ಗುತ್ತಿಗೆದಾರನ ಆತ್ಮಹತ್ಯೆ ಕುರಿತು ಶಿವಮೊಗ್ಗದಲ್ಲಿ ಗೃಹ ಸಚಿವರ ಮೊದಲ ಪ್ರತಿಕ್ರಿಯೆ

Home-Minister-Araga-Janendra-About-Udupi-Suicide

SHIVAMOGGA LIVE NEWS | HOME MINISTER | 12 ಏಪ್ರಿಲ್ 2022 ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲಿನ ಆರೋಪ ಸಂಬಂಧವು ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಹೇಳಿದ್ದೇನು? ‘ಉಡುಪಿ ಜಿಲ್ಲಾ ರಕ್ಷಣಾಧಿಕಾರಿ ಅವರ ಜೊತೆಗೆ ಈಗಷ್ಟೆ ಮಾತನಾಡಿದ್ದೇನೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸುತ್ತಿದ್ದಾರೆ. ಅವರು ಬಂದ ಬಳಿಕ ಕೊಠಡಿಯ ಬಾಗಿಲು … Read more

ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಮನೆಗೆ ಮುತ್ತಿಗೆ ಯತ್ನ

Shimoga-Youth-Congress-Protest-against-Eshwarappa

SHIVAMOGGA LIVE NEWS | Youth Congress | 12 ಏಪ್ರಿಲ್ 2022 ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಖಂಡಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಬಿ.ಹೆಚ್.ರಸ್ತೆಯಿಂದ ಮಲ್ಲೇಶ್ವರ … Read more

ಲಕ್ಷಾಂತರ ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಮೂವರ ಮೇಲೆ ಸಾಗರ ಪೊಲೀಸರ ದಾಳಿ

Sagara Police Station Building

SHIVAMOGGA LIVE NEWS | Ambergris  | 12 ಏಪ್ರಿಲ್ 2022 ಬೆಲೆಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೆಳದಿ ರಸ್ತೆಯ ರಾಮಪ್ಪ (40), ಕಾರ್ಗಲ್’ನ ಸಂದೀಪ್ ಜಾನ್ (49), ಸಾಗರ ನೆಹರೂ ನಗರದ ರೋಹಿತ್ (42) ಬಂಧಿತರು. ಸಾಗರ ರೈಲ್ವೆ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿ (ಅಂಬರ್ಗ್ರೀಸ್) ವಶಕ್ಕೆ ಪಡೆಯಲಾಗಿದೆ. ಅರ್ಧ … Read more

ಮನೆ ಬಾಗಿಲಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಬೆಳಗಾಗುವುದರಲ್ಲಿ ಇಲ್ಲ

SHIVAMOGGA LIVE NEWS | Crime News | 11 ಏಪ್ರಿಲ್ 2022 ಮನೆ ಬಾಗಿಲ ಪಕ್ಕದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಹೋಂಡಾ ಡಿಯೋ ಬೈಕ್ ಕಳ್ಳತನವಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯೂ ಮಂಡ್ಲಿಯ ಗಂಧರ್ವ ನಗರದ ಆನಂದ ಎಂಬುವವರಿಗೆ ಸೇರಿದ ಬೈಕ್ ಕಳವಾಗಿದೆ. ಭಾನುವಾರ ರಾತ್ರಿ 10 ಗಂಟೆಗೆ ಮನೆ ಬಳಿ ತಂದು ನಿಲ್ಲಿಸಿದ್ದ ಬೈಕ್ ಬೆಳಗೆದ್ದು ನೋಡಿದಾಗ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರು … Read more

ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಎಂಜಿನಿಯರ್ ಬೈಕ್’ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

Tunga-Nagara-Police-Station-Shimoga

SHIVAMOGGA LIVE NEWS | Crime News Today | 12 ಏಪ್ರಿಲ್ 2022 ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಎಂಜಿನಿಯರ್ ಸುರೇಂದ್ರಬಾಬು ಎಂಬುವವರು ಓಡಿಸುತ್ತಿದ್ದ ಹೋಂಡಾ ಆಕ್ಟೀವಾ ಬೈಕ್’ಗೆ ಬೆಂಕಿ ಹಚ್ಚಲಾಗಿದೆ. ಶನಿವಾರ ಬೆಳಗಿನ ಜಾವ ರಾಮಿನಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ | ‘ಕಸ್ಟಮರ್ ಕೇರ್’ಗೆ ಕರೆ ಮಾಡಿದ್ಮೇಲೆ ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಬರೀ 2 ರೂ..! ಸುರೇಂದ್ರ … Read more

ಕಾಡಿನಲ್ಲಿ ಅಂದರ್ – ಬಾಹರ್ ಜೂಜಾಟ, ಪೊಲೀಸರಿಂದ ದಾಳಿ

police jeep

SHIVAMOGGA LIVE NEWS | Gambling| 12 ಏಪ್ರಿಲ್ 2022 ಕಾಡಿನಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಮೂವರನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶ್ರೀಧರ್ (27), ಸುರೇಶ್ (26), ಬಸವರಾಜ (31) ಬಂಧಿತರು. ಗಾಜನೂರಿನ ಕಾಡಿನಲ್ಲಿ ಇವರು ಜೂಜಾಟ ಆಡುತ್ತಿದ್ದರು. ಜೂಜಾಟದ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ತುಂಗಾ ನಗರ ಠಾಣೆ ಪಿಎಸ್ಐ ಶಿವಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ … Read more

