ಇವತ್ತಿನ ಅಡಕೆ ಧಾರಣೆ | 16 ಮಾರ್ಚ್ 2022

Areca Price in Shimoga APMC

SHIVAMOGGA LIVE NEWS | 16 ಮಾರ್ಚ್ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 15209 34099 ಬೆಟ್ಟೆ 47219 49155 ರಾಶಿ 43009 45891 ಸರಕು 53440 75696 ಶಿರಸಿ ಮಾರುಕಟ್ಟೆ ಚಾಲಿ 35099 39818 ಬೆಟ್ಟೆ 36519 43899 ಬಿಳೆ ಗೋಟು 21899 32213 ರಾಶಿ 45318 47266 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 26099 30889 ಕೋಕ 20199 29989 ತಟ್ಟಿಬೆಟ್ಟೆ 30069 38509 ಬಿಳೆ … Read more

JOB NEWS | ಪ್ರತಿಷ್ಠಿತ ಶಾಲೆಯಲ್ಲಿ ಪ್ರಾಂಶುಪಾಲರು, ಶಿಕ್ಷಕರು ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

jobs news shivamogga live

SHIVAMOGGA LIVE NEWS | 16 ಮಾರ್ಚ್ 2022 ಶಿವಮೊಗ್ಗದ ಮಂದಾರ ಜ್ಞಾನದಾಯಿನಿ ಶಾಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಅರ್ಜಿ ಸಲ್ಲಿಬಹುದಾಗಿದೆ. ಪ್ರಾಂಶುಪಾಲರು, ಶಿಕ್ಷಕರು, ಕಚೇರಿ ಸಿಬ್ಬಂದಿ, ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 24ರಂದು ಬೆಳಗ್ಗೆ 11 ಗಂಟೆಗೆ ಗೋಪಾಳದ ಗೋಪಶೆಟ್ಟಿಕೊಪ್ಪದ ಕ್ಯಾಂಪಸ್’ನಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತರು info@mjsc.edu.in ಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ಸಂಪೂರ್ಣ ವಿವರ ಕೆಳಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ https://mjsc.edu.in/teaching-staff-recruitment/ ಇದನ್ನೂ ಓದಿ | ಇವತ್ತಿನ ಎಲ್ಲಾ … Read more

ತೀರ್ಪು ಬಂದರೂ ಶಿವಮೊಗ್ಗದಲ್ಲಿ ಕೆಲವು ವಿದ್ಯಾರ್ಥಿನಿಯರಿಂದ ಹಿಜಾಬ್’ಗೆ ಪಟ್ಟು

Hijab-Controversy-Continues-in-Shimoga-College.

SHIVAMOGGA LIVE NEWS | 16 ಮಾರ್ಚ್ 2022 ಹೈಕೋರ್ಟ್ ತೀರ್ಪು ಹಿನ್ನೆಲೆ ಹಿಜಾಬ್ ಧರಿಸಿ ಬಂದವರಿಗೆ ಶಾಲೆ, ಕಾಲೇಜುಗಳ ತರಗತಿ ಪ್ರವೇಶವನ್ನು ನಿರಾಕರಿಸಲಾಯಿತು. ಬಹುತೇಕ ಕಡೆ ವಿದ್ಯಾರ್ಥಿನಿಯರು ತೀರ್ಪಿಗೆ ಮನ್ನಣೆ ನೀಡಿದರು. ನಗರದ ಒಂದು ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಹಠ ಹಿಡಿದರು. ಕಾಲೇಜು ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ತರಗತಿಗೆ ತೆರಳಿದ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪು ಬಂದ ನಂತರ ಇವತ್ತು ಶಾಲೆ, ಕಾಲೇಜುಗಳ ತರಗತಿ ಪುನಾರಂಭವಾಗಿವೆ. ಬಹುತೇಕ ಕಡೆ … Read more

ಶಿವಮೊಗ್ಗ – ಭದ್ರಾವತಿ ಮಧ್ಯೆ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ, ಡಿಸಿ ಆದೇಶ

Bhadravathi Name Graphics

SHIVAMOGGA LIVE NEWS | 16 ಮಾರ್ಚ್ 2022 ಭದ್ರಾವತಿಯ ಕಡದಕಟ್ಟೆ ಸಮೀಪ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ರೈಲ್ವೆ ಕ್ರಾಸಿಂಗ್ ಗೇಟ್ ನಂ.34ರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳಿಸಬೇಕಿದೆ. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆ ಹಿನ್ನೆಲೆ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಯಾವುದ ಪರ್ಯಾಯ ಮಾರ್ಗ? ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ಮಿನಿ … Read more

ಚಾರ್ಜ್’ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಪೋಟ, ಹಲವು ವಸ್ತುಗಳು ಭಸ್ಮ, ಹೇಗಾಯ್ತು ಘಟನೆ?

