ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 NOVEMBER 2023
WHATSAPP | ವಿಭಿನ್ನ ಅಪ್‌ಡೇಟ್ ಮೂಲಕ ವಾಟ್ಸಪ್ ತನ್ನ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈಗ ವಾಯ್ಸ್ ಚ್ಯಾಟ್ ಸಂಬಂಧ ಮಹತ್ವದ ಅಪ್‌ಡೇಟ್ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಬಗೆಯಲ್ಲು ಅಪ್‌ಡೇಟ್ ರಿಲೀಸ್ ಮಾಡಲಾಗಿದೆ. ವಾಯ್ಸ್ ಚ್ಯಾಟ್ ಅಪ್‌ಡೇಟ್ ಬಗ್ಗೆ ಬಳಕೆದಾರರು ಕೂಡ ಖುಷಿಯಾಗಿದ್ದಾರೆ.
Voice Chat ಕುರಿತು ಇಲ್ಲಿದೆ 4 ಪ್ರಮುಖಾಂಶ
ವಾಟ್ಸಪ್‌ನಲ್ಲಿ ಈವರೆಗೂ ಇದ್ದ ಗ್ರೂಪ್ ಕಾಲ್ ರೀತಿಯಲ್ಲೇ ಇರಲಿದೆ Voice Chat. ಆದರೆ ಈ ಫೀಚರ್ ಮೂಲಕ ಕರೆ ಮಾಡಿದಾಗ ಗ್ರೂಪ್‌ನ ಎಲ್ಲ ಸದಸ್ಯರ ಮೊಬೈಲ್‌ಗಳು ರಿಂಗ್ ಆಗುವುದಿಲ್ಲ. ಬದಲಾಗಿ ವಾಟ್ಸಪ್ ಮೆಸೇಜ್ ಬಂದಾಗ ಕಾಣುವ Push Notification ರೀತಿಯಲ್ಲೇ ಒಂದು ನೋಟಿಫಿಕೇಷನ್ ಗೋಚರಿಸಲಿದೆ.
ವಾಟ್ಸಪ್ ಗ್ರೂಪ್‌ನ ಬಲಗಡೆ ಮೇಲ್ಭಾಗದಲ್ಲಿ wave ಮಾದರಿಯ ಐಕಾನ್ ಪ್ರೆಸ್ ಮಾಡಬೇಕು. ಗ್ರೂಪ್‌ನ ಎಲ್ಲ ಸದಸ್ಯರಿಗು Voice Chat ನೋಟಿಫಿಕೇಷನ್ ತಲುಪಲಿದೆ. ಆಸಕ್ತರು Voice Chat ಜಾಯಿನ್ ಆಗಬಹುದು. Voice Chatನ ಯಾವುದೇ ಸಂದರ್ಭದಲ್ಲಿ ಯಾರು ಬೇಕಾದರು ಕರೆಯಿಂದ ಹೊರ ಬರಬಹುದು. ಯಾವುದೆ ಸಂದರ್ಭದಲ್ಲಿ ಪುನಃ ಸೇರಬಹುದು. ಬಲಗಡೆ ಮೇಲ್ಭಾಗದ X ಐಕಾನ್ ಕ್ಲಿಕ್ ಮಾಡಿದರೆ Voice Chatನಿಂದ ಹೊರಹೋಗಬಹುದು.
ಇದನ್ನೂ ಓದಿ – ದೀಪಾವಳಿಗೆ ನೈಋತ್ಯ ರೈಲ್ವೆಯಿಂದ 42 ವಿಶೇಷ ರೈಲು, ಎಲ್ಲೆಲ್ಲಿಗೆಲ್ಲ ರೈಲು ವ್ಯವಸ್ಥೆ ಮಾಡಲಾಗಿದೆ?
33 ರಿಂದ 128 ಸದಸ್ಯರು ಇರುವ ವಾಟ್ಸಪ್ ಗ್ರೂಪ್‌ಗಳಲ್ಲಿ ಮಾತ್ರ Voice Chat ಫೀಚರ್ ಲಭ್ಯವಾಗಲಿದೆ. Voice Chat ಸಂದರ್ಭ ಗ್ರೂಪ್ ಸದಸ್ಯರೆಲ್ಲ EXIT ಆದರೆ ತನ್ನಿಂತಾನೆ Voice Chat ಕ್ಯಾನ್ಸಲ್ ಆಗಲಿದೆ.
ಗ್ರೂಪ್‌ನ ಯಾವೆಲ್ಲ ಸದಸ್ಯರು Voice Chatಗೆ ಜಾಯಿನ್ ಆಗಿದ್ದಾರೆ ಎಂದು ಗ್ರೂಪ್‌ನ ಎಲ್ಲ ಸದಸ್ಯರು ಗಮನಿಸಬಹುದು. Voice Chatಗೆ ಜಾಯಿನ್ ಆಗದ ಗ್ರೂಪ್ ಸದಸ್ಯರು ಯಾರೆಲ್ಲ Voice Chatನಲ್ಲಿ ಭಾಗವಹಿಸಿದ್ದಾರೆ ಎಂದು ಪ್ರೊಫೈಲ್‌ಗಳನ್ನಷ್ಟೆ ವೀಕ್ಷಿಸಬಹುದು ಎಂದು ವಾಟ್ಸಪ್ ಸಂಸ್ಥೆ ತಿಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422