ಶಂಕರಮಠ ಸಮೀಪ ಕಚೇರಿ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆ

bike theft reference image

SHIVAMOGGA LIVE NEWS | 19 OCTOBER 2023 SHIMOGA : ಕಚೇರಿ ಮುಂಭಾಗ ನಿಲ್ಲಿಸಿದ್ದ ಸ್ಕೂಟಿ ಕಳ್ಳತನವಾಗಿದೆ (Bike theft) ಎಂದು ಪತ್ರಕರ್ತರೊಬ್ಬರು ದೂರು ನೀಡಿದ್ದಾರೆ. ಶಿವಮೊಗ್ಗದ ಶಂಕರಮಠ ಸರ್ಕಲ್‌ ಹಿಂಭಾಗದ ರಸ್ತೆಯಲ್ಲಿ ಅ.8ರಂದು ಘಟನೆ ಸಂಭವಿಸಿದೆ. ಪ್ರಕಾಶ ಕಾಂಪ್ಲೆಕ್ಸ್‌ ಎದುರು ಸ್ಕೂಟಿ ನಿಲ್ಲಿಸಿ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್‌ ಅವರು ಕಚೇರಿಗೆ ತೆರಳಿದ್ದರು. ಹೊರ ಬಂದು ನೋಡಿದಾಗ ಸ್ಕೂಟಿ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ನಂತರ ಕೋಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ- ದಸರಾ ಹಿನ್ನೆಲೆ, … Read more

ತಾಲೂಕು ಕಚೇರಿಗೆ MLA ದಿಢೀರ್‌ ಭೇಟಿ, ಹಾಜರಾತಿ ಪುಸ್ತಕ ತೆಗೆದು ನೋಡಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿ

Home-Minister-Araga-Jnanendra-Press-meet-in-Shimoga.

SHIVAMOGGA LIVE NEWS | 19 OCTOBER 2023 THIRTHAHALLI : ಸಾರ್ವಜನಿಕರ ದೂರಿನ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರ (Araga Jnanendra) ಅವರು ತೀರ್ಥಹಳ್ಳಿ ತಾಲೂಕು ಕಚೇರಿ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಚೇರಿ ಅವ್ಯವಸ್ಥೆ ಕಂಡು ಗರಂ ಆದರು. ಬುಧವಾರ ಮಧ್ಯಾಹ್ನ ಶಾಸಕ ಆರಗ ಜ್ಞಾನೇಂದ್ರ ಅವರು ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿದರು. ಈ ಸಂದರ್ಭ ಕಚೇರಿಯ ವಿವಿಧೆಡೆ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿ ಸಿಡಿಮಿಡಿಗೊಂಡರು. ಹಾಜರಾತಿ ಪುಸ್ತಕ ತರಿಸಿಕೊಂಡು ಪರಿಶೀಲಿಸಿದರು. … Read more

ಬಸವಣ್ಣನ ಫೋಟೊಗೆ ಹಾನಿ, ಶಿವಮೊಗ್ಗದಲ್ಲಿ ಬಸವಾಭಿಮಾನಿಗಳ ಆಕ್ರೋಶ

191023-Protest-against-miscrients-by-basavanna-fans.webp

SHIVAMOGGA LIVE NEWS | 19 OCTOBER 2023 SHIMOGA : ಜಗಜ್ಯೋತಿ ಬಸವಣ್ಣನವರ (Basavanna) ಭಾವಚಿತ್ರವನ್ನು ವಿರೂಪಗೊಳಿಸಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಬಸವಾಭಿಮಾನಿಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ (Protest) ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಇದನ್ನೂ ಓದಿ- ವಿಐಎಸ್‌ಎಲ್‌ ಶತಮಾನೋತ್ಸವ, ಭದ್ರಾವತಿಯಲ್ಲಿ ನಟ ದೊಡ್ಡಣ್ಣ ನೇತೃತ್ವದಲ್ಲಿ ಮಹತ್ವದ ಮೀಟಿಂಗ್‌ ಕಲುಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಬಸವಣ್ಣನ ಭಾವಚಿತ್ರ ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ … Read more

ಚೋರಡಿ ಸುತ್ತಮುತ್ತ ಕಾಡಾನೆ ಪ್ರತ್ಯಕ್ಷ, ತೋಟ, ಗದ್ದೆಯಲ್ಲಿ ಸಂಚಾರ, ಬೆಳೆ ನಷ್ಟದಿಂದ ಕಂಗಾಲದ ರೈತ

191023-Elephant-enters-agriculture-fields-near-choradi.webp

SHIVAMOGGA LIVE NEWS | 19 OCTOBER 2023 SHIMOGA : ಚೋರಡಿ ಸಮೀಪದ ಕೆಂಚನಾಳ, ಹೊರಬೈಲು ಸುತ್ತಮುತ್ತ ಕಾಡಾನೆಗಳು ಗದ್ದೆ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಳೆ ಹಾನಿ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಎಲ್ಲೆಲ್ಲಿ ದಾಳಿ ಮಾಡಿವೆ? ಎರಡು ದಿನದ ಹಿಂದೆ ಕೆಂಚನಾಳ ಸಮೀಪದ ಗಾಳಿಬೈಲಿನಲ್ಲಿ ಮೂರು ಆನೆಗಳು ಗದ್ದೆ ಮತ್ತು ತೋಟಕ್ಕೆ ನುಗ್ಗಿ ಭತ್ತ, ಅಡಿಕೆ, ಬಾಳೆ ಹಾಳು ಮಾಡಿವೆ. ಹೊರಬೈಲಲ್ಲಿ … Read more

ಗಾಜನೂರು ಜವಾಹರ ನವೋದಯ ಶಾಲೆ 9, 11ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

191023 Gajanuru Jawahar Navodaya School.webp

SHIVAMOGGA LIVE NEWS | 19 OCTOBER 2023 SHIMOGA : ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿನಲ್ಲಿ 9 ಮತ್ತು 11ನೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2023-24ನೇ ಸಾಲಿನಲ್ಲಿ ಸರ್ಕಾರಿ ಅಥವಾ ಸರ್ಕಾರೇತರ ಶಾಲೆಗಳಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು 9ನೇ ತರಗತಿಯ ಪ್ರವೇಶಕ್ಕೆ ಜಾಲತಾಣ https://cbseitms.nic.in/2023/nvsix ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರಥಮ ಪಿಯುಸಿ. ಪ್ರವೇಶಕ್ಕೆ ಜಾಲತಾಣ https://cbseitems.nic.in/2023/nvsix_11 ಮೂಲಕ … Read more

ಶಿವಮೊಗ್ಗ TO ಹೈದರಾಬಾದ್‌, ಗೋವಾ, ತಿರುಪತಿ ವಿಮಾನದ ಹಾರಾಟದ ದಿನಾಂಕ ಬದಲು, ಯಾವುದು ಹೊಸ ಡೇಟ್‌?

Star-Air-to-start-flight-from-shimoga-RQY

SHIVAMOGGA LIVE NEWS | 19 OCTOBER 2023 SHIMOGA : ಹೈದರಾಬಾದ್‌, ಗೋವಾ ಮತ್ತು ತಿರುಪತಿಯಿಂದ ಶಿವಮೊಗ್ಗಕ್ಕೆ ನ.17ರಿಂದ ವಿಮಾನಯಾನ ‍(FLIGHT) ಸೇವೆ ಆರಂಭಿಸುವುದಾಗಿ ಘೋಷಿಸಿದ್ದ ಸ್ಟಾರ್‌ ಏರ್‌ಲೈನ್ಸ್‌ (Star Air) ಈಗ ದಿನಾಂಕ ಬದಲಾಯಿಸಿದೆ. ನ.17ರ ಬದಲಾಗಿ ನ.21ಕ್ಕೆ ಹಾರಾಟ ಶುರು ಮಾಡುವುದಾಗಿ ಪ್ರಕಟಿಸಿದೆ. ಇದನ್ನೂ ಓದಿ- ದಸರಾ ಹಿನ್ನೆಲೆ, ಮೈಸೂರು–ಶಿವಮೊಗ್ಗದ 4 ರೈಲುಗಳಿಗೆ ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ ಸ್ಟಾಪ್‌? ಶಿವಮೊಗ್ಗದಿಂದ ಮೂರು ಪ್ರಮುಖ ನಗರಕ್ಕೆ ವಿಮಾನಯಾನ ಸೇವೆ ಆರಂಭಿಸುವುದಾಗಿ ಸ್ಟಾರ್‌ ಏರ್‌ ಪ್ರಕಟಿಸಿತ್ತು. … Read more