ಶಿವಮೊಗ್ಗದ ಸೀಗೆಹಟ್ಟಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು

Media-in-Sigehatti-in-Shimoga.

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಶಿವಮೊಗ್ಗದ ಸೀಗೆಹಟ್ಟಿ ಈಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳ ಕಾರ್ಯಕ್ಷೇತ್ರವಾಗಿ ಬದಲಾಗಿದೆ. ಹರ್ಷ ಹತ್ಯೆ ಪ್ರಕರಣ ಮತ್ತು ನಂತರ ನಡೆದ ಗಲಭೆ ಈಗ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದೆ. ಬಜರಂಗದಳ ಕಾರ್ಯಕರ್ತ ಹರ್ಷ ಅವರ ಮನೆ ಶಿವಮೊಗ್ಗದ ಸೀಗೆಹಟ್ಟಿಯಲ್ಲಿದೆ. ಬಿಜೆಪಿ, ಸಂಘ ಪರಿವಾರದ ಪ್ರಮುಖರು ಹರ್ಷ ಮನೆಗೆ ಭೇಟಿ ನೀಡುತ್ತಿದ್ದಾರೆ. ಇದನ್ನು ಸೆರೆ ಹಿಡಿಯಲು ಮತ್ತು ವರದಿ ಮಾಡಲು ರಾಜ್ಯದ ವಾಹಿನಿಗಳು ಮಾತ್ರವಲ್ಲದೆ ರಾಷ್ಟ್ರೀಯ, … Read more

ಗಲಭೆಕೋರರ ಮೇಲೆ ಕಣ್ಣಿಡಲು ಶಿವಮೊಗ್ಗಕ್ಕೆ ಬಂತು ಡ್ರೋಣ್, ಹೇಗಿದೆ? ಏನಿದರ ವಿಶೇಷತೆ?

Drone-Camera-for-Survielence-in-Shimoga-city.

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಡುವೆ ನಗರ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲು ಡ್ರೋಣ್’ಗಳು ಆಗಮಿಸಿವೆ. ಉಡುಪಿ ಜಿಲ್ಲೆಯ ಕಾರ್ಕಳದಿಂದ ಈ ಡ್ರೋಣ್’ಗಳು ಶಿವಮೊಗ್ಗ ನಗರಕ್ಕೆ ತರಿಸಲಾಗಿದೆ. ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಪಡೆ ಈ ಡ್ರೋಣ್’ಗಳ ಬಳಕೆ ಮಾಡುತ್ತಿದೆ. ಎರಡು ಡ್ರೋಣ್’ಗಳು ಈಗ ಶಿವಮೊಗ್ಗ ನಗರದ ಮೇಲೆ ಹಾರಾಡುತ್ತಿವೆ. ಈ ಡ್ರೋಣ್’ಗಳ ವಿಶೇಷತೆ … Read more

BREAKING NEWS | ಶಿವಮೊಗ್ಗದಲ್ಲಿ ಕರ್ಫ್ಯೂ ಅವಧಿ ಮತ್ತೊಂದು ದಿನಕ್ಕೆ ವಿಸ್ತರಣೆ

Police Bandobast at Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಶಿವಮೊಗ್ಗ ನಗರದಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಅವಧಿಯನ್ನು ಮತ್ತೊಂದು ದಿನಕ್ಕೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಕರ್ಫ್ಯೂ ಅವಧಿಯನ್ನು ಫೆ.26ರ ಬೆಳಗ್ಗೆ 9 ಗಂಟೆವರೆಗೂ ವಿಸ್ತರಣೆ ಮಾಡಲಾಗಿದೆ. ಈ ಸಂಬಂಧ ಇವತ್ತು ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಸೆಕ್ಷನ್ 144ರ ಅನ್ವಯ ಪ್ರತಿಬಂಧಕಾಜ್ಞೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮೊದಲು ಫೆ.25ರ ಬೆಳಗ್ಗೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಇದನ್ನೂ … Read more

ಇವತ್ತೂ ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧ, ಪ್ರಮುಖ ರಸ್ತೆಗಳೆಲ್ಲ ಬಂದ್

Shimoga-City-During-Curfew-Harsha-Murder-case

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಶಿವಮೊಗ್ಗ ನಗರ ಇವತ್ತು ಕೂಡ ಸ್ಥಬ್ಧವಾಗಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಇದೆ. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಮತ್ತು ಆ ಬಳಿಕ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ, ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆವರೆಗೆ ಕರ್ಫ್ಯೂ ವಿಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಬುಧವಾರ ಬೆಳಗ್ಗೆ ಕರ್ಫ್ಯೂ ಸಡಿಲಗೊಳಿಸಲಾಗಿತ್ತು. ಅಗತ್ಯ … Read more

ವಿನೋಬನಗರದ ವಿವಿಧೆಡೆ ಫೆ.24ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

power cut graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಫೆ.24ರಂದು ಬೆಳಗ್ಗೆ 10 ಗಂಟೆ ಸಂಜೆ 6 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಪೊಲೀಸ್ ಚೌಕಿ, ಚೇತನ ಪಾರ್ಕ್, ವಿನೋಬನಗರ ಚಾಚಾ ನೆಹರು ಪಾರ್ಕ್, ಮೋರ್ ಸೂಪರ್ ಮಾರ್ಕೆಟ್, ವಿನೋಬನಗರ ವಿಕಾಸ ಶಾಲೆ, ಡಿವಿಎಸ್ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ. … Read more

