ನಮ್ಮೂರ ಹೆಮ್ಮೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಹೆಸರು ನೋಂದಣಿಗೆ ಮನವಿ

20923-Kuvempu-Rangamandira-in-Shimoga.webp

SHIMOGA, 31 JULY 2024 : ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ವತಿಯಿಂದ ‘ನಮ್ಮೂರ ಹೆಮ್ಮೆʼ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಆ.3ರಂದು ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ನಮ್ಮೂರ ಹೆಮ್ಮೆ’ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆ. ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಕೋರ್ಸ್‌ಗಳಲ್ಲಿ ರಾಂಕ್‌ ಗಳಿಸಿದವರಿಗೆ. ಯುಪಿಎಸ್‌ಸಿ, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಜಿಲ್ಲೆಯ ಪ್ರತಿಭಾನ್ವಿತರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್‌ … Read more

ಶಿವಮೊಗ್ಗಕ್ಕೆ ಮತ್ತೊಂದು ಅಲರ್ಟ್‌ ಪ್ರಕಟಿಸಿದ ಹವಾಮಾನ ಇಲಾಖೆ

rain-in-shimoga-city-near-vidyanagara-flyover

SHIMOGA, 31 JULY 2024 : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಗೆ ಪುನಃ ಅಲರ್ಟ್‌ (Alert) ಪ್ರಕಟಿಸಿದೆ. ನಾಳೆಯೂ ರೆಡ್‌ ಅಲರ್ಟ್‌ ಶಿವಮೊಗ್ಗ ಜಿಲ್ಲೆಯಲ್ಲಿ ಆ.1ರಂದು ರೆಡ್‌ ಆಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರೆಡ್‌ ಅಲರ್ಟ್‌ ಇದ್ದರೆ ಭಾರಿ ಮಳೆಯಾಗಲಿದೆ. ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಇರಲಿದೆ. ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನದಲ್ಲಿ ಆರೆಂಜ್‌ ಅಲರ್ಟ್‌ ಇದೆ. … Read more

ಮತ್ತೊಂದು ವಿಮಾನ ನಿಲ್ದಾಣ ಮಂಜೂರಾತಿಗೆ ಮನವಿ ಸಲ್ಲಿಸಿದ ಶಿವಮೊಗ್ಗ ಸಂಸದ ರಾಘವೇಂದ್ರ

Shimoga MP BY Raghavendra about Airport

NEW DELHI, 31 JULY 2024 : ಶಿವಮೊಗ್ಗ ಲೋಕಸಭೆ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ (Airport) ಮಂಜೂರು ಮಾಡುವಂತೆ ಸಂಸದ ಬಿ.ವೈ.ರಾಘವೇಂದ್ರ ಇಂದು ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮ ಮೋಹನ ನಾಯ್ಡು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮತ್ತೊಂದು ವಿಮಾನ ನಿಲ್ದಾಣ ಎಲ್ಲಿ? ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಗೆ ಮತ್ತೊಂದು ವಿಮಾನ ನಿಲ್ದಾಣಕ್ಕೆ ಮನವಿ ಸಲ್ಲಿಸಲಾಯಿತು. ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ … Read more

ಮಂಜುನಾಥಗೌಡ ಸೇರಿ ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ, ಹಾಲು ಒಕ್ಕೂಟದ ಚುನಾವಣೆಗೆ ಯಾರೆಲ್ಲ ಸ್ಪರ್ಧಿಸಿದ್ದಾರೆ?

RM-Manjunatha-nomination-for-Shimul-election

SHIMOGA, 31 JULY 2024 : ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್)‌ ಆಡಳಿತ ಮಂಡಳಿ ಚುನಾವಣೆಗೆ ಈವರೆಗೆ 14 ನಾಮಪತ್ರ (Nomination) ಸಲ್ಲಿಕೆಯಾಗಿವೆ. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಸೇರಿ 13 ಅಭ್ಯರ್ಥಿಗಳು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಶಿಮುಲ್‌ ಚುನಾವಣೆಯ ರಿಟರ್ನಿಂಗ್ ಆಫೀಸರ್, ತಹಶೀಲ್ದಾರ್‌ ಬಿ.ಎನ್.ಗಿರೀಶ್‌ ಅವರಿಗೆ ನಾಮಪತ್ರ ಸಲ್ಲಿಸಲಾಯಿತು‌. ಇವತ್ತು ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ? ತೀರ್ಥಹಳ್ಳಿ ಆರ್‌.ಎಂ.ಮಂಜುನಾಥಗೌಡ ಭದ್ರಾವತಿ ಎಸ್‌.ಕುಮಾರ್‌ ಶಿಕಾರಿಪುರ ಬಿ.ಡಿ.ಭೂಕಾಂತ್‌ ಸೊರಬ ಗಂಗಾಧರಪ್ಪ ಸಾಗರ ದಿವಾಕರ್‌.ಪಿ ಸಾಗರ ಹೆಚ್.ಎಂ.ರವಿಕುಮಾರ್‌ ನ್ಯಾಮತಿ ಸುರೇಶ್‌.ಕೆ.ಜಿ ಚನ್ನಗಿರಿ … Read more

