ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | SOFTWARE NEWS
ವಾಟ್ಸಪ್ ಸಂಸ್ಥೆ ದಿನಕ್ಕೊಂದು ಹೊಸ SOFTWARE UPDATE ಒದಗಿಸುತ್ತಿದೆ. ಈ UPDATEಗಳಿಂದ WHATSAPP ಬಳಕೆ ಮತ್ತಷ್ಟು ಸುಲಭ ಮತ್ತು ವಿಭಿನ್ನ ಫೀಲ್ ಕೊಡುತ್ತಿದೆ. ಈಗ WHATSAPP ಮತ್ತೊಂದು UPDATE ಬಿಡುಗಡೆಗೆ ಸಿದ್ಧವಾಗಿದೆ. ಇನ್ಮುಂದೆ ಯಾವುದೆ WHATSAPP GROUPಗಳಿಂದ ನೀವು EXIT ಆದರೆ ಯಾರಿಗೂ ಗೊತ್ತೇ ಆಗುವುದಿಲ್ಲವಂತೆ.
ಎಷ್ಟೋ ಭಾರಿ ಕೆಲವು ವಾಟ್ಸಪ್ ಗ್ರೂಪ್’ಗಳು ಭಾರಿ ಕಿರಿಕಿರಿ ಅನಿಸುತ್ತವೆ. ಆದರೆ ಅವುಗಳಿಂದ ಎಗ್ಸಿಟ್ ಆದರೆ, ಗ್ರೂಪ್ ಸದಸ್ಯರು ಏನಂದುಕೊಳ್ಳುತ್ತಾರೋ ಅನ್ನುವ ಯೋಚನೆ. ಇದಕ್ಕೆಲ್ಲ ಈಗ ವಾಟ್ಸಪ್ ಸಂಸ್ಥೆ ಪರಿಹಾರ ಮಾರ್ಗ ಕಂಡುಕೊಂಡಿದೆ.
ಸೈಲೆಂಟಾಗಿ ಹೊರ ಬರಬಹುದು
ಇನ್ಮುಂದೆ ವಾಟ್ಸಪ್ ಗ್ರೂಪ್’ಗಳಿಂದ ಸುಲಭವಾಗಿ ಎಗ್ಸಿಟ್ ಆಗಬಹುದು. ನೀವು ಎಗ್ಸಿಟ್ ಆಗಿರುವ ವಿಚಾರ ಗ್ರೂಪ್’ನ ಯಾವ ಸದಸ್ಯರಿಗೂ ಗೊತ್ತೇ ಆಗುವುದಿಲ್ಲ. ಅಡ್ಮಿನ್ ಅಥವಾ ಅಡ್ಮಿನ್’ಗಳ ಹೊರತು ಮತ್ಯಾರಿಗೂ ನೀವು ಎಗ್ಸಿಟ್ ಆಗುವುದು ತಿಳಿಯುವುದೆ ಇಲ್ಲ. ಸೈಲೆಂಟ್ ಆಗಿ ಗ್ರೂಪ್’ನಿಂದ ಹೊರ ಬಂದು ನಿಶ್ಚಿಂತೆಯಿಂದ ಇರಬಹುದಾಗಿದೆ.
ಹೇಗಿರುತ್ತೆ ಈ ಹೊಸ ಫೀಚರ್?
ವಾಟ್ಸಪ್ ಗ್ರೂಪ್’ನಿಂದ ಸುಲಭವಾಗಿ ಹೊರ ಬರಬಹುದಾಗಿದೆ. ಗ್ರೂಪ್’ನಿಂದ ಎಗ್ಸಿಟ್ ಆಗಿರುವ ವಿಚಾರ ಯಾರಿಗೂ ಗೊತ್ತಾಗುವುದಿಲ್ಲ. ನೀವು LEFT ಆಗಿರುವ ವಿಚಾರವನ್ನು ಗ್ರೂಪ್’ನಲ್ಲಿ ಪ್ರದರ್ಶಿಸುವುದಿಲ್ಲ. ಆದರೆ ಗ್ರೂಪ್ ಅಡ್ಮಿನ್ ಅಥವಾ ಅಡ್ಮಿನ್’ಗಳಿಗೆ ಮಾತ್ರ ಈ ಕುರಿತು ನೋಟಿಫಿಕೇಷನ್ ಹೋಗಲಿದೆ.
ಸದ್ಯ ಈ ಫೀಚರ್ (SOFTWARE) ಇನ್ನೂ ಪ್ರಯೋಗದ ಹಂತದಲ್ಲಿದೆ. ಬಳಿಕ ಬೀಟಾ ವರ್ಷನ್’ನಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗುತ್ತದೆ. ಸಾಧಕ ಬಾಧಕದ ಪರಿಶೀಲನೆ ಬಳಿಕ ಉಳಿದ ಬಳಕೆದಾರರಿಗೂ ಈ ಫೀಚರ್ ಲಭ್ಯವಾಗಲಿದೆ.
ಇದನ್ನೂ ಓದಿ | ಮಹಿಳೆಯರೆ ಹುಷಾರ್, WORK FROM HOME ಹೆಸರಲ್ಲಿ ನಡೆಯುತ್ತಿದೆ ವಂಚನೆ, ಶಿವಮೊಗ್ಗದಲ್ಲಿ ಕೇಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422