ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಅಪಘಾತ, ಸಿದ್ದಾಪುರದ ಯುವಕ ಸ್ಥಳದಲ್ಲೆ ಸಾವು

Bhadravathi News Graphics

ಶಿವಮೊಗ್ಗ ಲೈವ್.ಕಾಂ | ACCIDENT | 28 ಏಪ್ರಿಲ್ 2022 ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಸವಾರನೊಬ್ಬ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹೊಸ ಸಿದ್ದಾಪುರ ಗ್ರಾಮದ ಅರುಣ್ (30) ಮೃತ ದುರ್ದೈವಿ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹಿಟ್ ಅಂಡ್ ರನ್ ಅರುಣ್ ಬೈಪಾಸ್ ರಸ್ತೆಯಲ್ಲಿ ಸಿದ್ದಾಪುರದ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಎದುರಿನಿಂದ ಬಂದ ವಾಹನ ಅರುಣ್‌ಗೆ ಡಿಕ್ಕಿ ಹೊಡೆದಿರುವ ಶಂಕೆ ಇದೆ. ಕೆಳಗೆ ಬಿದ್ದ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆ, ಭದ್ರಾವತಿಯಲ್ಲಿ ಆಲಿಕಲ್ಲು ಸಹಿತ ಮಳೆ

Rain-at-Shimoga

ಶಿವಮೊಗ್ಗ ಲೈವ್.ಕಾಂ | SHIMOGA RAIN | 28 ಏಪ್ರಿಲ್ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಹಲವು ಕಡೆ ಆಲಿಕಲ್ಲು ಮಳೆಯಾದ ವರದಿಯಾಗಿದೆ. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಜೋರು ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಭಾರಿ ಮಳೆಯಿಂದ ಅಲ್ಲಲ್ಲಿ ಚರಂಡಿ ತುಂಬಿ ನೀರು ರಸ್ತೆಗೆ ಹರಿದಿದೆ. ಇನ್ನು, ಜೋರು ಮಳೆಯಿಂದ ಶಿವಮೊಗ್ಗ ನಗರದಲ್ಲಿ ಜನಜೀವನ ಅಸ್ತವ್ಯಸ್ತ ಆಗಿತ್ತು. ಶಿವಮೊಗ್ಗ ತಾಲೂಕಿನಲ್ಲೂ ಮಳೆ ಅಬ್ಬರಿಸಿದೆ. ವಿವಿಧೆಡೆ ಮಳೆಗೆ ಮರಗಳು ಬುಡಮೇಲಾದ ವರದಿಯಾಗಿದೆ. … Read more

ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸುವ ಕುರಿತು ಕಾಡಾ ಸಭೆಯಲ್ಲಿ ಮಹತ್ವದ ನಿರ್ಧಾರ

Bhadra-Kada-Meeting-in-Shimoga-Machenahalli.

SHIVAMOGGA LIVE NEWS | WATER | 28 ಏಪ್ರಿಲ್ 2022 ಬೇಸಿಗೆ ಬೆಳೆಗಳಿಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರನ್ನು ಮೇ 15 ಕ್ಕೆ ನಿಲ್ಲಿಸಲಾಗುವುದು. ನೀರಿನ ಅವಶ್ಯಕತೆ ಇದ್ದರೆ ಮೇ 20ರವರೆಗೆ ಹೆಚ್ಚುವರಿಯಾಗಿ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿತು. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರಾ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇವತ್ತು ಮಲವಗೊಪ್ಪದ ಕಚೇರಿಯಲ್ಲಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ … Read more

ಸೀಗೆಹಟ್ಟಿ ಬಳಿ ಅನುಮಾನಸ್ಪದವಾಗಿ ವರ್ತಿಸುತ್ತಿದ್ದರಿಗೆ ವೈದ್ಯಕೀಯ ಪರೀಕ್ಷೆ, ಪ್ರಕರಣ ದಾಖಲು

Doddapete-Police-Station-General-Image.

