ಅಡಿಕೆ ಧಾರಣೆ | 6 ಆಗಸ್ಟ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ADIKE RATE, 6 AUGUST 2024 : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 25000 38500 ವೋಲ್ಡ್ ವೆರೈಟಿ 30000 46500 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 38500 ವೋಲ್ಡ್ ವೆರೈಟಿ 38500 46500 ಭದ್ರಾವತಿ ಮಾರುಕಟ್ಟೆ ರಾಶಿ 35309 50599 ಯಲ್ಲಾಪುರ ಮಾರುಕಟ್ಟೆ ಕೆಂಪುಗೋಟು 27111 30399 ಕೋಕ 6629 27299 ಚಾಲಿ 31099 35999 ತಟ್ಟಿಬೆಟ್ಟೆ 31799 … Read more

ಶಿವಮೊಗ್ಗ ವಿಮಾನ ನಿಲ್ದಾಣ, ನೈಟ್‌ ಲ್ಯಾಂಡಿಂಗ್‌ ಕುರಿತು ವಿಮಾನಯಾನ ನಿರ್ದೇಶನಾಲಯ ಮಹತ್ವದ ನಿರ್ಧಾರ ಪ್ರಕಟ

MP-BY-raghavendra-about-Shimoga-Airport-Flight

SHIMOGA, 6 AUGUST 2024 : ಶಿವಮೊಗ್ಗ ವಿಮಾನ ನಿಲ್ದಾಣದ ನೈಟ್‌ ಲ್ಯಾಂಡಿಂಗ್‌ (Night Landing) ಕೆಲಸದ ಪುನಾರಂಭಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಸದರ ಪ್ರಕಟಣೆಯಲ್ಲಿ ಏನಿದೆ? ಜನವರಿ 2024ರಲ್ಲಿ ಸ್ಥಗಿತಗೊಂಡ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭಕ್ಕೆ ಡಿಜಿಸಿಎ ಅನುಮೋದನೆ ನೀಡಿದೆ. ಲೋಕೋಪಯೋಗಿ ಇಲಾಖೆ ಈ ಕೆಲಸ ನಿರ್ವಹಿಸಲಿದೆ. ಈಗಾಗಲೇ ಡಿಜಿಸಿಎ ಅಧಿಕಾರಿಗಳು ರೇಖಾಚಿತ್ರಗಳು, ಸಂಬಂಧಿತ ದಾಖಲೆ ಪರಿಶೀಲಿಸಿದ್ದಾರೆ. ಪರಿಕಲ್ಪನೆ, ವಿನ್ಯಾಸ ಮತ್ತು ಕಾಮಗಾರಿ ನಡೆಸುವ … Read more

ಶಿವಮೊಗ್ಗ ಬಿಜೆಪಿ ಯುವ ಮುಖಂಡನ ವಿರುದ್ಧ ಮಹಿಳೆ ದೂರು, ಅರೆಸ್ಟ್‌

bjp-leader-sharat-kalyani-arrest-by-woman-police-station.

SHIMOGA, 6 AUGUST 2024 : ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಹಣ ಪಡೆದು ಹಿಂತಿರುಗಿಸದ ಹಿನ್ನೆಲೆ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಶರತ್‌ ಕಲ್ಯಾಣಿ ವಿರುದ್ಧ ಮಹಿಳೆಯೊಬ್ಬರು ದೂರು (Arrest) ನೀಡಿದ್ದರು. ಈ ಹಿನ್ನೆಲೆ ಶಿವಮೊಗ್ಗ ಪೊಲೀಸರು ವಿಜಯಪುರದಲ್ಲಿ ಶರತ್‌ ಕಲ್ಯಾಣಿಯನ್ನು ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನಲ್ಲಿ ಏನಿದೆ? ‘ಫೇಸ್‌ಬುಕ್‌ನಲ್ಲಿ ಶರತ್‌ ಕಲ್ಯಾಣಿ ತನ್ನನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ತನ್ನೊಂದಿಗೆ ದೈಹಿಕ ಸಂಪರ್ಕ … Read more

