ಶಿವಮೊಗ್ಗದಲ್ಲಿ ಬಿಡುವು ನೀಡಿದ ಪುನರ್ವಸು ಮಳೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Rain-in-Shimoga-city-Kuvempu-Road

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ (Rainfall) ಅಬ್ಬರ ತಗ್ಗಿದೆ. ಪುನರ್ವಸು ಮಳೆ ಕೊಂಚ ಬಿಡುವು ನೀಡಿದ್ದು, ಬಿಸಿಲು ಕಾಣಿಸಿಕೊಂಡಿದೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣ ಇತ್ತು. ಆಗಾಗ ತುಸು ಮಳೆಯಾಗಿದೆ. ಆ ಬಳಿಕ ಬಿಸಿಲು ಆವರಿಸಿದೆ. ಮೋಡ ಮರೆಯಾಗಿದ್ದು, ಆಗಸ ಸ್ವಚ್ಛವಾಗಿ ಕಾಣಿಸುವಂತಿದೆ. ಭಾರಿ ಮಳೆಯಾಗುತ್ತಿದ್ದ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿಯು ಮಳೆ ಪ್ರಮಾಣ ಕಡಿಮೆಯಾಗಿದೆ. 24 ಗಂಟೆಯಲ್ಲಿ  30 ಮಿ.ಮೀ ಮಳೆ ಇನ್ನು , ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ … Read more

ತಗ್ಗಿತು ತುಂಗಾ ಜಲಾಶಯದ ಒಳ ಹರಿವು, ಇವತ್ತು ಎಷ್ಟಿದೆ? ಎಷ್ಟು ನೀರನ್ನು ಹೊರಗೆ ಹರಿಸಲಾಗುತ್ತಿದೆ?

Tunga-Dam-Full-All-Gates-opened.

ಶಿವಮೊಗ್ಗ: ಮಳೆ ಪ್ರಮಾಣ ಕಡಿಮೆಯಾದ್ದರಿಂದ ತುಂಗಾ ಜಲಾಶಯದ (Dam Level) ಒಳ ಹರಿವು ತಗ್ಗಿದೆ. ಇವತ್ತು ತುಂಗಾ ಡ್ಯಾಂಗೆ 46,042 ಕ್ಯೂಸೆಕ್‌ ಒಳ ಹರಿವು ಇದೆ. ಜಲಾಶಯದಿಂದ ಸದ್ಯ 38,380 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 2.01 ಟಿಎಂಸಿ ನೀರಿನ ಸಂಗ್ರಹವಿದೆ. ಇನ್ನು, ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಇದನ್ನೂ ಓದಿ » ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಪ್ರಕಟಿಸಿದ ಸಂಸದ ರಾಘವೇಂದ್ರ

BREAKING NEWS – ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಪ್ರಕಟಿಸಿದ ಸಂಸದ ರಾಘವೇಂದ್ರ

BY-Raghavendra-Meets-Nitin-Gadkari-speaks-about-sigandur-bridge

ಶಿವಮೊಗ್ಗ: ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಸಿಗಂದೂರು ಸೇತುವೆ (Sigandur Bridge) ಜುಲೈ 14ರಂದು ಲೋಕಾರ್ಪಣೆ ಆಗಲಿದೆ‌. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಥಳ ಇನ್ನಷ್ಟೆ ನಿಗದಿ ಆಗಬೇಕಿದೆ ಎಂದರು. ಇಂದಿನಿಂದ ಎರಡನೇ ಹಂತದ ಲೋಡ್ ಟೆಸ್ಟ್ ನಡೆಯಲಿದೆ. ಅಲ್ಲದೆ ಕೊನೆಯ ಹಂತದ ಕೆಲಸ … Read more

ಭದ್ರಾ ಜಲಾಶಯದ ನೀರಿನ ಮಟ್ಟ ಒಂದೂವರೆ ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

Bhadra-Dam-General-Image

ಭದ್ರಾವತಿ: ಜಲನಾಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಭದ್ರಾ ಜಲಾಶಯದ (Dam Level) ಒಳ ಹರಿವು ಉತ್ತಮವಾಗಿದೆ. ಇವತ್ತು ಜಲಾಶಯಕ್ಕೆ 21,180 ಕ್ಯೂಸೆಕ್‌ ಒಳ ಹರಿವು ಇದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 168.5 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಒಂದೂವರೆ ಅಡಿಯಷ್ಟು ಏರಿಕೆಯಾಗಿದೆ. 5196 ಕ್ಯೂಸೆಕ್‌ ಹೊರ ಹರಿವು ಇದೆ. ಸದ್ಯ ಜಲಾಶಯದಲ್ಲಿ 51.220 ಟಿಎಂಸಿ ನೀರಿನ ಸಂಗ್ರಹವಿದೆ. ಇದನ್ನೂ ಓದಿ » ಕುಸಿದ ಚಾವಣಿ, ಕೃಷಿ ಚಟುವಟಿಕೆ ಬಿರುಸು, ತುಂಗೆಗೆ ಬಾಗಿನ – ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ … Read more