‘ಶಿವಮೊಗ್ಗ ನಗರದಲ್ಲಿ ಆಗಿರುವ ನಷ್ಟಕ್ಕೆ ಸಚಿವ ಈಶ್ವರಪ್ಪ ಹೊಣೆ’

KB-Prasanna-Kumar-about-Shimoga-Clash

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಹರ್ಷ ಹತ್ಯೆ ಪ್ರಕರಣ ಮತ್ತು ಆ ಬಳಿಕ ನಡೆದ ಅಹಿತಕರ ಘಟನೆಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೊಣೆ ಹೊರಬೇಕು. ನಗರದಲ್ಲಿ ಆಗಿರುವ ನಷ್ಟವನ್ನು ಅವರೆ ಭರಿಸಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಬಿ.ಪ್ರಸನ್ನಕುಮಾರ್ ಅವರು, ಜಿಲ್ಲೆಯ ಶಾಂತಿ ಸುವ್ಯವಸ್ಥೆ ಜೊತೆ ಸಚಿವ ಈಶ್ವರಪ್ಪ ಅವರು ಆಟವಾಡುತ್ತಿದ್ದಾರೆ. ಅವರನ್ನು ಶಾಸಕ ಸ್ಥಾನದಿಂದಲೆ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಈಶ್ವರಪ್ಪ ಅವರ ನಡೆ ಖಂಡನೀಯ. ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದವರು … Read more

ಹರ್ಷ ಕುಟುಂಬಕ್ಕೆ ಒಂದು ಲಕ್ಷದ ಚೆಕ್ ವಿತರಣೆ

CM-political-secretary-jeevaraj-visit-shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಮುಖ್ಯಂಮತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಭೇಟಿ ನೀಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಕೊಲೆ ಹಿಂದೂ ಸಮಾಜಕ್ಕೆ ಆಘಾತ ತಂದಿದೆ. ಈ ಬೆಳವಣಿಗೆ ಯಾಕೆ ನಡೆಯುತ್ತಿವೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಅನ್ನುವುದು ನೋಡಬೇಕಿದೆ ಎಂದರು. ಒಂದು ಲಕ್ಷದ ಚೆಕ್ ವಿತರಣೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ಹರ್ಷ ಕುಟುಂಬಕ್ಕೆ … Read more

ಹರ್ಷ ಕುಟುಂಬದ ಜೊತೆ ಡಾ.ಸಂತೋಷ್ ಭಾರತಿ ಸ್ವಾಮೀಜಿ ಚರ್ಚೆ

Santosh-guruji-visit-harsha-home.

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಹರ್ಷನನ್ನು ಕಳೆದುಕೊಂಡಿರುವುದು ಓರ್ವ ಯೋಧನನ್ನು ಕಳೆದುಕೊಂಡ ಹಾಗೆ ಆಗಿದೆ ಎಂದು ಡಾ.ಸಂತೋಷ್ ಭಾರತೀ ಶ್ರೀಪಾದ ಸ್ವಾಮೀಜಿ ಹೇಳಿದರು. ಹರ್ಷ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲೆಗಾರರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಹರ್ಷ ನನ್ನ ಆತ್ಮೀಯ ಶಿಷ್ಯ, ಇಲ್ಲಿ ಸಂಘಟನೆ ಮಾಡುತ್ತಿದ್ದ. ಹರ್ಷನ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ತಿಳಿಸಿದರು. ಇದನ್ನೂ ಓದಿ | ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಚಕ್ರವರ್ತಿ ಸೂಲಿಬೆಲೆ

ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಚಕ್ರವರ್ತಿ ಸೂಲಿಬೆಲೆ

Chakravarthi sulibele visit harsha house

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದ್ದು,ಸರ್ಕಾರ ಮತ್ತು ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು. ಸೀಗೆಹಟ್ಟಿಯಲ್ಲಿ ಮಂಗಳವಾರ ಹರ್ಷ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಚಕ್ರವರ್ತಿ ಸೂಲಿಬೆಲೆ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಿವಮೊಗ್ಗ ಎಂದೂ ಶಾಂತವಾಗಿಲ್ಲ. ಇದರ ಹಿಂದೆ ಇರುವ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತುಹಾಕಬೇಕಿದೆ. ಹಿಂದೂಗಳ ರಕ್ಷಣೆ ನೀವು ಮಾಡುತ್ತಿರೋ, ಇಲ್ಲಾ ನಾವೇ … Read more

BREAKING NEWS | ಹರ್ಷ ಹತ್ಯೆ ಕೇಸ್, ಬಂಧಿತರ ಸಂಖ್ಯೆ ಆರಕ್ಕೆ, ಮತ್ತಷ್ಟು ಮಂದಿ ಅರೆಸ್ಟ್ ಸಾಧ್ಯತೆ

IPS office Lakshmi Prasad

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಈವರೆಗೂ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಉಳಿದ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ | ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿಯಾದರೂ ಆಟೋ, ಬೈಕುಗಳಿಗೆ ಬೆಂಕಿ ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್ (30), ಸಯ್ಯದ್ ನದೀಂ ಎಂಬುವವರನ್ನು … Read more