ಮಳೆ, ಬಿಸಿಲು ಲೆಕ್ಕಿಸದೆ ಮುಂದುವರೆದ ಮುಷ್ಕರ, ಪೌರ ಕಾರ್ಮಿಕರ ಬೇಡಿಕೆಗಳೇನು?

Paurakarmika-Protest-in-Shimoga

SHIVAMOGGA LIVE NEWS | SHIMOGA | 2 ಜುಲೈ 2022 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ್ಯಂತ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಎರಡನೆ ದಿನವು ಮುಂದುವರೆದಿದೆ. ಬಿಸಿಲು, ಮಳೆಯನ್ನು ಲೆಕ್ಕಿಸದೆ ರಾಜ್ಯಾದ್ಯಂತ ಪೌರ ಕಾರ್ಮಿಕರು ಮುಷ್ಕರ (PROTEST) ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಶುಕ್ರವಾರ ಇಡೀ ದಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಇವತ್ತು ನಗರದ ಫ್ರೀಡಂ ಪಾರ್ಕ್’ನಲ್ಲಿ ಪ್ರತಿಭಟನೆ ಮಾಡಿದರು. ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರು, ವಿವಿಧ ಸಂಘಟನೆಗಳು ಪೌರ … Read more

KSRTC ಬಸ್, ಕ್ಯಾಂಟರ್ ಮುಖಾಮುಖಿ ಡಿಕ್ಕಿ

anter-and-KSRTC-bus-accident-at-Yedur.

SHIVAMOGGA LIVE NEWS | HOSANAGARA | 2 ಜುಲೈ 2022 KSRTC BUS ಮತ್ತು ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಮತ್ತು ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಮಾಸ್ತಿಕಟ್ಟೆ ಸಮೀಪದ ಯಡೂರು ಗ್ರಾಮದ ಮೇಕೇರಿ ಬಳಿ ಘಟನೆ ಸಂಭವಿಸಿದೆ. ಕುಂದಾಪುರದಿಂದ ಇಟ್ಟಿಗೆ ತುಂಬಿಕೊಂಡು ಶಿವಮೊಗ್ಗಕ್ಕೆ ತೆರಳುತ್ತಿದ್ದ ಕ್ಯಾಂಟರ್ ಲಾರಿ ಮತ್ತು ಬೆಂಗಳೂರಿನಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಬಸ್ (KSRTC BUS) ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕ ಮತ್ತು ಬಸ್ಸಿನಲ್ಲಿದ್ದ … Read more

ಶಿವಮೊಗ್ಗದ ಅಪರ ಜಿಲ್ಲಾಧಿಕಾರಿಗೆ ಸರ್ವೋತ್ತಮ ಪ್ರಶಸ್ತಿ

ADC-Nagendra-F-Honnali

SHIVAMOGGA LIVE NEWS | SHIMOGA | 2 ಜುಲೈ 2022 ಜನಪರ ಉತ್ತಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಪ್ರಶಸ್ತಿಗೆ (AWARD) ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಾಳಿ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಸರ್ಕಾರಿ ನೌಕರರನ್ನು ಈ ಪ್ರಶಸ್ತಿಗೆ (AWARD) ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಾಳಿ ಅವರನ್ನು ರಾಜ್ಯಮಟ್ಟದ ಆಯ್ಕೆ ಸಮಿತಿ ಆಯ್ಕೆ ಮಾಡಿ … Read more

ಟೈಲರ್ ಬರ್ಬರ ಹತ್ಯೆಗೆ ಖಂಡಿಸಿ ಶಿವಮೊಗ್ಗದಲ್ಲಿ ಆಕ್ರೋಶ

Tailor-Association-protest-in-Shimoga

SHIVAMOGGA LIVE NEWS | SHIMOGA | 2 ಜುಲೈ 2022 ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಕರ್ನಾಟಕ ಸ್ಟೇಟ್ ಟೈಲರ್ (TAILOR) ಅಸೋಸಿಯೇಶನ್ ಉತ್ತರ ಮತ್ತು ದಕ್ಷಿಣ ವಲಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕನ್ನಯ್ಯಲಾಲ್ ಹತ್ಯೆ ನೋವು ಉಂಟು ಮಾಡಿದೆ. ಪ್ರಸ್ತುತ ಟೈಲರ್’ಗಳು (TAILOR) ಅಸಂಘಟಿತ ವಲಯದ ಭಾಗವಾಗಿದ್ದೇವೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಟೈಲರ್’ಗಳು ರಾಜ್ಯದಲ್ಲಿ ವೃತ್ತಿಯನ್ನು ಮಾಡುತ್ತಿದ್ದಾರೆ. ಆದರೆ ಸರ್ಕಾರದ ವತಿಯಿಂದ ಯಾವುದೆ ಭದ್ರತೆ … Read more