ಚಲಿಸುತ್ತಿದ್ದ ಬಸ್ಸಿನಲ್ಲಿ ದಿಢೀರ್‌ ಬೆಂಕಿ, ಕ್ಷಣ ಹೊತ್ತಲ್ಲೇ ಧಗಧಗ ಹೊತ್ತಿ ಉರಿದ ವಾಯುವ್ಯ ಸಾರಿಗೆ

vayuvya-sarige-bus-burnt-at-sagara-on-jog-road

SAGARA, 6 AUGUST 2024 : ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ (Bus) ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಬಸ್‌ ಹೊತ್ತಿ ಉರಿದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಘಟನೆ ಸಂಭವಿಸಿದೆ. ಭಟ್ಕಳದಿಂದ ಸಾಗರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕೂಡಲೆ ಬಸ್ಸನ್ನು ನಿಲ್ಲಿಸಿದ್ದು, ಎಲ್ಲಾ 12 ಪ್ರಯಾಣಿಕರು ಬಸ್ಸಿನಿಂದ ಕೆಳಗೆಳಿದಿದ್ದಾರೆ. ಬಸ್‌ನ ಬಹು ಭಾಗ ಹೊತ್ತಿ ಉರಿದಿದೆ ಎಂದು … Read more

ಒಂಟಿ ಮಹಿಳೆ ಕೊಲೆ ಕೇಸ್‌, ಸಂಬಂಧಿ ಅರೆಸ್ಟ್‌, ಹತ್ಯೆಗೆ ಕಾರಣವೇನು?

Kumsi-Police-Station-Shimoga

SHIMOGA, 6 AUGUST 2024 : ಒಂಟಿ ಮಹಿಳೆ ಕೊಲೆ ಪ್ರಕರಣ ಆರೋಪಿಯನ್ನು (Accused) ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಮಹಿಳೆಯ ಸಂಬಂಧಿಯೇ ಆಗಿದ್ದು, ಹಲಗೆ ಕಳ್ಳತನಕ್ಕೆ ಹೋದಾಗ ಕೃತ್ಯ ಎಸಗಿದ್ದಾನೆ. ಮಂಜರಿಕೊಪ್ಪ ಗ್ರಾಮದ ಎಸ್.ಆದರ್ಶ್(30) ಬಂಧಿತ. ಅದೇ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಸಾವಿತ್ರಮ್ಮ (60) ಅವರನ್ನು ಗುರುವಾರ ಈತ ಹತ್ಯೆ ಮಾಡಿದ್ದ. ಹಲಗೆ ಕದಿಯಲು ಬಂದು ಹತ್ಯೆ ಮಾಡಿದ ಕೊಲೆಯಾದ ಸಾವಿತ್ರಮ್ಮ ಬಂಧಿತ ಆದರ್ಶನ ಅತ್ತೆ. ‘ಸಾವಿತ್ರಮ್ಮ ಮನೆಯಲ್ಲಿ ಹಲಗೆ ಕಳವು ಮಾಡಲು ಹೋಗಿದ್ದ. … Read more

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ksrtc-news-update-thumbnail.webp

SHIMOGA JOBS, 6 AUGUST 2024 : ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಚಾಲಕರು ಬೇಕಾಗಿದ್ದಾರೆ. ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಸಾಗರ, ಶಿಕಾರಿಪುರದಲ್ಲಿ ಚಾಲಕ ಹುದ್ದೆಗಳಿವೆ. ಚಾಲಕರ ಆಯ್ಕೆಗೆ ವಿವಿಧ ದಾಖಲೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ (ಹೆವಿ ಲೈಸೆನ್ಸ್ ವಿಥ್ ಬ್ಯಾಡ್ಜ್ HPV), ಮೆಡಿಕಲ್ ಫಿಟ್ನೆಸ್ ಪ್ರಮಾಣಪತ್ರ, 2 ಫೋಟೊಗಳು, ಅಂಕಪಟ್ಟಿ (7ನೇ ತರಗತಿ ಮೇಲ್ಪಟ್ಟು), ಶಾಲಾ ವರ್ಗಾವಣೆ ಪತ್ರ, ಬ್ಯಾಂಕ್ ದಾಖಲಾತಿ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ … Read more

