ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
TECHNOLOGY NEWS | 15 ಅಕ್ಟೋಬರ್ 2019
ವಾಟ್ಸಪ್ ಸಂಸ್ಥೆ ಹೊಸ ಅಪ್’ಡೇಟ್ಸ್ ಘೋಷಣೆ ಮಾಡಿದೆ. ಇದು ಬಳಕೆದಾರರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಬಾರಿ ವಾಟ್ಸಪ್ ಘೊಷಣೆ ಮಾಡುತ್ತಿರುವ ಅಪ್’ಡೇಟ್ಸ್ ಯಾವುದು ಗೊತ್ತಾ?
ಅಪ್’ಡೇಟ್ 1 : ಡಾರ್ಕ್ ಮೋಡ್
ಅಪ್’ಡೇಟ್ 2 : ಸೆಲ್ಫ್ ಡಿಸ್ಟ್ರಕ್ಟಿಂಗ್ ಮಸೇಜ್
ವಾಟ್ಸಪ್’ನ ಪ್ರತಿಸ್ಪರ್ಧಿ ಟೆಲಿಗ್ರಾಂ ಮತ್ತು ಸಾಮಾಜಿಕ ಜಾಲತಾಣದ ಟ್ವಿಟರ್’ನಲ್ಲಿ ಈಗಾಗಲೇ ಈ ಮಾದರಿಯ ಫೀಚರ್’ಗಳಿವೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಪ್’ನಲ್ಲಿ ಈ ಫೀಚರ್’ಗಳು ಬರುತ್ತಿರುವುದು ಈಗ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದೆ.
ಡಾರ್ಕ್ ಮೋಡ್ ಅಂದರೆ ಏನು?
ವಾಟ್ಸಪ್’ನಲ್ಲಿ ಇರುವುದು ಒಂದೇ ಥೀಮ್. ಅದರ ಹೊರತು ಥೀಮ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಇನ್ಮುಂದೆ ಡಾರ್ಕ್ ಮೋಡ್ ಬರಲಿದೆ. ಇದರಿಂದ ಇಡೀ ವಾಟ್ಸಪ್’ನಲ್ಲಿ ಥೀಮ್ ಬದಲಾಗಲಿದೆ. ಡಾರ್ಕ್ ಮೋಡ್ ಹೇಗಿರುತ್ತೆ ಅನ್ನೋದನ್ನ ಟ್ವೀಟರ್’ನ ಈ ಲುಕ್ ನೋಡಿ.
ವಾಟ್ಸಪ್ ಕೂಡ ಇದೇ ರೀತಿ ಡಾರ್ಕ್ ಮೋಡ್ ಹೊಂದಲಿದೆಯಂತೆ. ಆದರೆ ವಾಟ್ಸಪ್’ನಲ್ಲಿ ನೀಲಿ ಬಣ್ಣದ ಷೇಡ್ ಇರಲಿದೆ ಎಂದು ಹೇಳಲಾಗುತ್ತಿದೆ. ಫಾಂಟ್’ಗಳು ಎದ್ದು ಕಾಣುವಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಯಂತೆ. ಹಾಗಾಗಿ ಈ ಮೋಡ್ ಬಗ್ಗೆ ಬಹಳ ನಿರೀಕ್ಷೆ ಮೂಡಿದೆ.
ಸೆಲ್ಫ್ ಡಿಸ್ಟ್ರಕ್ಟಿಂಗ್ ಮಸೇಜ್’ನ ಪ್ರಯೋಜನವೇನು?
ಈ ಫೀಚರ್ ಕುರಿತು ವಾಟ್ಸಪ್ ಬಳಕೆದಾರರಲ್ಲಿ ಬಹಳ ಕುತೂಹಲವಿದೆ. ವಾಟ್ಸಪ್’ನಲ್ಲಿ ಈಗ ಮೆಸೇಜುಗಳನ್ನು ಡಿಲೀಟ್ ಮಾಡುವ ಫೀಚರ್ ಇದೆ. DELETE FOR EVERYONE ಆಪ್ಷನ್ ಕ್ಲಿಕ್ ಮಾಡಿ, ಮೆಸೇಜ್ ಡಿಲೀಟ್ ಮಾಡಿದರೂ, ಈ ಮೆಸೇಜು ಡಿಲೀಟ್ ಮಾಡಲಾಗಿದೆ ಎಂದು ತೋರಿಸುತ್ತದೆ. ಆದರೆ ಇನ್ಮುಂದೆ ಬರುವ ಹೊಸ ಫೀಚರ್, ಮೆಸೇಜು ಡಿಲೀಟ್ ಆದ ಕುರುಹು ನೀಡುವುದಿಲ್ಲ. ಅಷ್ಟೆ ಅಲ್ಲ, ಮಸೇಜು ಡಿಲೀಟ್ ಮಾಡಲು ಸಮಯವನ್ನು ಫಿಕ್ಸ್ ಮಾಡುವ ಅಪ್ಷನ್ ಬರಲಿದೆಯಂತೆ.ಸದ್ಯ ವಾಟ್ಸಪ್’ನ ಈ ಅಪ್’ಡೇಟ್ ಕುರಿತು ಬಳಕೆದಾರರು ಕುತೂಹಲದಿಂದ ಕಾದಿದ್ದಾರೆ. ಸದ್ಯದಲ್ಲೇ ಅಪ್’ಡೇಟ್ ಬಿಡುಗಡೆಯಾಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422