ಭದ್ರಾ ಎಡದಂಡೆ ನಾಲೆ, ಮುಂಗಾರು ಹಂಗಾಮಿನ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ, ಕಾರಣವೇನು?

Bhadra-dam-General-Image

ಭದ್ರಾವತಿ: ಭದ್ರಾ ಎಡದಂಡೆ ನಾಲೆಗೆ ಹೊಸ ಗೇಟ್‌ (Gate) ಅಳವಡಿಸಲು ಇನ್ನೂ ಒಂದೂವರೆ ತಿಂಗಳು ಕಾಲವಕಾಶ ಬೇಕಿದೆ. ಆದ್ದರಿಂದ ಮುಂಗಾರು ಹಂಗಾಮಿನಲ್ಲಿ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ. ಎಡದಂಡೆ ನಾಲೆ ವ್ಯಾಪ್ತಿಯ ರೈತರು ಮುಂಗಾರು ಭತ್ತ ಸೇರಿದಂತೆ ಹೆಚ್ಚು ನೀರು ಅವಲಂಬಿಸುವ ಬೆಳೆ ಬೆಳೆಯದಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್‌ ಅಳವಡಿಸಬೇಕಿದೆ. ಕಾರ್ಯಪಾಲಕ ಇಂಜಿನಿಯರ್ ವರದಿಯಂತೆ ಗೇಟ್‌ ಅಳವಡಿಕೆಗೆ ಅಂದಾಜು ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಹಾಗಾಗಿ ಪ್ರಸಕ್ತ ಸಾಲಿನ ಮುಂಗಾರು … Read more

ಅಡಿಕೆ ಧಾರಣೆ | 17 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮತ್ತು ಸಾಗರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike RAte). ಶಿವಮೊಗ್ಗ ಮಾರುಕಟ್ಟೆ ಗೊರಬಲು 17410 31196 ಬೆಟ್ಟೆ 51532 58399 ರಾಶಿ 46009 57599 ಸರಕು 55559 92969 ಸಾಗರ ಮಾರುಕಟ್ಟೆ ಕೆಂಪುಗೋಟು 21899 27989 ಕೋಕ 19899 19899 ಚಾಲಿ 32419 35811 ಬಿಳೆ ಗೋಟು 21055 24522 ರಾಶಿ 23819 51349 ಸಿಪ್ಪೆಗೋಟು 13851 15111 ಇದನ್ನೂ ಓದಿ » ಆಗುಂಬೆ ಘಾಟಿ ಸಮೀಪ ಧರೆಗುರುಳಿದ ಮರ, ಕೆಲಕಾಲ ಹೆದ್ದಾರಿ … Read more

ಆಗುಂಬೆ ಘಾಟಿ ಸಮೀಪ ಧರೆಗುರುಳಿದ ಮರ, ಕೆಲಕಾಲ ಹೆದ್ದಾರಿ ಬಂದ್

tree-falls-to-agumbe-road-in-Thirthahalli.

ತೀರ್ಥಹಳ್ಳಿ: ಹೆದ್ದಾರಿಗೆ ಅಡ್ಡಲಾಗಿ ಮರ (Tree) ಬಿದ್ದು ಆಗುಂಬೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆಗುಂಬೆಯಲ್ಲಿರುವ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ ಸಮೀಪದ ಬೃಹತ್‌ ಮರ ಧರೆಗುರುಳಿತ್ತು. ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚರಕ್ಕೆ ಅಡಚಣೆಯಾಗಿತ್ತು. ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಸರತಿಯಲ್ಲಿ ನಿಂತಿದ್ದರು. ಆಂಬುಲೆನ್ಸ್‌ಗಳು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿದ್ದವು. ಇದರಿಂದ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸದ್ಯ ಮರ ತೆರವು ಮಾಡಲಾಗಿದೆ. ವಾಹನ ಸಂಚಾರ ಪುನಾರಂಭವಾಗಿದೆ ಎಂದು ತಿಳಿದು ಬಂದಿದೆ.‌ ಇದನ್ನೂ ಓದಿ … Read more

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 3.30 ಅಡಿ ಏರಿಕೆ, ಇವತ್ತು ಎಷ್ಟಿದೆ ಒಳ ಹರಿವು?