ಶಿವಮೊಗ್ಗದಲ್ಲಿ ಮನೆ ಹಿಂಬದಿ ಹೆಬ್ಬಾವು ಪ್ರತ್ಯಕ್ಷ

snake-rescued-by-snake-kiran-at-kurubara-palya

SHIMOGA, 6 AUGUST 2024 : ಮನೆಯೊಂದರ ಹಿಂಬದಿ ಹುಲ್ಲಿನ ಪಿಂಡಿಗಳ ಅಡಿ ಅವಿತಿದ್ದ ಹೆಬ್ಬಾವನ್ನು (python) ಉರಗ ರಕ್ಷಕ ಸ್ನೇಕ್‌ ಕಿರಣ್‌ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ಕುರುಬರ ಪಾಳ್ಯದಲ್ಲಿ ಹಾವು ಪತ್ತೆಯಾಗಿತ್ತು. ಸುಹಾಸ್‌ ಎಂಬುವವರ ಮನೆ ಹಿಂಬದಿ ಹುಲ್ಲಿನ ಪಿಂಡಿಗಳನ್ನು ಇಟ್ಟಿದ್ದರು. ಬೆಳಗ್ಗೆ ಹಸುಗಳಿಗೆ ಹುಲ್ಲು ತರಲು ಹೋದಾಗ ಹಾವು ಕಾಣಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಸ್ನೇಕ್‌ ಕಿರಣ್‌ ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ಈ ಹಾವು … Read more

ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಇಳಿಕೆ, ಇವತ್ತು ಎಷ್ಟಿದೆ ನೀರಿನ ಮಟ್ಟ?

Bhadra-Dam-gate-opened-2022

DAM LEVEL, 6 AUGUST 2024 : ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಕಡಿಮೆಯಾಗಿದೆ. ಇದನ್ನೂ ಓದಿ ⇓ ಗುಡ್‌ ಮಾರ್ನಿಂಗ್‌ ಶಿವಮೊಗ್ಗ | ಒಂದೇ ಕ್ಲಿಕ್‌ನಲ್ಲಿ ಇಡೀ ಜಿಲ್ಲೆಯ ಕಂಪ್ಲೀಟ್‌ ನ್ಯೂಸ್‌

ಗುಡ್‌ ಮಾರ್ನಿಂಗ್‌ ಶಿವಮೊಗ್ಗ | ಒಂದೇ ಕ್ಲಿಕ್‌ನಲ್ಲಿ ಇಡೀ ಜಿಲ್ಲೆಯ ಕಂಪ್ಲೀಟ್‌ ನ್ಯೂಸ್‌

GOOD-MORNING-SHIVAMOGGA-NEWS-UPDATE

GOOD MORNING SHIMOGA NEWS, 6 AUGUST 2024 : ಇದನ್ನೂ ಓದಿ ⇓ ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಆಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ

ಶಿವಮೊಗ್ಗ ಜಿಲ್ಲೆಯಲ್ಲಿ ಸಂಪೂರ್ಣ ತಗ್ಗಿದ ಮಳೆ, ತಾಪಮಾನ ತುಸು ಏರಿಕೆ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?

WEATHER-REPORT-SHIMOGA-

WEATHER REPORT, 6 AUGUST 2024 : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಇವತ್ತು ಕೂಡ ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಹವಾಮಾನ ಇಲಾಖೆ ಯಾವುದೇ ಅಲರ್ಟ್‌ ಪ್ರಕಟಿಸಿಲ್ಲ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಇವತ್ತು ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 30 ಡಿಗ್ರಿ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ … Read more