SHIVAMOGGA LIVE NEWS | 15 NOVEMBER 2023
SMART PHONE NEWS | ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ, ವಿನೂತನ ಅಪ್‌ಡೇಟ್‌ಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿ ಲಭ್ಯ.
ಲಾಂಚ್ ಆಯ್ತು VIVO X100 ಸೀರಿಸ್
ಚೀನಾ ದೇಶದಲ್ಲಿ VIVO X100 ಮತ್ತು VIVO X100 PRO ಸ್ಮಾರ್ಟ್ ಫೋನ್‌ಗಳು ಲಾಂಚ್ ಆಗಿವೆ. ಈ ಸ್ಮಾರ್ಟ್ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್ ಹೊಂದಿವೆ. 100mm ಜೂಮ್ ಲೆನ್ಸ್‌ನ ಕ್ಯಾಮರಾ ಇದೆ. 4.3x ಆಪ್ಟಿಕಲ್ ಜೂಮ್ ಮತ್ತು 100x ಡಿಜಿಟಲ್ ಜೂಮ್ ಸೌಲಭ್ಯ ಇದರಲ್ಲಿದೆ. ಅತ್ಯಾಧುನಿಕ ಟೆಕ್ನಾಲಜಿಯೊಂದಿಗೆ ವಿವೋ ಈ ಸೀರಿಸ್ ಸ್ಮಾರ್ಟ್ ಫೋನ್‌ಗಳನ್ನು ರಿಲೀಸ್ ಮಾಡಿದೆ. ಮೊಬೈಲ್ ದುನಿಯಾದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ – GOOD NEWS | ಕೃಷಿ, ತೋಟಗಾರಿಕೆ ವಿವಿಯಲ್ಲಿನ ಬ್ಯಾಡಗಿ ಮೆಣಸಿನಕಾಯಿಯ ಸಂಶೋಧನೆಗೆ ಪೇಟೆಂಟ್
30 ಸ್ಯಾಮ್‌ಸಂಗ್ ಫೋನ್‌ಗಳಿಗೆ OneUI 6 ಅಪ್ಡೇಟ್
Samsung ಸಂಸ್ಥೆ 30 ಬಗೆಯ ಮೊಬೈಲ್‌ಗಳಿಗೆ ಇನ್ನು ಐದು ವಾರದೊಳಗೆ ಹೊಸ ಅಪ್‌ಡೇಟ್ ಬಿಡುಗಡೆಯಾಗಲಿದೆ. OneUI 6 ಅಪ್ಡೇಟ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ. ಈಗಾಗಲೇ ಮಾರಾಟವಾಗುತ್ತಿರುವ Samsung S23 ಸೀರಿಸ್ ಮೊಬೈಲ್‌ಗಳು ಈ ಹೊಸ ಅಪ್‌ಡೇಟ್ ಹೊಂದಿವೆ. ಉಳಿದ ಸಿರಿಸ್ ಮೊಬೈಲ್ ಫೋನ್‌ಗಳಿಗೆ ಹಂತ ಹಂತವಾಗಿ ಅಪ್‌ಡೇಟ್ ರಿಲೀಸ್ ಮಾಡಲಾಗುತ್ತದೆ ಎಂದು Samsung ತಿಳಿಸಿದೆ.
1 TB ಸ್ಟೋರೇಜ್‌ನ ರಿಯಲ್ ಮೊಬೈಲ್
Real Me ಸಂಸ್ಥೆ 1 TB ಸ್ಟೋರೇಜ್ ಹೊಂದಿರುವ ಮೊಬೈಲ್ ಬಿಡುಗಡೆ ಸಿದ್ಧತೆ ಮಾಡಿಕೊಂಡಿದೆ. ನವೆಂಬರ್ ತಿಂಗಳಲ್ಲಿ Realme GT 5 pro ಚೀನಾ ದೇಶದಲ್ಲಿ ರಿಲೀಸ್ ಆಗಲಿದೆ. ಸ್ನ್ಯಾಪ್ ಡ್ರ್ಯಾಗನ್ 3 ಎಸ್‌ಒಸಿ ಪ್ರೋಸೆಸರ್ ಹೊಂದಿರಲಿದೆ. 8 ಜಿಬಿ, 12 ಜಿಬಿ, 16 ಜಿಬಿ RAM ಹೊಂದಿರುವ ವೇರಿಯಂಟ್ ಬಿಡುಗಡೆಯಾಗಲಿದೆ. 128 ಜಿಬಿ, 256 ಜಿಬಿ, 512 ಜಿಬಿ ಮತ್ತು 1 ಟಿಬಿ ಸ್ಟೋರೇಜ್ ವೇರಿಯಂಟ್ ಮೊಬೈಲ್ ಮಾರುಕಟ್ಟಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200