ಶಿವಮೊಗ್ಗದಲ್ಲಿ ತುಸು ಇಳಿಕೆಯಾದ ಮಳೆ, ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Rain-General-Image

SHIVAMOGGA LIVE NEWS | 20 JULY 2024 RAINFALL NEWS : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮಳೆ ಪ್ರಮಾಣ ಸ್ವಲ್ಪ ತಗ್ಗಿದೆ. ಆದರೆ ವಿವಿಧೆಡೆ ನಿರಂತರ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 54.59 ಮಿ.ಮೀ ಮಳೆಯಾಗಿದೆ. ಜುಲೈ 19ರ ಬೆಳಗ್ಗೆ 8.30ರಿಂದ ಜು.20ರಂದು ಬೆಳಗ್ಗೆ 8.30ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 28.20 ಮಿ.ಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 22.80 ಮಿ.ಮೀ., ತೀರ್ಥಹಳ್ಳಿಯಲ್ಲಿ 65.50 ಮಿ.ಮೀ., ಸಾಗರದಲ್ಲಿ 93.10 ಮಿ.ಮೀ., ಶಿಕಾರಿಪುರದಲ್ಲಿ 41.40 ಮಿ.ಮೀ., ಸೊರಬದಲ್ಲಿ 53.40 … Read more

ಅಡಿಕೆ ಧಾರಣೆ | 20 ಜುಲೈ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 20 JULY 2024 ADIKE RATE : ಸೊರಬ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕೆ.ಆರ್‌.ಪೇಟೆ ಮಾರುಕಟ್ಟೆ ಸಿಪ್ಪೆಗೋಟು 11800 11800 ಕೊಪ್ಪ ಮಾರುಕಟ್ಟೆ ಗೊರಬಲು 32599 32599 ಚನ್ನಗಿರಿ ಮಾರುಕಟ್ಟೆ ರಾಶಿ 42100 51600 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 38500 ವೋಲ್ಡ್ ವೆರೈಟಿ 38500 46500 ಶಿರಸಿ ಮಾರುಕಟ್ಟೆ ಚಾಲಿ 32208 36411 ಬೆಟ್ಟೆ 30905 40699 ಬಿಳೆ … Read more

ಗಾಜನೂರಿನ ತುಂಗಾ ಜಲಾಶಯಕ್ಕೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಬಾಗಿನ, ಹೂಳೆತ್ತುವಂತೆ ಶಾಸಕರ ಒತ್ತಾಯ

BY-Raghavendra-offers-bagina-to-tunga-river-at-gajanuru-dam.

SHIVAMOGGA LIVE NEWS | 20 JULY 2024 SHIMOGA : ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಗಾಜನೂರಿನ ಜಲಾಶಯದಲ್ಲಿ (Dam) ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು. ಇದೇ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಸುಮಾರು 80 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ತುಂಗಾ ಮೇಲ್ದಂಡೆ ಯೋಜನೆ ಮೂಲಕ ನೀರು ಒದಗಿಸಲಾಗುತ್ತಿದೆ. ಇದು ಈ ಭಾಗದ ಜನರ ಜೀವನದಿ. ಕಳೆದ ವರ್ಷ ಮಳೆ … Read more

ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಸಂಚಾರಿ ಪೊಲೀಸರಿಂದ ಕಾರ್ಯಾಚರಣೆ, ಭಾರಿ ವಾಹನಗಳಿಗೆ ತಟ್ಟಿದ ಬಿಸಿ

Traffic-police-files-case-for-parking-heavy-vechiles-on-road-side

SHIVAMOGGA LIVE NEWS | 20 JULY 2024 SHIMOGA : ಪ್ರಮುಖ ರಸ್ತೆಗಳ ಬದಿಯಲ್ಲಿ ಭಾರಿ ವಾಹನಗಳನ್ನು (heavy vehicles ) ನಿಲ್ಲಿಸಿದ್ದವರಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶಿವಮೊಗ್ಗ ನಗರದ ವಿವಿಧೆಡೆ ದಿಢೀರ್‌ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ಎಲ್ಲೆಂದರಲ್ಲಿ ನಿಲ್ಲಿಸಿದ್ದ ಲಾರಿ, ಬಸ್ಸುಗಳನ್ನು ತೆರವು ಮಾಡಿಸಿದರು. ಅಲ್ಲದೆ ಮೋಟರ್‌ ವಾಹನ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸಾಗರ ರಸ್ತೆ, ಹೊನ್ನಾಳಿ … Read more