Electric-Bike-Blast-at-Nimbegondi-Village-Near-Holehonnur.

SHIVAMOGGA LIVE NEWS | 16 ಮಾರ್ಚ್ 2022 ಚಾರ್ಜ್’ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ಹಲವು ವಸ್ತುಗಳು ಬೆಂಕಿಗೆ ಆಹುತಿ ಆಗಿವೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಹೊಳೆಹೊನ್ನೂರು ಸಮೀಪದ ನಿಂಬೆಗುಂದಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರಾತ್ರಿ ಚಾರ್ಜ್’ಗೆ ಹಾಕಿದ್ದಾಗ ವಾಹನ ಸ್ಪೋಟಗೊಂಡು ಅವಘಡ ಸಂಭವಿಸಿದೆ. ಹೇಗಾಯ್ತು ಘಟನೆ? ನಿಂಬೆಗುಂದಿ ಗ್ರಾಮದ ಕಾಡಪ್ಪರ ಮಲ್ಲಿಕಾರ್ಜುನ ಎಂಬುವವರಿಗೆ ಸೇರಿದ ಬೈಕ್ ಸ್ಪೋಟಗೊಂಡಿದೆ. ಮಲ್ಲಿಕಾರ್ಜುನ ಅವರ ಮಗ ಕಿರಣ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಕಾಡಪ್ಪರ ಮಲ್ಲಿಕಾರ್ಜುನ … Read more

BREAKING NEWS | ಟ್ಯಾಂಕರ್ ಪಲ್ಟಿ, ಪೆಟ್ರೋಲ್ ತುಂಬಿಸಿಕೊಳ್ಳಲು ನೂಕುನುಗ್ಗಲು

Petrol-Tanker-Accident-at-Javalli

SHIVAMOGGA LIVE NEWS | 16 ಮಾರ್ಚ್ 2022 ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿದೆ. ಈ ಮಧ್ಯೆ ಟ್ಯಾಂಕರ್’ನಲ್ಲಿದ್ದ ಪೆಟ್ರೋಲ್ ತುಂಬಿಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಶಿವಮೊಗ್ಗ ತಾಲೂಕು ಜಾವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಟ್ಯಾಂಕರ್ ಶಿವಮೊಗ್ಗ ಕಡೆಯಿಂದ ಚನ್ನಗಿರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಇನ್ನು, ವಿಚಾರ ತಿಳಿಯುತ್ತಿದ್ದ ಹಾಗೆ ಜನರು ಟ್ಯಾಂಕರ್’ಗೆ ಮುಗಿಬಿದ್ದಿದ್ದಾರೆ. ಅಪಾಯವನ್ನು ಲೆಕ್ಕಿಸದೆ ಕೆಲವರು ಪೆಟ್ರೋಲ್ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಿದರು ಎಂದು ಸ್ಥಳೀಯರು ತಿಳಿಸಿದರು. ಅಗ್ನಿಶಾಮಕ ಸಿಬ್ಬಂದಿ ಭೇಟಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂದುವರೆದ ನಿಷೇಧಾಜ್ಞೆ, ಇವತ್ತು ಶಾಲೆ, ಕಾಲೇಜು ಪುನಾರಂಭ

Police Bus at Shimoga BH Road

SHIVAMOGGA LIVE NEWS | 16 ಮಾರ್ಚ್ 2022 ಹಿಜಾಬ್ ವಿವಾದ ಕುರಿತು ಹೈರ್ಕೋರ್ಟ್ ತೀರ್ಪು ಹಿನ್ನೆಲೆ, ಮುಂಜಾಗ್ರತ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಮಧ್ಯೆ ಇವತ್ತು ಶಾಲೆ, ಕಾಲೇಜುಗಳು ಪುನಾರಂಭವಾಗುತ್ತಿವೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಾರ್ಚ್ 21ರ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಐದು ಜನ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಾಲೆ, ಕಾಲೇಜು ಪುನಾರಂಭ ಹೈಕೋರ್ಟ್ ತೀರ್ಪು … Read more