-Linganamakki-Dam-General-Image

ಸಾಗರ: ಲಿಂಗನಮಕ್ಕಿ ಜಲಾಶಯದ (Dam Level) ಒಳ ಹರಿವು ಮತ್ತಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಲಾಶಯದ ನೀರಿನ ಮಟ್ಟ 3.30 ಅಡಿಯಷ್ಟು ಹೆಚ್ಚಳವಾಗಿದೆ. ಜಲಾಶಯದ ಒಳ ಹರಿವು 50,576 ಕ್ಯೂಸೆಕ್‌ ಇದೆ. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು ಒಳ ಹರಿವು ಪ್ರಮಾಣ ಮತ್ತಷ್ಟು ಹೆಚ್ಚಳದ ನಿರೀಕ್ಷೆ ಇದೆ. ಸದ್ಯ ನೀರಿನ ಮಟ್ಟ 1769.70 ಅಡಿಗೆ ತಲುಪಿದೆ. 2550.76 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಇದನ್ನೂ ಓದಿ » ದಾಸರಕಲ್ಲಹಳ್ಳಿಯಲ್ಲಿ ಬೆಳಗ್ಗೆಯಿಂದ ಬಡಿಗೆ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು, ಮಕ್ಕಳು, … Read more

ಇಂದು, ನಾಳೆ ಶಿವಮೊಗ್ಗದಲ್ಲಿ ಎನ್‌ಇಎಸ್‌ ಹವ್ಯಾಸಿ ರಂಗತಂಡದಿಂದ ನಾಟಕ, ಎಲ್ಲೆಲ್ಲಿ ಪ್ರದರ್ಶನ ಇರಲಿದೆ?

Shimoga-News-update

ಶಿವಮೊಗ್ಗ: ಎನ್ಇಎಸ್ ಹವ್ಯಾಸಿ ರಂಗತಂಡದ ವತಿಯಿಂದ ಜೂ.17 ಮತ್ತು 18 ರಂದು ರಷ್ಯಾದ ಖ್ಯಾತ ಬರಹಗಾರ ಆಯ್ಯಂಟನ್ ಚೆಕಾವ್ ಅವರ ಸಣ್ಣ ಕಥೆಗಳನ್ನು ಆಧರಿಸಿದ ಡಾ.ಹೇಮಪಟ್ಟಣಶೆಟ್ಟಿ ವಿರಚಿತ ನಾಟಕ (Drama) ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜೂ.17 ರ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಜೂ.18 ರಂದು ಕರ್ನಾಟಕ ಸಂಘದಲ್ಲಿ ಸಂಜೆ 6.30ಕ್ಕೆ ಪ್ರದರ್ಶನ ಏರ್ಪಡಿಸಲಾಗಿದೆ. ಎನ್ಇಎಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ನಟಿಸಿ, ನಿರ್ದೇಶಿಸಿ, ರಂಗವಿನ್ಯಾಸ ಮಾಡಿದ್ದು, … Read more

ದಾಸರಕಲ್ಲಹಳ್ಳಿಯಲ್ಲಿ ಬೆಳಗ್ಗೆಯಿಂದ ಬಡಿಗೆ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು, ಮಕ್ಕಳು, ಕಾರಣವೇನು?

lunatic-dog-manace-at-dasarakallahalli-in-bhadravathi-taluk

ಭದ್ರಾವತಿ: ಹುಚ್ಚು (Lunatic) ನಾಯಿಯ ಹಾವಳಿಯಿಂದ ಆತಂಕಕ್ಕೀಡಾದ ಗ್ರಾಮಸ್ಥರು ಬಡಿಗೆಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವಂತಾಗಿದೆ. ಭದ್ರಾವತಿ ತಾಲೂಕು ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆಯಿಂದ ಜನ ಬಡಿಗೆ ಸಾಹಿತ ಓಡಾಡುತ್ತಿದ್ದಾರೆ. ಹುಚ್ಚು ನಾಯಿಯೊಂದು ಒಂಭತ್ತು ಮಕ್ಕಳು ಸೇರಿ ಹಲವರಿಗೆ ಕಡಿದಿದೆ. ಕೆಲವರು ನಾಯಿ ದಾಳಿ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ಗಾಯಗೊಂಡಿದ್ದಾರೆ. ನಾಯಿ ಕಡಿತಕ್ಕೆ ಒಳಗಾದವರು ಮತ್ತು ಓಡಿ ಬಿದ್ದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದನ, ಕರುಗಳ ಮೇಲು ಹುಚ್ಚು ನಾಯಿ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೆಳಗ್ಗೆಯಿಂದ … Read more

ಭದ್ರಾ ಡ್ಯಾಂ ಒಳ ಹರಿವು ತುಸು ಏರಿಕೆ, ಇವತ್ತು ಎಷ್ಟಿದೆ?