SHIVAMOGGA LIVE NEWS | GANJA| 28 ಏಪ್ರಿಲ್ 2022 ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷಗೆ ಒಳಪಡಿಸಿದ್ದಾರೆ. ಗಾಂಜಾ ಸೇವನೆ ದೃಢವಾದ ಹಿನ್ನೆಲೆ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಭರ್ಮಪ್ಪ ನಗರದ ಮೊಹಮದ್ ಹ್ಯಾರಿಸ್, ಕ್ಲಾರ್ಕ್ ಪೇಟೆಯ ಮೊಹಮದ್ ಫೈಸಲ್, ಎಂಕೆಕೆ ರಸ್ತೆಯ ಸುಹೇಲ್ ಬಂಧಿತರು. ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಮೂವರನ್ನು ಬಂಧಿಸಲಾಗಿದೆ. ಸೀಗೆಹಟ್ಟಿ ಭಾಗದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಈ ಮೂವರು … Read more

ಶಿವಮೊಗ್ಗದಲ್ಲಿ ಭಯದ ವಾತಾವರಣ ಸೃಷ್ಟಿ, ಕಠಿಣ ಕ್ರಮಕ್ಕೆ ಎಸ್.ಪಿಗೆ ದೂರು

BJP-Submitted-Memorandum-to-Shimoga-SP

SHIVAMOGGA LIVE NEWS | HINDU| 28 ಏಪ್ರಿಲ್ 2022 ಕಳೆದ ಮೂರು ತಿಂಗಳಿಂದ ಶಿವಮೊಗ್ಗ ನಗರದಲ್ಲಿ ಅಶಾಂತಿ ಸೃಷ್ಟಿಸಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಗರ ಘಟಕ ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರಿಗೆ ಬಿಜೆಪಿ ನಗರ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಏನಿದೆ? ಪ್ರಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಕಳೆದ 3 ತಿಂಗಳಿಂದ ಅಶಾಂತಿ ಸೃಷ್ಟಿಸಲಾಗುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಅಮಾಯಕ … Read more

ಶಿವಮೊಗ್ಗದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಫೋಟೊಗೆ ಬೆಂಕಿ

protest-against-Bollywood-Actor-ajay-devagan

SHIVAMOGGA LIVE NEWS | ACTOR | 28 ಏಪ್ರಿಲ್ 2022 ಕನ್ನಡ ಮತ್ತು ನಟ ಸುದೀಪ್ ವಿರುದ್ಧ ಅವಮಾನಕರ ಟ್ವೀಟ್ ಮಾಡಿದ ಬಾಲಿವುಡ್ ನಟ ಅಜಯ್ ದೇವಗನ್ ಅವರ ಪ್ರತಿಕೃತಿಗೆ ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿಲಾಯಿತು. ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನಟ ಅಜಯ್ ದೇವಗನ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಲಾಯಿತು. ನಟ ಸುದೀಪ್ ಅವರಿಗೆ ಅಜಯ್ ದೇವಗನ್ ಅವಮಾನಿಸಿದ್ದಾರೆ ಎಂದು … Read more

