ಹರ್ಷ ಹತ್ಯೆ ಬಳಿಕ ಶಾಂತಿ ಭಂಗ, ವಿಚಾರಣೆಗೆ ಹಾಜರಾಗದವರಿಗೆ ನೊಟೀಸ್, ಎಷ್ಟು ಜನಕ್ಕೆ ನೊಟೀಸ್ ಕೊಡಲಾಗಿದೆ?

after procession stone pelting

SHIVAMOGGA LIVE NEWS | 11 ಮಾರ್ಚ್ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಸಾರ್ವಜನಿಕರ ಶಾಂತಿಭಂಗಕ್ಕೆ ಕುತ್ತು ತಂದ ಆರೋಪದ ಅಡಿ 379 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗದವರ ಮೇಲೆ ತಹಸೀಲ್ದಾರ್‌ ಕೋರ್ಟ್‌ನಿಂದ ವಾರಂಟ್‌ ಜಾರಿ ಮಾಡಲಾಗಿದೆ. ಮಂಗಳವಾರ ಮತ್ತು ಬುಧವಾರ 309 ಮಂದಿಗೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ತಹಸೀಲ್ದಾರ್‌ ಕೋರ್ಟ್ ನೋಟಿಸ್ ನೀಡಿತ್ತು. ಆದರೆ ಅದರಲ್ಲಿ ಬಹಳಷ್ಟು ಮಂದಿ ಗೈರು ಹಾಜರಾಗಿದ್ದಾರೆ. ಮಂಗಳವಾರ 209ರಲ್ಲಿ 150 ಮತ್ತು ಬುಧವಾರ 100ರಲ್ಲಿ … Read more

24 ಗಂಟೆಯಲ್ಲಿ ಬದಲಾಯಿತು ವಿಶ್ವವಿದ್ಯಾಲಯದ ನಾಮಫಲಕ

Agriculture-University-Iruvakki-sagara-campus-board

SHIVAMOGGA LIVE NEWS | 11 ಮಾರ್ಚ್ 2022 ಸ್ಥಳೀಯರ ಆಕ್ರೋಶ, ಪ್ರತಿಭಟನೆ ಬೆನ್ನಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವಾವಿದ್ಯಾಲಯದ ನಾಮಫಲಕ ಬದಲಾವಣೆ ಮಾಡಲಾಗಿದೆ. ಸಾಗರ ತಾಲೂಕು ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪನಾಯಕ ಅವರ ಹೆಸರಿನ ನಾಮಫಲಕ ಅಳವಡಿಸಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಅವರ ಹೆಸರನ್ನು ಘೋಷಿಸಿದ್ದರು. ಇದನ್ನೂ ಓದಿ | ವರ್ಷ ಕಳೆದರೂ ಬದಲಾಗದ ನಾಮಫಲಕ, ಇರುವಕ್ಕಿಯಲ್ಲಿ ಸ್ಥಳೀಯರಿಂದ ರಸ್ತೆ ತಡೆ ಒಂದು ವರ್ಷ ಕಳೆದರೂ … Read more

ಮಾಜಿ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ಆನವಟ್ಟಿಯಲ್ಲಿ ಪ್ರತಿಭಟನೆಗೆ ನಿರ್ಧಾರ

Madhu-Bangrappa-at-Kubatur-Soraba

SHIVAMOGGA LIVE NEWS | 11 ಮಾರ್ಚ್ 2022 ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಆನವಟ್ಟಿ ವಿಠಲ ದೇವಸ್ಥಾನದಿಂದ ಮೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು. ಸೊರಬದ ಕುಬಟೂರಿನ ತಮ್ಮ ಮನೆಯಲ್ಲಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷದ ಮುಖಂಡರ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಮಧು ಬಂಗಾರಪ್ಪ ಅವರು, ಮಾರ್ಚ್ 14ರಂದು ಆನವಟ್ಟಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. … Read more

ತೀರ್ಥಹಳ್ಳಿಯಲ್ಲಿ ಮತ್ತೊಂದು KFD ಪ್ರಕರಣ, ಕನ್ನಂಗಿ ಭಾಗದಲ್ಲಿ ಆತಂಕ

Kannangi Graphics

SHIVAMOGGA LIVE NEWS | 11 ಮಾರ್ಚ್ 2022 ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನ ಕಾಯಿಲೆ ಭೀತಿ ಮತ್ತಷ್ಟು ಹೆಚ್ಚಾಗಿದೆ. ಕನ್ನಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಯುವಕನಿಗೆ ಕೆಎಫ್’ಡಿ ಪಾಸಿಟಿವ್ ಬಂದಿದೆ. ಕುಡುವಳ್ಳಿಯ 24 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಜ್ವರದಿಂದ ನರಳುತ್ತಿದ್ದ ಯುವಕನ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. KFD ಸೋಂಕು ಇರುವುದು ದೃಢವಾಗಿದೆ. ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ | ತೀರ್ಥಹಳ್ಳಿಯಲ್ಲಿ ಇಬ್ಬರು ಮಹಿಳೆಯರಿಗೆ KFD ಪಾಸಿಟಿವ್, ಕನ್ನಂಗಿ ಭಾಗದಲ್ಲಿ ಆತಂಕ ಈ … Read more

ಮನೆ ಬೀಗ ಮುರಿದು ಲಕ್ಷ ಲಕ್ಷ ಹಣ, ಚಿನ್ನಾಭರಣ ಕಳ್ಳತನ, ಅದೇ ಗ್ರಾಮದಲ್ಲಿ ಸಿಕ್ಕಬಿದ್ದ ಕಳ್ಳ

Thief-Arrest-at-Bhadravathi-Paper-Town.

