ಶಿವಮೊಗ್ಗ ನಗರದ ಹಲವು ಕಡೆ ಮಾರ್ಚ್ 11ರಂದು ಬೆಳಗ್ಗೆಯಿಂದ ಕರೆಂಟ್ ಇರಲ್ಲ

POWER-CUT-UPDATE-NEWs ELECTRICITY

SHIVAMOGGA LIVE NEWS | 10 ಮಾರ್ಚ್ 2022 ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮೆಸ್ಕಾಂ ನಗರ ಉಪ ವಿಭಾಗ 2ರ ಘಟಕ 5 ಮತ್ತು 6ರ ವಿದ್ಯುತ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರ್ಚ್ 11ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಗರದ ವಿವಿಧೆಡೆ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಪಿಯರ್‍ಲೈಟ್ ಪೇಪರ್ ಪ್ಯಾಕೇಜ್, ಕೆ.ಆರ್ ಕುಡಿಯುವ ನೀರಿನ ಸ್ಥಾವರ, ಶಂಕರ್‍ರೈಸ್ ಮಿಲ್, … Read more

ಶಿವಮೊಗ್ಗ ಮೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ, ಇಲ್ಲಿದೆ ರೈತರ 5 ಪ್ರಮುಖ ಡಿಮಾಂಡ್

Shimoga-Famers-Protest-in-front-of-Mescom

SHIVAMOGGA LIVE NEWS | 10 ಮಾರ್ಚ್ 2022 ರೈತರ ಪಂಪ್ ಸೆಟ್’ಗಳಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರೈಲ್ವೆ ನಿಲ್ದಾಣದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ರೈತರ ಡಿಮಾಂಡ್’ಗಳೇನು? ಡಿಮಾಂಡ್ 1 : ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು. ಡಿಮಾಂಡ್ 2 : ಸುಟ್ಟು ಹೋದ ಟಿಸಿಗಳನ್ನು … Read more

‘ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕನಸಾಗಿಯೇ ಉಳಿಯಲಿದೆ’

Shimoga MP BY Raghavendra

SHIVAMOGGA LIVE NEWS | 10 ಮಾರ್ಚ್ 2022 ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸಾಗಿಯೇ ಉಳಿಯಲಿದೆ ಅನ್ನುವುದನ್ನ ಪಂಚ ರಾಜ್ಯ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಿಗೆ ಸಂಸದ ರಾಘವೇಂದ್ರ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, BJP ನಾಯಕರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. … Read more

ಶಿವಮೊಗ್ಗದ ಮಿಷನ್ ಕಾಂಪೌಂಡ್’ನಲ್ಲಿ ಪೊಲೀಸರ ದಾಳಿ, ಮೂವರು ಅರೆಸ್ಟ್

Doddapete-Police-Station-General-Image.

SHIVAMOGGA LIVE NEWS | 10 ಮಾರ್ಚ್ 2022 ಶಿವಮೊಗ್ಗದ ಮಿಷನ್ ಕಾಂಪೌಂಡ್ ಪಕ್ಕದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮೂವರನ್ನು ಬಂಧಿಸಲಾಗಿದ್ದು, 90 ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಸಚಿನ್ ಅಲಿಯಾಸ್ ಶ್ಯಾಡೋ (26), ಸಂಜಯ್ (22), ಅರ್ಬಾಜ್ ಷರೀಫ್ (19) ಬಂಧಿತರು. ಸಂತ ಥಾಮಸ್ ಭವನದ ಪಕ್ಕದ ಖಾಲಿ ಜಾಗದಲ್ಲಿ ಈ ಮೂವರು ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ … Read more

ಸಾಗರದಲ್ಲಿ 21 ಕ್ವಿಂಟಾಲ್ ಅಡಕೆ ಕದ್ದವರ ಬಳಿ ಸಿಕ್ತು 23 ಕ್ವಿಂಟಾಲ್ ಅಡಕೆ

Sagara-Areca-Theft-Case-arrest-Sagara-Rural

SHIVAMOGGA LIVE NEWS | 10 ಮಾರ್ಚ್ 2022 ಮನೆ ಬಳಿ ಒಣಗಲು ಹಾಕಿದ್ದ ಅಡಕೆ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. 23 ಕ್ವಿಂಟಾಲ್ ಅಡಕೆಯನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳದ ಹಬೀಬ್ ಖಾನ್ ಅಲಿಯಾಸ್ ಅಪ್ಪು (24), ಮಹಮ್ಮದ್ ಮರ್ದನ್ (21), ರುಮಾನ್ (20) ಎಂಬುವವರನ್ನು ಬಂಧಿಸಲಾಗಿದೆ. ಫೈರೋಜ್ ಖಾನ್ (22) ಎಂಬಾತನನ್ನು ಮಾ.4ರಂದು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳುವಾಗಿದ್ದು 21 ಕ್ವಿಂಟಾಲ್, ಸಿಕ್ಕಿದ್ದು 23 ಕ್ವಿಂಟಾಲ್ ತಲವಾಟ ಗ್ರಾಮದಲ್ಲಿ ರೈತರೊಬ್ಬರು ಮಾರ್ಚ್ 2ರಂದು … Read more