ಶಿವಮೊಗ್ಗ ಫ್ರೀಡಂ ಪಾರ್ಕ್’ನಲ್ಲಿ ರಾತ್ರಿ ಪಾರ್ಟಿ, ವಾಕಿಂಗ್ ಪಾತ್ ಮೇಲೆ ಬೈಕ್ ರೈಡ್, ಆಕ್ರೋಶ

Dattatri-submit-memorandum-about-freedom-park

SHIVAMOGGA LIVE NEWS | PARK| 28 ಏಪ್ರಿಲ್ 2022 ಶಿವಮೊಗ್ಗದ ಹಳೆ ಜೈಲು ಆವರಣದ ಫ್ರೀಡಂ ಪಾರ್ಕ್’ಗೆ ಚಂದ್ರಶೇಖರ್ ಆಜಾದ್ ಪಾರ್ಕ್ ಎಂದು ನಾಮಕರಣ ಮಾಡಬೇಕು. ಈ ಪಾರ್ಕ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ಆಗ್ರಹಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಎಸ್.ದತ್ತಾತ್ರಿ ಅವರು ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಏನಿದೆ? ಫ್ರೀಡಂ ಪಾರ್ಕ್’ಗೆ ಚಂದ್ರಶೇಖರ್ ಆಜಾದ್ ಅವರ ಹೆಸರು ಇಡಬೇಕು. ಆದರೆ ಅದರ … Read more

ನೊಟೀಸ್ ಕೊಟ್ಟ ಸಿಐಡಿ ಅಧಿಕಾರಿ ಅಮಾನತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

Devendrappa-Memorandum-to-take-action-against-CID-Officer.

SHIVAMOGGA LIVE NEWS | CID | 28 ಏಪ್ರಿಲ್ 2022 ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ನೀಡಿದ ಸಿಐಡಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕೆಪಿಸಿಸಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ಬಂಧಿಸಲು ಸಿಐಡಿ ಅಧಿಕಾರಿಗಳು ವಿಫಲವಾಗಿದ್ದಾರೆ. ಅಕ್ರಮ ಬಯಲಿಗೆಳೆದ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ … Read more

ಗಾಂಧಿ ಬಜಾರ್’ಗೆ ಹೋಗುತ್ತಿದ್ದ ಯುವಕನ ಮೇಲೆ ಬೈಕಲ್ಲಿ ಅಡ್ಡಾದಿಡ್ಡಿ ಬಂದವರಿಂದ ಹಲ್ಲೆ

crime name image

SHIVAMOGGA LIVE NEWS | CRIME | 28 ಏಪ್ರಿಲ್ 2022 ನಿಧಾನವಾಗಿ ಬೈಕ್ ಚಲಾಯಿಸಿ ಎಂದು ತಿಳಿಸಿದ್ದಕ್ಕೆ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ. ಆತನ ಬಳಿ ಇದ್ದ ಮೊಬೈಲ್ ಮತ್ತು ಇತರೆ ವಸ್ತುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗಿದೆ. ಊರುಗಡೂರು ವಾಸಿ ವಿಜಯ ಕುಮಾರ್ ಎಂಬುವವರ ಮೇಲೆ ಹಲ್ಲೆಯಾಗಿದೆ. ಎದುರಿನಿಂದ ಯದ್ವಾತದ್ವ ಬೈಕ್ ಚಲಾಯಿಸಿಕೊಂಡು ಬಂದವರಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ವಿವರ ವಿಜಯ್ ಕುಮಾರ್ ಅವರು ಗಾಂಧಿ ಬಜಾರ್ ಮಾರ್ಕೆಟ್’ಗೆ ಹೋಗಲು ಎಂಕೆಕೆ … Read more

ಶಿವಮೊಗ್ಗದಲ್ಲಿ ವರ್ಷಕ್ಕೆ 3.40 ಲಕ್ಷ & 2 ಲಕ್ಷ ವೇತನದ ಕೆಲಸ ಖಾಲಿ ಇದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

jobs news shivamogga live

SHIVAMOGGA LIVE NEWS | JOB NEWS| 28 ಏಪ್ರಿಲ್ 2022 ಪ್ರತಿಷ್ಠಿತ ಸಂಸ್ಥೆ Career Launcher ಶಿವಮೊಗ್ಗ ವಿಭಾಗದಲ್ಲಿ ಉದ್ಯೋಗವಕಾಶವಿದೆ. ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. JOB: Aptitude Trainer -1 Qualification – MSc Mathematics or engineering Salary – Hourly paid JOB: Business relationship manager – 1 Qualification – any graduate. Male candidate. Minimum 6 months of sales experience. Salary – Upto 3,40,000 … Read more