SHIVAMOGGA LIVE NEWS | 11 ಮಾರ್ಚ್ 2022 ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಅದೇ ಗ್ರಾಮದ ಯುವಕನನ್ನು ಬಂಧಿಸಲಾಗಿದೆ. ಹಣ, ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ತಾಲೂಕು ರಬ್ಬರ್ ಕಾಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಜನವರಿ 13ರಂದು ರಬ್ಬರ್ ಕಾಡು ಗ್ರಾಮದ ನಿವಾಸಿಯೊಬ್ಬರು ತಮ್ಮ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಬಾಗಿಲು ಬೀಗ ಮುರಿದಿರುವುದು ಗೊತ್ತಾಗಿದೆ. ಲಕ್ಷ ಲಕ್ಷ ನಾಪತ್ತೆಯಾಗಿತ್ತು … Read more

4 ದಿನ ಬೀರೂರಿನಲ್ಲಿ ಮೈಸೂರು ತಾಳಗುಪ್ಪ ರೈಲು 65 ನಿಮಿಷ ನಿಲುಗಡೆ

Train engine and boggies

SHIVAMOGGA LIVE NEWS | 11 ಮಾರ್ಚ್ 2022 ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲನ್ನು 65 ನಿಮಿಷ ಬೀರೂರಿನಲ್ಲಿ ನಿಯಂತ್ರಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ನಾಲ್ಕು ದಿನ ಹೀಗೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಸಂಖ್ಯೆ 16227 ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲನ್ನು ಮಾರ್ಚ್ 10, ಮಾರ್ಚ್ 13, ಮಾರ್ಚ್ 15 ಮತ್ತು ಮಾರ್ಚ್ 17ರಂದು ನಿಯಂತ್ರಿಸಲಾಗುತ್ತದೆ. ಬೀರೂರು ಜಂಕ್ಷನ್’ನಲ್ಲಿ 65 ನಿಮಿಷ ರೈಲು ನಿಲುಗಡೆಯಾಗಲಿದೆ. ಆನಂತರ ಪ್ರಯಾಣ … Read more

ಶಿವಮೊಗ್ಗ ನಗರದ ಹಲವು ಕಡೆ ಮಾರ್ಚ್ 11ರಂದು ಬೆಳಗ್ಗೆಯಿಂದ ಕರೆಂಟ್ ಇರಲ್ಲ

POWER-CUT-UPDATE-NEWs ELECTRICITY

SHIVAMOGGA LIVE NEWS | 10 ಮಾರ್ಚ್ 2022 ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮೆಸ್ಕಾಂ ನಗರ ಉಪ ವಿಭಾಗ 2ರ ಘಟಕ 5 ಮತ್ತು 6ರ ವಿದ್ಯುತ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರ್ಚ್ 11ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಗರದ ವಿವಿಧೆಡೆ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಪಿಯರ್‍ಲೈಟ್ ಪೇಪರ್ ಪ್ಯಾಕೇಜ್, ಕೆ.ಆರ್ ಕುಡಿಯುವ ನೀರಿನ ಸ್ಥಾವರ, ಶಂಕರ್‍ರೈಸ್ ಮಿಲ್, … Read more

ಶಿವಮೊಗ್ಗ ಮೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ, ಇಲ್ಲಿದೆ ರೈತರ 5 ಪ್ರಮುಖ ಡಿಮಾಂಡ್

Shimoga-Famers-Protest-in-front-of-Mescom

SHIVAMOGGA LIVE NEWS | 10 ಮಾರ್ಚ್ 2022 ರೈತರ ಪಂಪ್ ಸೆಟ್’ಗಳಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರೈಲ್ವೆ ನಿಲ್ದಾಣದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ರೈತರ ಡಿಮಾಂಡ್’ಗಳೇನು? ಡಿಮಾಂಡ್ 1 : ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು. ಡಿಮಾಂಡ್ 2 : ಸುಟ್ಟು ಹೋದ ಟಿಸಿಗಳನ್ನು … Read more

‘ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕನಸಾಗಿಯೇ ಉಳಿಯಲಿದೆ’

Shimoga MP BY Raghavendra

SHIVAMOGGA LIVE NEWS | 10 ಮಾರ್ಚ್ 2022 ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸಾಗಿಯೇ ಉಳಿಯಲಿದೆ ಅನ್ನುವುದನ್ನ ಪಂಚ ರಾಜ್ಯ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಿಗೆ ಸಂಸದ ರಾಘವೇಂದ್ರ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, BJP ನಾಯಕರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. … Read more

ಶಿವಮೊಗ್ಗದ ಮಿಷನ್ ಕಾಂಪೌಂಡ್’ನಲ್ಲಿ ಪೊಲೀಸರ ದಾಳಿ, ಮೂವರು ಅರೆಸ್ಟ್

Doddapete-Police-Station-General-Image.

SHIVAMOGGA LIVE NEWS | 10 ಮಾರ್ಚ್ 2022 ಶಿವಮೊಗ್ಗದ ಮಿಷನ್ ಕಾಂಪೌಂಡ್ ಪಕ್ಕದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮೂವರನ್ನು ಬಂಧಿಸಲಾಗಿದ್ದು, 90 ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಸಚಿನ್ ಅಲಿಯಾಸ್ ಶ್ಯಾಡೋ (26), ಸಂಜಯ್ (22), ಅರ್ಬಾಜ್ ಷರೀಫ್ (19) ಬಂಧಿತರು. ಸಂತ ಥಾಮಸ್ ಭವನದ ಪಕ್ಕದ ಖಾಲಿ ಜಾಗದಲ್ಲಿ ಈ ಮೂವರು ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ … Read more