ಸಿಟಿ ಸೆಂಟರ್‌ನಿಂದ ಹೊರ ಬಂದ ಹೊನ್ನಾಳಿ ವ್ಯಕ್ತಿಗೆ ಕಾದಿತ್ತು ಆಘಾತ | ಭದ್ರಾವತಿಯಲ್ಲಿ ಸಿಕ್ಕಿಬಿದ್ದ ವೈರ್‌ ವಂಚಕ

City-Center-Mall-Shimoga-City-Night-View.

SHIVAMOGGA LIVE NEWS | 20 JULY 2024 SHIMOGA : ಸಿಟಿ ಸೆಂಟರ್‌ (CITY CENTRE) ಪಕ್ಕದಲ್ಲಿ ನೆಹರು ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿದೆ. ಹೊನ್ನಾಳಿಯ ಹಾಲೇಶ್‌ ಎಂಬುವವರು ತಮ್ಮ ಸ್ಪ್ಲೆಂಡರ್‌ ಬೈಕ್‌ ಅನ್ನು ಸಿಟಿ ಬಸ್‌ ಸ್ಟಾಪ್‌ ಪಕ್ಕದ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದರು. ಸಂಜೆ 5.30ರ ಹೊತ್ತಿಗೆ ಸಿಟಿ ಸೆಂಟರ್‌ ಮಾಲ್‌ಗೆ ಹೋಗಿ ಸಂಜೆ 6 ಗಂಟೆಗೆ ಹಿಂತಿರುಗಿದಾಗ ಪಾರ್ಕಿಂಗ್‌ ಸ್ಥಳದಲ್ಲಿ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದರೂ ಬೈಕ್‌ ಸಿಕ್ಕಿರಲಿಲ್ಲ. ಏಪ್ರಿಲ್‌ 2ರಂದು ಘಟನೆ … Read more

ಮಾಸ್ತಿಕಟ್ಟೆ, ಹುಲಿಕಲ್‌ನಲ್ಲಿ ಮಳೆ ಬಿರುಸು, ಚಕ್ರಾ ಡ್ಯಾಮ್‌ನಿಂದ ಲಿಂಗನಮಕ್ಕಿಗೆ ಮುಂದುವರೆದ ಹೊರ ಹರಿವು

Maani-Dam-in-Hosanagara-Taluk

SHIVAMOGGA LIVE NEWS | 20 JULY 2024 DAM LEVEL : ಹೊಸನಗರದಲ್ಲಿ ಮಳೆ ಪ್ರಮಾಣದ ತುಸು ತಗ್ಗಿದೆ. ಆದರೆ ಅಬ್ಬರ ಮುಂದುವರೆದಿದೆ. ತಾಲೂಕಿನಲ್ಲಿರುವ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. ಚಕ್ರಾ ಜಲಾಶಯದಿಂದ ಲಿಂಗನಮಕ್ಕಿ ಡ್ಯಾಮ್‌ಗೆ ನೀರು ಹರಿಯುವುದು ಮುಂದುವರೆದಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಹೊಸನಗರ ತಾಲೂಕಿನ ಮಾನಿ ಜಲಾಶಯ ವ್ಯಾಪ್ತಿಯಲ್ಲಿ 108 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 105 ಮಿ.ಮೀ, ಹುಲಿಕಲ್‌ನಲ್ಲಿ 149 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 167 ಮಿ.ಮೀ, ಚಕ್ರಾದಲ್ಲಿ 125 ಮಿ.ಮೀ, ಸಾವೇಹಕ್ಲುವಿನಲ್ಲಿ 140 … Read more

ಭದ್ರಾ ಡ್ಯಾಮ್‌ಗೆ ಭರಪೂರ ನೀರು, ಏರಿತು ತುಂಗಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು, ಎಷ್ಟಾಗಿದೆ?