ಅಡಿಕೆ ಧಾರಣೆ | 31 ಜುಲೈ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ADIKE RATE, 31 JULY 2024 : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಮಟ ಮಾರುಕಟ್ಟೆ ಕೋಕ 12509 24189 ಚಿಪ್ಪು 26089 28019 ಫ್ಯಾಕ್ಟರಿ 9099 19811 ಬೆಟ್ಟೆ 37295 37295 ಹಳೆ ಚಾಲಿ 36809 39199 ಹೊಸ ಚಾಲಿ 30199 35019 ಕೊಪ್ಪ ಮಾರುಕಟ್ಟೆ ಗೊರಬಲು 26669 35199 ಬೆಟ್ಟೆ 47011 53599 ರಾಶಿ 37782 50399 ಸರಕು 63063 79163 ಚಾಮರಾಜನಗರ ಮಾರುಕಟ್ಟೆ ಇತರೆ 26500 30000 … Read more

ಭದ್ರಾವತಿ ಹೊಸ ಸೇತುವೆ ಮುಳುಗಡೆ, ಬಡಾವಣೆಗಳಿಗೆ ನುಗ್ಗಿದ ಭದ್ರೆ, ಕಾಳಜಿ ಕೇಂದ್ರಗಳು ಶುರು

Bhadravathi-New-bridge-drowned.

BHADRAVATHI, 31 JULY 2024 : ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸುತ್ತಿರುವುದರಿಂದ ಭದ್ರಾವತಿಯ ಹೊಸ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ರಭಸವಾಗಿ ಹರಿದು ಹೋಗುತ್ತಿದೆ. ಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಪೊಲೀಸರು ಹೊಸ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಿದ್ದರು. ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಇವತ್ತು ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಮರದ ದಿಮ್ಮಿಗಳು ಸೇತುವೆಗೆ ಬಡಿದು, … Read more

ಶಿವಮೊಗ್ಗ ಸಿಟಿಗೆ ಕುಡಿಯುವ ನೀರು ಪೂರೈಕೆ ವ್ಯತ್ಯಯ, ತುಂಗಾ ನದಿ ನೀರಿನ ಮಟ್ಟ ಹೆಚ್ಚಳವೇ ಕಾರಣ, ಹೇಗದು?

Drinking-Water-Tap

SHIMOGA, 31 JULY 2024 : ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದ ಪಕ್ಕದಲ್ಲಿ ತುಂಗಾನದಿಯ (RIVER) ಹೊರಹರಿವು ಹೆಚ್ಚಾಗಿದೆ. ನೀರಿನ ಮಟ್ಟ 27 ಅಡಿಗಳಷ್ಟು ಇದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ನದಿಗೆ ಅಳವಡಿಸಿರುವ ಮೋಟಾರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಶಿವಮೊಗ್ಗ ನಗರದಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ ⇓ ಚಕ್ರಾದಲ್ಲಿ … Read more

ಚಕ್ರಾದಲ್ಲಿ ಒಂದೇ ದಿನ 200 ಮಿ.ಮೀ ಮಳೆ, ಹೊಸನಗರದಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಡ್ಯಾಂಗಳ ಒಳ ಹರಿವು ಎಷ್ಟಿದೆ?