Bhadra-Dam-General-Image

ಭದ್ರಾವತಿ: ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆಯಾಗಿದೆ (Dam level). ಇವತ್ತು ಜಲಾಶಯಕ್ಕೆ 6999 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಜಲಾಶಯದ ನೀರಿನ ಮಟ್ಟ 145.5 ಅಡಿಗೆ ಏರಿಕೆಯಾಗಿದೆ. ಇನ್ನು, 1270 ಕ್ಯೂಸೆಕ್‌ ಹೊರ ಹರಿವು ಇದೆ. ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 118.11 ಅಡಿಯಷ್ಟಿತ್ತು. ಇದನ್ನೂ ಓದಿ » ಹುಲಿಕಲ್‌ ಘಾಟಿ, ಹೇರ್‌ ಪಿನ್‌ ತಿರುವಿನಲ್ಲಿ ಕೆಟ್ಟು ನಿಂತ ಲಾರಿ, ಕಿ.ಮೀ. ಉದ್ದಕ್ಕೆ ಟ್ರಾಫಿಕ್‌ ಜಾಮ್

ಹುಲಿಕಲ್‌ ಘಾಟಿ, ಹೇರ್‌ ಪಿನ್‌ ತಿರುವಿನಲ್ಲಿ ಕೆಟ್ಟು ನಿಂತ ಲಾರಿ, ಕಿ.ಮೀ. ಉದ್ದಕ್ಕೆ ಟ್ರಾಫಿಕ್‌ ಜಾಮ್

Traffic-Jam-at-hulikal-ghat-at-hosanagara

ಹೊಸನಗರ: ತಿರುವಿನಲ್ಲಿ ಲಾರಿ ಕೆಟ್ಟು ನಿಂತಿರುವುದರಿಂದ ಹುಲಿಕಲ್‌ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ (Traffic) ಸ್ಥಗಿತಗೊಂಡಿದೆ. ಭೂ ಕುಸಿತ ಉಂಟಾಗಿದ್ದ ಜಾಗದಲ್ಲಿರುವ ಹೇರ್‌ ಪಿನ್ ತಿರುವಿನಲ್ಲೇ ಲಾರಿ ಕೆಟ್ಟು ನಿಂತಿದೆ. ಇತರೆ ವಾಹನಗಳು ತಿರುವಿನಲ್ಲಿ ಸಾಗಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದೆ. ಕಿಲೋ ಮೀಟರ್‌ಗಟ್ಟಲೆ ದೂರದವರೆಗು ವಾಹನಗಳು ಸರತಿಯಲ್ಲಿ ನಿಂತಿವೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೇಗಿದೆ ಮಳೆ? ಏನೆಲ್ಲ ಹಾನಿಯಾಗಿದೆ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌

ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೇಗಿದೆ ಮಳೆ? ಏನೆಲ್ಲ ಹಾನಿಯಾಗಿದೆ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌

rain-effects-at-hosanagara-taluk-in-Shimoga-district.

ಶಿವಮೊಗ್ಗ: ಜಿಲ್ಲೆಯಾದ್ಯಂತ ಸೋಮವಾರ ಜೋರು ಗಾಳಿ ಸಹಿತ ಭಾರಿ ಮಳೆಯಾಗಿದೆ (Rainfall). ಇದರಿಂದ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಇನ್ನು, ಮಳೆಯಿಂದಾಗಿ ಜಿಲ್ಲೆಯ ಹಲವು ಕಡೆ ಹಾನಿಯು ಸಂಭವಿಸಿದೆ. ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಈ ಭಾಗದಲ್ಲಿಯೇ ಹೆಚ್ಚು ಹಾನಿ ಸಂಭವಿಸಿದೆ. ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಟಾಪ್‌ ನ್ಯೂಸ್‌ ಮನೆ ಗೋಡೆ ಕುಸಿತ ಹೊಸನಗರ: ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ನಿವಾಸಿ ವಿಶ್ವನಾಥ್‌ ಅವರ ಮನೆ ಮತ್ತು ಕೊಟ್ಟಿಗೆಯ ಗೋಡೆ … Read more

ಶಿವಮೊಗ್ಗದ ಹವಾಮಾನ ವರದಿ | 17 ಜೂನ್‌ 2025 | ಜಿಲ್ಲೆಗೆ ಆರೆಂಜ್‌ ಅಲರ್ಟ್‌, ಇವತ್ತು ಎಷ್ಟಿದೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಗೆ ಇವತ್ತು ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಇವತ್ತು ಜೋರು ಮಳೆ, ರಭಸವಾಗಿ ಮೇಲ್ಮೈ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. (Weather Report) ಸೋಮವಾರ ಇಡೀ ದಿನ ಜಿಲ್ಲೆಯಲ್ಲಿ ಮಳೆಯಾಗಿತ್ತು. ಇದರಿಂದ ತಾಪಮಾನ ಇಳಿಕೆಯಾಗಿದ್ದು, ಇವತ್ತೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ … Read more