ಕುಸಿದ ಚಾವಣಿ, ಕೃಷಿ ಚಟುವಟಿಕೆ ಬಿರುಸು, ತುಂಗೆಗೆ ಬಾಗಿನ – ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ ಮಳೆ ರಿಪೋರ್ಟ್‌

rainfall-report-shimoga

ಶಿವಮೊಗ್ಗ: ಜಿಲ್ಲೆಯಲ್ಲಿ ಆರಿದ್ರಾ ಮಳೆ ಅಬ್ಬರಕ್ಕೆ ಹಳ್ಳ, ಕೊಳ್ಳಗಳು ತುಂಬಿವೆ. ಭಾರಿ ಮಳೆಗೆ ಅಲ್ಲಲ್ಲಿ ಆಸ್ತಿಪಾಸ್ತಿಗೆ ಹಾನಿಯು ಉಂಟಾಗಿದೆ. ಇನ್ನು ಇಂದಿನಿಂದ ಮಳೆ (Rainfall) ಪುನರ್ವಸು ಮಳೆ ಶುರುವಾಗಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಶುಕ್ರವಾರ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೇಗಾಯ್ತು ಮಳೆ? ಏನೆಲ್ಲ ಹಾನಿಯಾಗಿದೆ? ಇಲ್ಲಿದೆ ಫಟಾಫಟ್‌ ಸುದ್ದಿ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಆಂಬುಲೆನ್ಸ್‌ ಪರಿಶೀಲಿಸಿದ ಪೊಲೀಸ್‌, ಚಾಲಕನಿಗೆ ಕಾದಿತ್ತು ಶಾಕ್

ಶಿವಮೊಗ್ಗ ಸಿಟಿಯ ಹಲವೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ನಗರದ ಉಪ ವಿಭಾಗ-2 ಘಟಕ-6ರ ವ್ಯಾಪ್ತಿಯಲ್ಲಿ ತುರ್ತು ನಿರ್ವಾಹಣೆಯ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜುಲೈ 5ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶಯ ಬಡಾವಣೆ, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಹಳೆ ಊರು ಗೋಪಿಶೆಟ್ಟಿಕೊಪ್ಪ, ಗದ್ದೆಮನೆ ಲೇಔಟ್, ಮಂಜಪ್ಪ ಬಸಪ್ಪ ಲೇಔಟ್, ಜಿಎಸ್ ಕ್ಯಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಪ್ಯಾಕ್ಟರಿ, … Read more

ದಿನ ಭವಿಷ್ಯ | 5 ಜುಲೈ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ?

DINA-BHAVISHYA

DINA BHAVISHYA ಮೇಷ ಇಂದು ನಿಮ್ಮ ಶಕ್ತಿಯು ಉತ್ತುಂಗದಲ್ಲಿರುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಉತ್ತಮ ದಿನ. ಧೈರ್ಯದಿಂದ ಕೆಲಸ ಪೂರ್ಣಗೊಳಿಸುವಿರಿ. ಆರ್ಥಿಕ ಲಾಭಗಳು ಸಾಧ್ಯ. ಶುಭ ಬಣ್ಣ: ಕೆಂಪು. ವೃಷಭ ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಹೊಸ ಹೂಡಿಕೆಗಳ ಬಗ್ಗೆ ಆಲೋಚಿಸುವಿರಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕಲಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಶುಭ ಬಣ್ಣ: ಹಸಿರು. ಮಿಥುನ ಸಂವಹನ ಕೌಶಲ್ಯಗಳು ಇಂದು ಪ್ರಕಾಶಿಸುತ್ತವೆ. ಹೊಸ ಸಂಪರ್ಕಗಳು ಪ್ರಯೋಜನಕಾರಿ. ಪ್ರವಾಸದ ಸಾಧ್ಯತೆ. ನಿಮ್ಮ ಕಲ್ಪನೆಗಳನ್ನು ವ್ಯಕ್ತಪಡಿಸಲು … Read more

ದಿನ ಪಂಚಾಂಗ | 5 ಜುಲೈ 2025 | ಇವತ್ತು ಶುಭ ಸಮಯ ಯಾವುದು? ರಾಹುಕಾಲ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಶನಿವಾರ, 5 ಜುಲೈ 2025 ಸೂರ್ಯೋದಯ : 6.05 am ಸೂರ್ಯಾಸ್ತ : 7.00 pm ನಕ್ಷತ್ರ : ಸ್ವಾತಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.36 ರಿಂದ 5.20ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.58 ರಿಂದ 6.05ರವರೆಗೆ ಅಭಿಜಿತ್‌ ಮಧ್ಯಾಹ್ನ 12.07 ರಿಂದ 12.58ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.42 ರಿಂದ 3.33ರವರಗೆ ಗೋಧೂಳಿ ಮುಹೂರ್ತ ಸಂಜೆ 6.59 ರಿಂದ 7.21ರವರೆಗೆ ರಾಹು, ಯಮಗಂಡ, ಗುಳಿಕ … Read more

ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕುಗಳ ಶಾಲೆ, ಪಿಯು ಕಾಲೇಜುಗಳಿಗೆ ಇಂದು ರಜೆ

Rain-General-Image-youth-With-an-Umbrella

ಶಿವಮೊಗ್ಗ: ಕಳೆದ ರಾತ್ರಿಯಿಂದಲು ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎರಡು ತಾಲೂಕುಗಳ ಶಾಲೆಗಳಿಗೆ ರಜೆ (Holiday) ಘೋಷಿಸಲಾಗಿದೆ. ಹೊಸನಗರ ಮತ್ತು ಸಾಗರ ತಾಲೂಕಿನ ಅಂಗನವಾಡಿಗಳು, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ರಜೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 5ರಂದು ರಜೆ ಘೋಷಿಸಿ ಆಯಾ ತಾಲೂಕು ತಹಶೀಲ್ದಾರರು ಆದೇಶಿಸಿದ್ದಾರೆ. ಇದನ್ನೂ ಓದಿ » ಸಿಗಂದೂರಿಗೆ ತೆರಳುತ್ತಿದ್ದ ಟಿಟಿ ಅಪಘಾತ, ಮುಂಭಾಗ ನಜ್ಜುಗುಜ್ಜು, ಹೇಗಾಯ್ತು ಘಟನೆ?