ಖಾಸಗಿ ಬಸ್, ಓಮ್ನಿ ಕಾರು ಮುಖಾಮುಖಿ ಡಿಕ್ಕಿ

Car-Bus-Accident-at-Yedhealli.

SHIVAMOGGA LIVE NEWS | ACCIDENT | 12 ಮೇ 2022 ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಭದ್ರಾವತಿ ತಾಲೂಕು ಯಡೆಹಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಚನ್ನಗಿರಿ ಕಡೆಯಿಂದ ಬರುತ್ತಿದ್ದ ಮಾರುತಿ ಓಮ್ನಿ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಾರಿನ … Read more

ರಾತ್ರಿ ಬಾಗಿಲು ಹಾಕುವಾಗ ಅಂಗಡಿ ಕ್ಯಾಶ್ ಡ್ರಾದಲ್ಲಿಟ್ಟ ಲಕ್ಷ ಲಕ್ಷ ಹಣ ಬೆಳಗಾಗುವುದರಲ್ಲಿ ಮಾಯ

Gandhi-Bazaar-During-Night.

SHIVAMOGGA LIVE NEWS | CASH THEFT| 12 ಮೇ 2022 ಗಾಂಧಿ ಬಜಾರ್’ನ ಪ್ರತಿಷ್ಠಿತ ಬಟ್ಟೆ ಅಂಗಡಿಯೊಂದರ ಕ್ಯಾಷ್ ಬಾಕ್ಸ್’ನಲ್ಲಿದ್ದ ಲಕ್ಷಾಂತರ ರೂ. ಹಣ ಕಳ್ಳತನವಾಗಿದೆ. ರಾತ್ರಿ ವೇಳೆ ಅಂಗಡಿಯೊಳಗೆ ನುಗ್ಗಿರುವ ಕಳ್ಳರು, ಕ್ಯಾಷ್ ಬಾಕ್ಸ್’ನಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಹಣ ಕಳ್ಳತನವಾಗಿದೆ. ಮೇ 10ರಂದು ರಾತ್ರಿ ಎಂದಿನಂತೆ ಅಂಗಡಿ ಬಾಗಿಲು ಹಾಕಲಾಗಿದೆ. ಬೆಳಗ್ಗೆ ಅಂಗಡಿ ಬಾಗಿಲು ತೆಗೆದಾಗ ಕ್ಯಾಷ್ ಬಾಕ್ಸ್’ನಲ್ಲಿದ್ದ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹಣ … Read more

ಶಿವಮೊಗ್ಗ ತ್ಯಾವರೆಕೊಪ್ಪ ಸಫಾರಿಯಲ್ಲಿ ಹುಲಿ ಸಾವು

Tiger-Dies-at-Lion-Tiger-safari-in-Shimoga

SHIVAMOGGA LIVE NEWS | TIGER| 12 ಮೇ 2022 ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಗಂಡು ಹುಲಿಯೊಂದು ಮೃತಪಟ್ಟಿದೆ. ರಾಮ (17) ಮೃತಪಟ್ಟಿರುವ ಹುಲಿ. ವಯೋಸಹಜ ಕಾರಣದಿಂದ ಹುಲಿ ಮೃತಪಟ್ಟಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾನೂನು ರೀತಿ ಮರಣೋತ್ತರ ಪರೀಕ್ಷೆ ನಡೆದಿದ್ದು, ದಹನ ಪ್ರಕ್ರಿಯೆ ನಡಸಲಾಗಿದೆ. ಸದ್ಯ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಸ್ತುತ 5 ಹುಲಿಗಳಿವೆ. ಇದನ್ನೂ ಓದಿ ⇒ ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ತೀರ್ಥಹಳ್ಳಿಯಲ್ಲಿ ಪತಿ ಎದುರಲ್ಲೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ

Thirthahalli-Board-in-Thirthahalli-Taluk

SHIVAMOGGA LIVE NEWS | RAPE | 12 ಮೇ 2022 ಪತಿ ಎದುರಲ್ಲೆ ಪತ್ನಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲಿ ಘಟನೆ ಸಂಭವಿಸಿದೆ. ರಾತ್ರಿ ಬಸ್ ಇಳಿದು ನಡೆದು ಹೋಗುತ್ತಿದ್ದ ದಲಿತ ದಂಪತಿ ಮೇಲೆ ನಾಲ್ವರ ಗುಂಪೊಂದು ದಾಳಿ ಮಾಡಿದೆ. ಪತಿ ಮೇಲೆ ಹಲ್ಲೆ ನಡೆಸಿ, ಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ವಾಸಿ 26 ವರ್ಷದ ಮಹಿಳೆಯ ಮಾನಭಂಗಕ್ಕೆ ಯತ್ನಿಸಲಾಗಿದೆ. … Read more

ಮೆಗ್ಗಾನ್ ಆಸ್ಪತ್ರೆ ಮುಂದೆ ರಾತ್ರೋರಾತ್ರಿ ದಿಢೀರ್ ಪ್ರತಿಭಟನೆ, ಕಾರಣವೇನು?

Mc-Gann-Hospital-Kelakere-Poornesh-Protest

SHIVAMOGGA LIVE NEWS | ATTACK | 12 ಮೇ 2022 ಮೆಗ್ಗಾನ್ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಡ್ಯೂಟಿ ಡಾಕ್ಟರ್ ಇಲ್ಲದಿರುವನ್ನು ಖಂಡಿಸಿ ಮೆಗ್ಗಾನ್ ಆಸ್ಪತ್ರೆ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಲಾಯಿತು. ತೀರ್ಥಹಳ್ಳಿಯ ಯುವ ಕಾಂಗ್ರೆಸ್ ಮುಖಂಡ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ಯುವ ಕಾಂಗ್ರೆಸ್ ಮುಖಂಡ ಪೂರ್ಣೇಶ್ ಕೆಳಕೆರೆ ಅವರು ದಿಢೀರ್ ಪ್ರತಿಭಟನೆ ನಡೆಸಿದರು. ತುರ್ತು ಚಿಕಿತ್ಸೆ ಅಗತ್ಯವಿದ್ದರೂ ವೈದ್ಯರಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡದೆ ಗಂಟೆಗಟ್ಟಲೆ ಕಾಯಿಸಿದ್ದಾರೆ. ಇದರಿಂದ ಆಕ್ರೋಶಗೊಂಡು ಪೂರ್ಣೇಶ್ ಕೆಳಕೆರೆ … Read more