ನಡುರಸ್ತೆಯಲ್ಲಿ ಸಾಲದ ಹಣಕ್ಕಾಗಿ ಕಿತ್ತಾಟ, ಒಬ್ಬನಿಗೆ ಚಾಕು ಇರಿತ

crime name image

SHIVAMOGGA LIVE NEWS | Crime News Today | 12 ಏಪ್ರಿಲ್ 2022 ಸಾಲದ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋಂಧಿ ಚಟ್ನಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಶಬರೀಶ (32) ಹಲ್ಲೆಗೊಳಗಾದವರು. ಹರೀಶ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸಾಲದ ಹಣಕ್ಕೆ ಗಲಾಟೆ ಹರೀಶನಿಗೆ ಶಬರೀಶ 40 ಸಾವರ ರೂ. ಹಣವನ್ನು ಸಾಲವಾಗಿ ನೀಡಿದ್ದರು. ಅದನ್ನು ಹಿಂತಿರುಗಿಸುವಂತೆ … Read more

ಗೋಂಧಿ ಚಟ್ನಳ್ಳಿಯಲ್ಲಿ ಪೊಲೀಸರ ದಾಳಿ, ಹೊಲ, ಗದ್ದೆಗೆ ಹಾರಿ ಓಡಿದ ಆರೋಪಿ

police jeep

SHIVAMOGGA LIVE NEWS | CRIME NEWS| 11 ಏಪ್ರಿಲ್ 2022 ಮನೆ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಾಕಿ ಪಡೆಯನ್ನು ಕಂಡ ಕೂಡಲೆ ಮದ್ಯ ಖರೀದಿಗೆ ಬಂದವರು ಮತ್ತು ಮಾರಾಟಗಾರ ಪರಾರಿಯಾಗಿದ್ದಾರೆ. ಶಿವಮೊಗ್ಗ ತಾಲೂಕು ಗೋಂಧಿ ಚಟ್ನಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಗರಾಜ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ನಾಗರಾಜ ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮದ್ಯ ಮಾರಾಟ … Read more

ಚಿರತೆ ದಾಳಿಯಿಂದ ಮಾಲೀಕನ್ನು ಕಾಪಾಡಿದ ಸಾಕು ನಾಯಿಗಳು

Wild animal Cheetha-Attack-on-Person-near-anavatti

SHIVAMOGGA LIVE NEWS | Wild Animal | 10 ಏಪ್ರಿಲ್ 2022 ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ಆದರೆ ಸಾಕು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಮಾಲೀಕನನ್ನು ಕಾಪಾಡಿವೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಎಣ್ಣೆಕೊಪ್ಪ ಗೊಲ್ಲರ ತಾಂಡಾದಲ್ಲಿ ಘಟನೆ ನಡೆದಿದೆ. ಬಂಗಾರಪ್ಪ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದೆ. ಬಂಗಾರಪ್ಪ ಅವರು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿದೆ. ದಾಳಿ ವೇಳೆ … Read more

ತಿಲಕನಗರದಲ್ಲಿ ತಂದು ನಿಲ್ಲಿಸಿದ 15 ನಿಮಿಷದೊಳಗೆ ಬೈಕ್ ಕಾಣೆ

bike theft reference image

SHIVAMOGGA LIVE NEWS | BIKE THEFT | 9 ಏಪ್ರಿಲ್ 2022 ಶಿವಮೊಗ್ಗ ತಿಲಕನಗರದಲ್ಲಿ ಬೈಕ್ ಕಳ್ಳತನವಾಗಿದೆ. ತಂದು ನಿಲ್ಲಿಸಿದ 15 ನಿಮಿಷ ಒಳಗೆ ಬೈಕ್ ನಾಪತ್ತೆಯಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿತ್ಯಾನಂದ ಎಂಬುವವರಿಗೆ ಸೇರಿದ ಹೋಂಡಾ ಶೈನ್ ಬೈಕ್ ನಾಪತ್ತೆಯಾಗಿದೆ. ಜಿಲ್ಲಾ ಪಂಚಾಯಿತಿ ಸಮೀಪ ವಾಸವಿ ಸರ್ಕಲ್ ಬಳಿ ಸ್ಟಡಿ ಸೆಂಟರ್ ಇದೆ. ಅಲ್ಲಿರುವ ಸ್ನೇಹಿತನನ್ನು ಮಾತನಾಡಿಸಲು ನಿತ್ಯಾನಂದ ಬಂದಿದ್ದರು. ರಾತ್ರಿ 9.30ರ ಹೊತ್ತಿಗೆ ಸ್ಟಡಿ ಸೆಂಟರ್ ಬಳಿ ಬಂದು … Read more