೇಷ ವಿನ್ಯಾಸ, ವಿನೂತನ ಸೌಲಭ್ಯವುಗಳ ಸ್ಲೀಪರ್‌ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ.

vande bharat sleeper coach

ಬೋಗಿಗಳ ಸಂಖ್ಯೆ : ವಂದೇ ಭಾರತ್‌ ಸ್ಲೀಪರ್‌ ರೈಲು ಒಟ್ಟು 16 ಬೋಗಿಗಳು, 823 ಆಸನಗಳನ್ನು ಹೊಂದಿದೆ. ಈ ಪೈಕಿ ಎಸಿ 3 ಟೈರ್‌ನ 11 ಬೋಗಿಗಳು. ಅದರಲ್ಲಿ ಒಟ್ಟು 611 ಆಸನಗಳಿವೆ. ಎಸಿ 2 ಟೈರ್‌ನ 4 ಬೋಗಿಗಳಲ್ಲಿ ಒಟ್ಟು 188 ಆಸನ. ಒಂದು ಮೊದಲ ದರ್ಜೆ ಎಸಿ ಬೋಗಿ ಒಟ್ಟು 24 ಪ್ರಯಾಣಿಕರು ಪ್ರಯಾಣಿಸಬಹುದು.

vande bharat sleeper coach

ಏರೋಡೈನಾಮಿಕ್‌, ಹೊರ, ಒಳ ವಿನ್ಯಾಸ : ವೇಗವಾಗಿ ಚಲಿಸಲು ಅನುಕೂಲವಾಗುವಂತೆ ಏರೋ ಡೈನಾಮಿಕ್‌ ಬಾಹ್ಯ ನೋಟ ಹೊಂದಿದೆ. ಇನ್ನು, ಆಕರ್ಷಕ ಹೊರಾಂಗಣ ವಿನ್ಯಾಸದ ಜೊತೆಗೆ ಒಳ ವಿನ್ಯಾಸವು ಕಣ್ಮನ ಸೆಳೆಯುತ್ತದೆ.

ಆರಾಮದಾಯಕ ಮಂಚ : ನಿದ್ರಿಸಲು ಆರಾಮದಾಯ ಮಂಚ, ವಿಶೇಷ ಚೇತನರಿಗೆ ವಿಶೇಷ ಆಸನ ಹೊಂದಿದೆ. ಬೋಗಿಯ ಪ್ರವೇಶಕ್ಕೆ ಸ್ವಯಂ ಚಾಲಿತ ಬಾಗಿಲುಗಳಿವೆ. ಬೋಗಿಗಳ ಮಧ್ಯೆ ಸೆನ್ಸರ್‌ ಆಧಾರಿತ ಬಾಗಿಲುಗಳನ್ನು ಅಳವಡಿಸಲಾಗಿದೆ. USB ಚಾರ್ಜಿಂಗ್‌ ಪಾಯಿಂಟ್‌, ರೀಡಿಂಗ್‌ ಲೈಟ್‌ ಇದೆ. ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ ಮಾಡಲಾಗಿದೆ. ಲಗೇಜ್‌ ಇರಿಸಲು ವಿಶಾಲ ಸ್ಥಳಾವಕಾಶ ಮಾಡಲಾಗಿದೆ.

vande bharat sleeper coach

ಅಡುಗೆ ಮನೆ : ಅಡುಗೆ ಸಿದ್ಧಪಡಿಸಲು ವಿಶೇಷ ಕೋಣೆಯಿದೆ. ಇಲ್ಲಿ ಓವೆನ್‌, ಫ್ರಿಡ್ಜ್‌, ನೀರು ಕಾಯಿಸುವ ವ್ಯವಸ್ಥೆ ಇದೆ. ತ್ಯಾಜ್ಯದ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ.

» ಸ್ನಾನಕ್ಕೆ ಬಿಸಿ ನೀರು : ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ ಇದೆ. ವಿಶೇಷ ಚೇತನರಿಗು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರಥಮ ದರ್ಜೆ ಎಸಿ ಕೋಚ್‌ ಬೋಗಿಯಲ್ಲಿ ಸ್ನಾನಕ್ಕೆ ಬಿಸಿ ನೀರಿನ ಬರಲಿದೆ. ರೈಲು ಚಾಲಕನ ಸಿಬ್ಬಂದಿಗು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರಿಗೆ ಯಾವಾಗ ಲಭ್ಯ?

ವಂದೇ ಭಾರತ ಸ್ಲೀಪರ್‌ ಕೋಚ್‌ ರೈಲು ಸಿದ್ಧವಾಗಿದೆ. ಇದನ್ನು ಹತ್ತು ದಿನ ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ಬಳಿಕ ವಿವಿಧೆಡೆಗೆ ಪ್ರಯೋಗಿಕ ಸಂಚಾರ ಮಾಡಲಿದೆ. ಮೂರು ತಿಂಗಳ ನಂತರ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಇದನ್ನೂ ಓದಿ » ಸೆಪ್ಟೆಂಬರ್‌ ತಿಂಗಳು, ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳಿಗೆ ರಜೆ, ಕಾರಣವೇನು?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment