ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ, ಅಧಿಕಾರಿಗಳು ಹೇಳೋದೇನು?

Shimoga-Airport-Night-View-Terminal

SHIVAMOGGA LIVE NEWS | 20 JANUARY 2023 SHIMOGA | ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಈ ನಡುವೆ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶಗಳ (airport jobs) ಕುರಿತು ಯುವಕರು ನಿರೀಕ್ಷೆ ಹೊಂದಿದ್ದರು. ಈಗ ನಿರೀಕ್ಷೆ ಹುಸಿಯಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಫೆ.27ರಂದು ಉದ್ಘಾಟನೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಿದ್ದಾರೆ. ಉದ್ಯೋಗದ ನಿರೀಕ್ಷೆ, ಅಭಿಯಾನ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ (airport jobs) ಲಭಿಸಲಿದೆ ಎಂಬ ನಿರೀಕ್ಷೆ … Read more

ಸಾಗರ, ಆನಂದಪುರ, ಶಿಕಾರಿಪುರ, ಶಿರಾಳಕೊಪ್ಪದಲ್ಲಿ ಆರ್.ಎ.ಎಫ್, ಪೊಲೀಸ್ ಪಥ ಸಂಚಲನ

Police-RAF-route-March-in-Sagara

SHIVAMOGGA LIVE NEWS | 20 JANUARY 2023 SAGARA / SHIKARIPURA | ವಿಧಾನ ಸಭೆ ಚುನಾವಣೆ ಹಿನ್ನೆಲೆ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAPID ACTION FORCE) ವತಿಯಿಂದ ಸಾಗರ, ಆನಂದಪುರ ಮತ್ತು ಶಿಕಾರಿಪುರ ಪಟ್ಟಣಗಳಲ್ಲಿ ಪಥ ಸಂಚಲನ (ROUTE MARCH) ನಡೆಸಲಾಯಿತು. ಆರ್.ಎ.ಎಫ್ ಸಿಬ್ಬಂದಿ ಮತ್ತು ಪೊಲೀಸರು ವಿವಿಧೆಡೆ ಪಥ ಸಂಚಲನ ನಡೆಸಿದರು. ಸಾಗರ ರಿಪೋರ್ಟ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಆರ್.ಎ.ಎಫ್ ಡೆಪ್ಯೂಟಿ ಕಮಾಂಡೆಂಟ್ ನಯನಾ ನಂದಿ ಅವರ ನೇತೃತ್ವದಲ್ಲಿ ಸಾಗರ ಪಟ್ಟಣ … Read more

ಅಡಕೆ ಧಾರಣೆ | 20 ಜನವರಿ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 20 JANUARY 2023 SHIMOGA | ಶಿವಮೊಗ್ಗ ಜಿಲ್ಲೆಯ ಹೊಸನಗರ, ಭದ್ರಾವತಿ ಮಾರುಕಟ್ಟೆಗಳು ಸೇರಿದಂತೆ ರಾಜ್ಯಾದ್ಯಂತ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಹೊಸನಗರ ಮಾರುಕಟ್ಟೆ ಕೆಂಪುಗೋಟು 32081 38009 ಚಾಲಿ 26499 27899 ರಾಶಿ 46609 47349 ಭದ್ರಾವತಿ ಮಾರುಕಟ್ಟೆ ರಾಶಿ 40499 46899 ಶಿರಸಿ ಮಾರುಕಟ್ಟೆ ಕೆಂಪುಗೋಟು 31990 34879 ಚಾಲಿ 33599 42676 ಬೆಟ್ಟೆ 33100 43839 ಬಿಳೆ ಗೋಟು 20899 37600 ರಾಶಿ … Read more

BREAKING NEWS | ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ರೈತರಿಗೆ ಗುಡ್ ನ್ಯೂಸ್

Nandini-Milk-In-Shimoga-Shimul

SHIVAMOGGA LIVE NEWS | 20 JANUARY 2023 SHIMOGA | ಉತ್ಪಾದಕರಿಂದ ಖರೀದಿಸುವ ಹಾಲಿನ (MILK) ದರವನ್ನು ಪರಿಷ್ಕರಿಸಿಲಾಗಿದೆ. ಪ್ರತಿ ಕೆ.ಜಿ. ಹಾಲಿಗೆ 1.50 ರೂ. ಹೆಚ್ಚಳ ಮಾಡಲಾಗಿದೆ ಎಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (SHIMUL) ಪ್ರಕಟಣೆಯಲ್ಲಿ ತಿಳಿಸಿದೆ. ಜ.16ರಂದು ಅಧ್ಯಕ್ಷ ಶ್ರೀಪಾದ್ ರಾವ್ ಅವರ ನೇತೃತ್ವದಲ್ಲಿ ನಡೆದ ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಉತ್ಪಾದಕರಿಂದ ಹಾಲು (MILK) ಖರೀದಿ ದರವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. … Read more

ಶಿವಮೊಗ್ಗದಲ್ಲಿ ವಾಹನ ಸವಾರರಿಗೆ ಗುಲಾಬಿ ಹೂವು ನೀಡಿದ ಪೊಲೀಸ್

PSI-Distribute-Rose-for-Traffic-Awareness

SHIVAMOGGA LIVE NEWS | 20 JANUARY 2023 SHIMOGA : ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರಿ ಠಾಣೆ ಪಿಎಸ್ಐ ಒಬ್ಬರು ವಾಹನ ಸವಾರರಿಗೆ ಗುಲಾಬಿ ಹೂವು (rose) ನೀಡಿ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು. ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಶೈಲಜಾ ಅವರು, ಸಂಚಾರ ನಿಯಮಗಳ ಕುರಿತು ವಿಭಿನ್ನವಾಗಿ ಜಾಗೃತಿ ಮೂಡಿಸಿದರು. ವಾಹನ ಸವಾರರಿಗೆ ಗುಲಬಿ ಹೂವು (rose)  ನೀಡಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು. ರಾಷ್ಟ್ರೀಯ ರಸ್ತೆ ಸುರಕ್ಷತಾ … Read more

ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ವಿವೇಕಾನಂದ ಬಡಾವಣೆ ನಿವಾಸಿಗಳು, ಕಾರಣವೇನು?

Vivekananda-Badavane-Residents-memorandum

SHIVAMOGGA LIVE NEWS | 20 JANUARY 2023 SHIMOGA : ಮತದಾನ ಕೇಂದ್ರ ಬದಲಾವಣೆ (voting booth) ಮಾಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಸ್ವಾಮಿ ವಿವೇಕಾನಂದ ಬಡಾವಣೆಯ ಸೌಹಾರ್ದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸ್ಥಳೀಯರು, ಸ್ವಾಮಿ ವಿವೇಕಾನಂದ ಬಡಾವಣೆಯ ಇ, ಸಿ, ಡಿ, ಬ್ಲಾಕ್ ಗಳ ವ್ಯಾಪ್ತಿ ವಾಸ್ತವವಾಗಿ ಮಹಾನಗರ ಪಾಲಿಕೆಯ 17ನೇ ವಾರ್ಡ್ಗೆ ಸೇರುತ್ತದೆ. ಆದರೆ ಈ ವಾರ್ಡ್ನ ಮತದಾರರನ್ನು 6ನೇ ವಾರ್ಡ್ ಗಾಡಿಕೊಪ್ಪಕ್ಕೆ … Read more

ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ವಿರುದ್ಧ ಹೋರಾಟ ಸಮಿತಿಯಿಂದ ದೂರು

Protest-Againt-Illegal-Sand-Mining-in-thirthahalli

SHIVAMOGGA LIVE NEWS | 20 JANUARY 2023 THIRTHAHALLI : ಮರಳು ಕ್ವಾರೆಯೊಂದರಲ್ಲಿ ಅಕ್ರಮವಾಗಿ ಮರಳು ಸಾಗಣೆ (sand mining) ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಕ್ರಮ ಮರಳು ವಿರುದ್ಧ ಹೋರಾಟ ಸಮಿತಿ ಆರೋಪಿಸಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದೆ. ಆಂದಿನಿ ಮರಳು ಕ್ವಾರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಾಗಣೆ ಮಾಡಲಾಗುತ್ತಿದೆ. ನಿಯಮಾನುಸಾರ ಸಿಸಿಟಿವಿ ದೃಶ್ಯಗಳು ಲಭ್ಯವಿಲ್ಲ. ರಾಜ್ಯದ … Read more

ಪುರಸಭೆ ಅಧಿಕಾರಿಗಳ ವಿರುದ್ಧ ಮೇಸ್ತ್ರಿಗಳು ಗರಂ, ಮುಖ್ಯಾಧಿಕಾರಿ ಕಚೇರಿ ಮುಂದೆ ಹೋರಾಟ

Kattada-Karmika-Mestri-Protest-in-Soraba

SHIVAMOGGA LIVE NEWS | 20 JANUARY 2023 SORABA | ಪುರಸಭೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಕಟ್ಟಡ ಕಾರ್ಮಿಕನ ಕೆಲಸದ ಸಾಮಾಗ್ರಿಗಳನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕನ್ ಸ್ಟ್ರಕ್ಷನ್ ವರ್ಕಸ್ (construction workers) ಸೆಂಟ್ರಲ್ ಯೂನಿಯನ್ ತಾಲೂಕು ಘಟಕದ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಹಿರೇಶಕುನ ಗ್ರಾಮದಲ್ಲಿ ಆಕಾಶ್ ಎಂಬವವರ ನಿರ್ದೇಶನದದಂತೆ ನಿವೇಶನವೊಂದರಲ್ಲಿ ಮೇಸ್ತ್ರಿ ಎಸ್.ರವಿ ಅವರು ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಅಪಘಾತ ಸಂಭವಿಸಿ ಗಾಯಗೊಂಡಿದ್ದ ಹಿನ್ನೆಲೆ … Read more

ಅಡಕೆ ತೋಟದ ಮೇಲೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳ ದಾಳಿ

Saguvani-Trree-raid-by-forest-police-near-Ripponpete

SHIVAMOGGA LIVE NEWS | 20 JANUARY 2023 RIPPONPETE | ಜಮೀನು ಒಂದರಲ್ಲಿ ಸಂಗ್ರಹಿಸಿ ಇಟ್ಟಿದ್ದ ಸಾಗುವಾನಿ ಮರಗಳ ದಿಮ್ಮಿಗಳು ಮತ್ತು ಸೈಜುಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ವಶಕ್ಕೆ (Raid) ಪಡೆದಿದ್ದಾರೆ. ರಿಪ್ಪನ್ ಪೇಟೆ ಸಮೀಪದ ಮಳವಳ್ಳಿ ಗ್ರಾಮದ ನಾಗರಾಜ ಎಂಬುವವರ ಜಮೀನಿನ ಮೇಲೆ ದಾಳಿ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಾಗರದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ (Raid) ನಡೆಸಿ ಲಕ್ಷಾಂತರ ಮೌಲ್ಯದ ಮರದ ದಿಮ್ಮಿಗಳು ಮತ್ತು ಸೈಜುಗಳನ್ನು ವಶಕ್ಕೆ ಪಡೆಯಲಾಗಿದೆ. … Read more

ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ದಿನಾಂಕ ಫಿಕ್ಸ್, ಕಾರಣವೇನು?

Chief-MInister-Basavaraja-Bommai-Press-Meet-in-Shimoga

SHIVAMOGGA LIVE NEWS | 20 JANUARY 2023 SHIMOGA : ಮುಖ್ಯಮಂತ್ರಿ (chief minister) ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 8ರಂದು ಶಿವಮೊಗ್ಗ ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆಸಿದರು. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಹಾಗೂ ಪ್ರಮುಖ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು. ಎಲ್ಲಾ ಇಲಾಖೆಗಳು … Read more