Bhadra-Dam-General-Image

SHIVAMOGGA LIVE NEWS | 20 JULY 2024 DAM LEVEL : ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯಗಳಿಗೆ ಉತ್ತಮ ಒಳ ಹರಿವು ಇದೆ. ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವಿನ ವಿವರ ಇಲ್ಲಿದೆ. ಇದನ್ನೂ ಓದಿ ⇓ ಶಿವಮೊಗ್ಗದಲ್ಲಿ ಎರಡು ದಿನ ಸಚಿವ ಮಧು ಬಂಗಾರಪ್ಪ ಪ್ರವಾಸ, ಮಳೆ ಹಾನಿ ಪ್ರದೇಶಕ್ಕೆ ಭೇಟಿ, ಎಲ್ಲಿಗೆಲ್ಲ ತೆರಳಲಿದ್ದಾರೆ?

ಶಿವಮೊಗ್ಗದಲ್ಲಿ ಎರಡು ದಿನ ಸಚಿವ ಮಧು ಬಂಗಾರಪ್ಪ ಪ್ರವಾಸ, ಮಳೆ ಹಾನಿ ಪ್ರದೇಶಕ್ಕೆ ಭೇಟಿ, ಎಲ್ಲಿಗೆಲ್ಲ ತೆರಳಲಿದ್ದಾರೆ?

Minister-Madhu-Bangarappa

SHIVAMOGGA LIVE NEWS | 20 JULY 2024 SHIMOGA : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ವಿವಿಧೆಡೆ ಮಳೆ ಹಾನಿ (RAIN AFFECTED) ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರವಾಸ ಪಟ್ಟಿ ಪ್ರಕಟಿಸಲಾಗಿದೆ. ಜು.20 ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 5 ಗಂಟೆಗೆ ಸೊರಬಕ್ಕೆ ತಲುಪಲಿದ್ದಾರೆ. ಸಂಜೆ 5.15ರಿಂದ ಕಡಸೂರು ಗ್ರಾಮ, ವರದಾ ನದಿ ಜೋಳಗುಡ್ಡೆ, ಬಂಕಸಾಣ ಹೊಳೆ ಹತ್ತಿರ ಪ್ರವಾಹ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಕೂಲ್‌ ಕೂಲ್‌ ವಾತಾವರಣ, ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ?

WEATHER-REPORT-SHIMOGA-

SHIVAMOGGA LIVE NEWS | 20 JULY 2024 WEATHER REPORT : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಇವತ್ತೂ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಹವಾಮಾನ ಇಲಾಖೆ ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಿಸಿದೆ. ಇನ್ನು, ಕಳೆದ ರಾತ್ರಿಯಿಂದ ಜಿಲ್ಲೆಯಾದ್ಯಂತ ಜೋರು ಮಳೆಯಾಗಿದೆ. ಬಹುತೇಕ ಕಡೆ ಬೆಳಗ್ಗೆ ವರುಣ ಕೊಂಚ ಬಿಡುವು ನೀಡಿದ್ದಾನೆ. ನಿರಂತರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಥಂಡಿ ವಾತಾವರಣವಿದೆ. ತಾಪಮಾನವು ತಗ್ಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 28 ಡಿಗ್ರಿ, ಕನಿಷ್ಠ … Read more

BREAKING NEWS – ಶಿವಮೊಗ್ಗ ತಾಲೂಕಿನ ಶಾಲೆ, ಕಾಲೇಜುಗಳಿಗೆ ಇವತ್ತು ರಜೆ

Thahasilhdar-Girish

SHIVAMOGGA LIVE NEWS | 20 JULY 2024 SHIMOGA : ಮಳೆ ಮುಂದುವರೆದ ಹಿನ್ನೆಲೆ ಶಿವಮೊಗ್ಗ ತಾಲೂಕಿನ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ (Holiday) ಘೋಷಿಸಿ ತಹಶೀಲ್ದಾರ್‌ ಗಿರೀಶ್‌ ಅವರು ರಜೆ ಘೋಷಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ನೀಡಿರುವ ತಹಶೀಲ್ದಾರ್‌ ಗಿರೀಶ್‌ ಅವರು, ‘ಶಿವಮೊಗ್ಗ ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು ಮಕ್ಕಳ ಹಿತದೃಷ್ಟಿಯಿಂದ ಜುಲೈ 20 ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆʼ ಎಂದು ತಿಳಿಸಿದ್ದಾರೆ. ಶಿವಮೊಗ್ಗ ತಾಲೂಕು ಹೊರತುಪಡಿಸಿ … Read more