Maani-Dam-in-Hosanagara-Taluk

HOSANAGARA, 31 JULY 2024 : ಹೊಸನಗರ ತಾಲೂಕಿನ ವಿವಿಧೆಡೆ ಮಂಗಳವಾರ ಮಳೆ ಅಬ್ಬರ ಜೋರಾಗಿತ್ತು. ನಗರ ಹೋಬಳಿ ವ್ಯಾಪ್ತಿಯ ಹಲವು ಕಡೆ ಎಡೆಬಿಡದೆ ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ ಮಳೆ? ಕಳೆದ 24 ಗಂಟೆಯಲ್ಲಿ ಚಕ್ರಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಚಕ್ರಾ ವ್ಯಪ್ತಿಯಲ್ಲಿ 201 ಮಿ.ಮೀ ಮಳೆಯಾಗಿದೆ. ಮಾನಿ 185 ಮಿ.ಮೀ, ಯಡೂರು 188 ಮಿ.ಮೀ, ಹುಲಿಕಲ್‌ 189 ಮಿ.ಮೀ, ಮಾಸ್ತಿಕಟ್ಟೆ 186 ಮಿ.ಮೀ, ಸಾವೇಹಕ್ಲು 155 ಮಿ.ಮೀ ಮಳೆಯಾಗಿದೆ. ಜಲಾಶಯಗಳ ಒಳ ಹರಿವು ಎಷ್ಟಿದೆ? … Read more

ಸಾಗರ, ತೀರ್ಥಹಳ್ಳಿಯಲ್ಲಿ ಹೆಚ್ಚು ಮಳೆ, ಭದ್ರಾವತಿಯಲ್ಲಿ ಕಡಿಮೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Rainfall-in-Shimoga-city.

SHIMOGA, 31 JULY 2024 : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (rainfall) ಮುಂದುವರೆದಿದೆ. ಆದರೆ ಬಹುತೇಕ ಕಡೆ ಅಬ್ಬರ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 40.94 ಮಿ.ಮೀ ಮಳೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ? ಜು.30ರ ಬೆಳಗ್ಗೆ 8.30ರಿಂದ ಜು.31ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 11.20 ಮಿ.ಮೀ ಮಳೆಯಾಗಿದೆ. ಭದ್ರಾವತಿ 8.40 ಮಿ.ಮೀ, ತೀರ್ಥಹಳ್ಳಿ 73.90 ಮಿ.ಮೀ, ಸಾಗರ 89.40 ಮಿ.ಮೀ, ಶಿಕಾರಿಪುರ 13.80 ಮಿ.ಮೀ, ಸೊರಬ 28.50 ಮಿ.ಮೀ, ಹೊಸನಗರ 61.40 … Read more

ರಾತ್ರಿ ಗಾಜನೂರಿಗೆ MLA ದಿಢೀರ್‌ ಭೇಟಿ, ಕಮಿಷನರ್‌ ಸಿಟಿ ರೌಂಡ್ಸ್‌, ಶಿವಮೊಗ್ಗದಲ್ಲಿ ಇವತ್ತು ಬಿಸಿಲು

MLA-Sudden-visit-to-gajanuru-dam.

SHIMOGA, 31 JULY 2024 : ಭಾರಿ ಮಳೆ ಮುನ್ಸೂಚನೆ ಮಧ್ಯೆ ಶಿವಮೊಗ್ಗ ನಗರದಲ್ಲಿ ಬಿಸಿಲು ಪ್ರತ್ಯಕ್ಷವಾಗಿದೆ. ಇನ್ನೊಂದೆಡೆ ನೆರೆ ಭೀತಿ ಹಿನ್ನೆಲೆ ಶಾಸಕ ಎಸ್‌.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತರು ಪ್ರತ್ಯೇಕವಾಗಿ ಸಿಟಿ ರೌಂಡ್ಸ್‌ (ROUNDS) ನಡೆಸಿದರು. ಶಿವಮೊಗ್ಗ ಸಿಟಿಯಲ್ಲಿ ಬಿಸಿಲು ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕಳೆದ ಎರಡು ವಾರದಿಂದ ಬಿಸಿಲು ಮರೆಯಾಗಿತ್ತು. ಇವತ್ತು ಬೆಳಗೆಯಿಂದ ಆಗಸಲ್ಲಿ ಮೋಡಗಳು ಮರೆಯಾಗಿವೆ. ಪುನಃ ಬಿಸಲು ಕಾಣಿಸಿಕೊಂಡಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಮುಗ್ಗುಲು ಹಿಡಿದ ಬಟ್ಟೆಗಳನ್ನು ಒಣಗಿಸುತ್ತಿದ್ದಾರೆ. … Read more