ಶಿವಮೊಗ್ಗದ ಅಧಿಕಾರಿಗೆ ಮುಖ್ಯಮಂತ್ರಿ ಪ್ರಶಸ್ತಿ

CM-award-For-Commercial-Tax-officer

SHIVAMOGGA LIVE NEWS | SHIMOGA | 2 ಜುಲೈ 2022 ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಜೆ.ಆರ್. ಉದಯಕುಮಾರ್ ಅವರಿಗೆ ಮುಖ್ಯಮಂತ್ರಿಗಳ ಪ್ರಶಸ್ತಿ  (CM MEDAL) ದೊರೆತಿದೆ. ಉದಯಕುಮಾರ್ ಅವರು ಶಿವಮೊಗ್ಗದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರ ಕಚೇರಿಯ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತೀರ್ಥಹಳ್ಳಿ ತಾಲೂಕಿನ ಜಾಂಬವಳ್ಳಿ ಗ್ರಾಮದವರಾಗಿದ್ದಾರೆ. ಉದಯ ಕುಮಾರ್ ಅವರ ಅತ್ಯುತ್ತಮ ಸೇವೆ ಗುರುತಿಸಿ ಮುಖ್ಯಮಂತ್ರಿಗಳ … Read more

ಸಿಗಂದೂರು ಚೌಡೇಶ್ವರಿ ದೇವಿ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ

Siganduru-Temple-Aridra-Rain-pooje

SHIVAMOGGA LIVE NEWS | SAGARA | 2 ಜುಲೈ 2022 ಮಲೆನಾಡಿನಲ್ಲಿ ಆರಿದ್ರ ಮಳೆ ಆರಂಭವಾದ ಹಿನ್ನೆಲೆ ಸಾಗರ ತಾಲೂಕಿನ ಸಿಗಂದೂರು (SIGANDUR) ಶ್ರೀ ಚೌಡೇಶ್ವರಿ ದೇವಿಯ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪ ಅವರು ಮೂಲ ದೇವರಿಗೆ ಪೂಜೆ ಸಲ್ಲಿಸಿದರು. ಸೀಗೆ ಕಣಿವೆಯಲ್ಲಿ (SIGANDUR) ಶ್ರೀ ಚೌಡೇಶ್ವರಿ ದೇವಿಯ ಮೂಲ ದೇವರಿದೆ. ಇಲ್ಲಿ ಆರಿದ್ರಾ ಮಳೆ ಹಿನ್ನೆಲೆ ಪೂಜೆ ಸಲ್ಲಿಸಲಾಯಿತು. ಈ ಭಾರಿ ಉತ್ತಮ ಮಳೆಯಾಗಲಿ ಎಂದು ಧರ್ಮದರ್ಶಿ … Read more

BREAKING NEWS | ಬೆಳ್ಳಂಬೆಳಗ್ಗೆ ಬಸ್ ಡಿಕ್ಕಿ, ಪತ್ರಿಕೆ ಹಂಚಲು ತೆರಳುತ್ತಿದ್ದ ಯುವಕ ಸಾವು

Sagara-Bus-Cycle-Accident-Near-IB

SHIVAMOGGA LIVE NEWS | SAGARA | 2 ಜುಲೈ 2022 KSRTC BUS ಡಿಕ್ಕಿಯಾಗಿ ಪತ್ರಿಕೆ ವಿತರಕರೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಲಮಕ್ಕಿಯ ಗಣೇಶ್ (25) ಮೃತ ದುರ್ದೈವಿ. ಸಾಗರ ಪ್ರವಾಸಿ ಮಂದಿರದ ಬಳಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದ KSRTC BUS, ಪತ್ರಿಕೆ ವಿತರಣೆಗೆ ಹೊರಟಿದ್ದ ಸೈಕಲ್’ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೈಕಲ್ ಹಿಂಬದಿ ಸವಾರ ರಾಹುಲ್ ಗಾಯಗೊಂಡಿದ್ದು ಪ್ರಣಪಾಯದಿಂದ … Read more

ಇನ್ಮುಂದೆ ಸಕ್ರೆಬೈಲಿನಲ್ಲಿ ಆನೆಗಳನ್ನು ನೊಡುವುದರ ಜೊತೆಗೆ ದೋಣಿ ವಿಹಾರಕ್ಕೂ ಚಾನ್ಸ್

Boat-Riding-in-Shimoga-Sakrebyle-Elephant-Camp

SHIVAMOGGA LIVE NEWS | SHIMOGA | 2 ಜುಲೈ 2022 ಇನ್ಮುಂದೆ ಸೆಕ್ರಬೈಲಿಗೆ ಹೋದರೆ ಆನೆಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತುಂಗಾ ನದಿ ಹಿನ್ನೀರಿನಲ್ಲಿ ದೋಣಿ (BOAT RIDE) ವಿಹಾರವನ್ನೂ ಮಾಡಬಹುದಾಗಿದೆ. ತುಂಗೆಯ ಹಿನ್ನೀರಿನಲ್ಲಿ ಬೋಟ್ ಸ್ಪೋರ್ಟ್ಸ್’ಗೆ ಚಾಲನೆ ನೀಡಲಾಗಿದೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಚಾಲನೆ ನೀಡಿದರು. ಒಂದು ಬೋಟ್, ಎರಡು ಕಯಾಕ್ ಬೋಟ್’ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಸಂಸದರಿಂದ ದೋಣಿ ಸವಾರಿ ದೋಣಿ ವಿಹಾರಕ್ಕೆ (BOAT RIDE) ಚಾಲನೆ ನೀಡಿದ ಬಳಿಕ ಸಂಸದ ಬಿ.ವೈ.ರಾಘವೇಂದ್ರ ಅವರು … Read more

ಡ್ರೈವರ್’ಗೆ ಚಾಲಕನಾದ ಶಿವಮೊಗ್ಗ RTO ಅಧಿಕಾರಿ, ವಿಭಿನ್ನ ಬೀಳ್ಕೊಡುಗೆ

RTO-Deepak-becomes-driver-for-a-driver

SHIVAMOGGA LIVE NEWS | SHIMOGA | 2 ಜುಲೈ 2022 ನಿವೃತ್ತರಾದ ಚಾಲಕರೊಬ್ಬರನ್ನು (DRIVER) ಅಧಿಕಾರಿಯೊಬ್ಬರು ತಾವೇ ಕಾರು ಚಾಲನೆ ಮಾಡಿ, ಮನೆಗೆ ಬಿಟ್ಟು ವಿಭಿನ್ನವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿಗೌಡ ಅವರು ನಿವೃತ್ತರಾಗಿದ್ದಾರೆ. ಅವರಿಗಾಗಿ ಶಿವಮೊಗ್ಗ RTO ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದ ಬಳಿಕ ಸ್ವಾಮಿಗೌಡ ಅವರನ್ನು ಸಾರಿಗೆ ಅಧಿಕಾರಿ ದೀಪಕ್ ಎಲ್. ಅವರು, ಅವರ ಮನೆಗೆ ಬಿಟ್ಟು ಬಂದರು. ಸಾರಿಗೆ ಅಧಿಕಾರಿ … Read more

ಶಿವಮೊಗ್ಗ, ಸಾಗರ ವಿಭಾಗದ ಅಸಿಸ್ಟೆಂಟ್ ಕಮಿಷನರ್’ಗಳ ವರ್ಗಾವಣೆ

SHIVAMOGGA-CITY-TALUK-NEWS-

SHIVAMOGGA LIVE NEWS | SHIMOGA | 1 ಜುಲೈ 2022 ಶಿವಮೊಗ್ಗ ಮತ್ತು ಸಾಗರ ಉಪ ವಿಭಾಗದ ಉಪ ವಿಭಾಗಾಧಿಕಾರಿಗಳನ್ನು ವರ್ಗಾವಣೆ (TRANSFER) ಮಾಡಲಾಗಿದೆ. ಶಿವಮೊಗ್ಗ ಉಪ ವಿಭಾಗಾಧಿಕಾರಿ ಆಗಿದ್ದ ಟಿ.ವಿ.ಪ್ರಕಾಶ್ ಅವರನ್ನು ಹರಪನಹಳ್ಳಿ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಬೆಳಗಾವಿ ಜಿಲ್ಲೆಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ದೊಡ್ಡಗೌಡರ್ ಅವರನ್ನು ವರ್ಗಾವಣೆ (TRANSFER) ಮಾಡಲಾಗಿದೆ. ಹಾವೇರಿ ಜಿಲ್ಲಾ ಯೋಜನಾ ನಿರ್ದೇಶಕಿ ಪಲ್ಲವಿ ಸಾತೇನಹಳ್ಳಿ ಅವರನ್ನು ಸಾಗರ ಉಪ … Read more