ಎಸಿಬಿಯಿಂದ ಶಿವಮೊಗ್ಗದಲ್ಲಿ ಮುಂದುವರೆದ ಶೋಧ ಕಾರ್ಯ, ಈತನಕ ಏನೆಲ್ಲ ಸಿಕ್ಕಿದೆ?

ACB-raid-at-Siddappa-house-in-LBS-Nagara.

SHIVAMOGGA LIVE NEWS | SHIMOGA | 17 ಜೂನ್ 2022 ಶಿವಮೊಗ್ಗದ ಎಲ್.ಬಿ.ಎಸ್ ನಗರದ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ವಿದ್ಯುತ್ ಪರಿವೀಕ್ಷಣಾಯ ಇಲಾಖೆಯ ಡಿಪ್ಯೂಟಿ ಚೀಫ್ ಎಲೆಕ್ಟ್ರಿಕಲ್  ಇನ್ಸ್ ಪೆಕ್ಟರ್ ಡಿ.ಸಿದ್ದಪ್ಪ ಮನೆ ಮೇಲೆ ದಾಳಿ ಮಾಡಿ ಬೆಳಗ್ಗೆಯಿಂದ ತಪಾಸಣೆ ಮಾಡಲಾಗುತ್ತಿದೆ. ನಾಲ್ಕು ಕಡೆ ದಾಳಿ ಸಿದ್ದಪ್ಪಗೆ ಸಂಬಂಧಿಸಿದ ನಾಲ್ಕು ಕಡೆಯಲ್ಲಿ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಎಲ್.ಬಿ.ಎಸ್ ನಗರದಲ್ಲಿರುವ ಮನೆ, ಹೊನ್ನಾಳಿ ತಾಲೂಕು ಹೆಚ್.ಗೋಪಗೊಂಡನಹಳ್ಳಿ ಗ್ರಾಮದಲ್ಲಿನ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ದಾಳಿ

Breaking News Plate

SHIVAMOGGA LIVE | SHIMOGA | 17 ಜೂನ್ 2022 ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದಾರೆ. 21 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲೂ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಆಫೀಸರ್ ಸಿದ್ದಪ್ಪ ಅವರ ಶಿವಮೊಗ್ಗದ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಎಲ್.ಬಿ.ಎಸ್ ನಗರದಲ್ಲಿ ಸಿದ್ದಪ್ಪಗೆ ಸೇರಿದ ಮನೆ ಇದೆ. ಅದರ ಮೇಲೆ ದಾಳಿ ನಡೆಸಿ … Read more

ಶಿವಮೊಗ್ಗದಲ್ಲಿ ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮೇಲೆ ಎಸಿಬಿ ದಾಳಿ

Arrest News Graphics

SHIVAMOGGA LIVE NEWS | CORRUPTION | 2 ಜೂನ್ 2022 ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಯನ್ನು ಬಂಧಿಸಲಾಗಿದ್ದು, ಶಿವಮೊಗ್ಗದ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಲೀಮಾ, ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಏನಿದು ಪ್ರಕರಣ? ವಿನೋಬನಗರದ ನಿವಾಸಿಯೊಬ್ಬರು ದಿನಸಿ ಅಂಗಡಿ ನಡೆಸಲು ನೋಂದಣಿಗಾಗಿ ಶಿವಮೊಗ್ಗದ … Read more

ಮಹಾನಗರ ಪಾಲಿಕೆ ಸಿಬ್ಬಂದಿ ಮೇಲೆ ಎಸಿಬಿ ರೇಡ್, ಲಂಚದ ಹಣದ ಜೊತೆಗೆ ವಶಕ್ಕೆ

Mahanagara-Palike-Shimoga

SHIVAMOGGA LIVE NEWS | RAID | 30 ಮೇ 2022 ಕಟ್ಟಡ ಪರವಾನಗಿ ನವೀಕರಣಕ್ಕೆ ಬಂದವರ ಬಳಿ ಲಂಚ ಪಡೆಯುತ್ತಿದ್ದ ಮಹಾನಗರ ಪಾಲಿಕೆ ಡಾಟಾ ಎಂಟ್ರಿ ಆಪರೇಟರ್ ಒಬ್ಬ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಮಹಾನಗರ ಪಾಲಿಕೆಯ ಕಟ್ಟಡ ಪರವಾನಗಿ ವಿಭಾಗದ ಡಾಟಾ ಎಂಟ್ರಿ ಆಪರೇಟರ್ ವಿಜಯ್ ಕುಮಾರ್, ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿನೋಬನಗರದ ನಿವಾಸಿಯೊಬ್ಬರು ತಮ್ಮ ಪರಿಚಯಸ್ಥರ ಕಟ್ಟಡದ ಪರವಾನಗಿ ಪಡೆದಿದ್ದರು. 2022ನೇ ಫೆಬ್ರವರಿ ಸಾಲಿನಲ್ಲಿ ಪರವಾನಗಿ ಅಂತ್ಯವಾಗಿತ್ತು. ಇದರ ನವೀಕರಣಕ್ಕೆ … Read more

BREAKING NEWS | ಹೊಸನಗರದಲ್ಲಿ ಎಸಿಬಿ ದಾಳಿ, ಲಂಚದ ಹಣದ ಜೊತೆಗೆ ಸಿಕ್ಕಿಬಿದ್ದ ಅಧಿಕಾರಿ

Corruption-ACB-Raid-1.jpg

SHIVAMOGGA LIVE NEWS | 30 ಮಾರ್ಚ್ 2022 ಲಂಚದ ಹಣ ಸ್ವೀಕರಿಸುತ್ತಿದ್ದ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು  ದಾಳಿ ನಡಸಿ, ಬಂಧಿಸಿದ್ದಾರೆ. ಹೊಸನಗರ ತಾಲೂಕು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮುರುಗೇಶ್ ಎಸಿಬಿ ಬಲಿಗೆ ಬಿದ್ದ ಅಧಿಕಾರಿ. ಒಂದು ಲಕ್ಷ ಲಂಚಕ್ಕೆ ಬೇಡಿಕೆ ಸ್ಥಳೀಯರೊಬ್ಬರಿಗೆ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗದ ನಿವೇಶನಗಳಿಗೆ ಪ್ಲಾನಿಂಗ್ ಅಪ್ರೂವಲ್ ಮತ್ತು ಮ್ಯೂಟೇಶನ್ … Read more

ಭದ್ರಾವತಿಯಲ್ಲಿ 70 ಸಾವಿರ ರೂ. ಲಂಚ ಪಡೆಯುತ್ತಿದ್ದ ಪಿಡಿಒ ಮೇಲೆ ಎಸಿಬಿ ದಾಳಿ

FULL-BREAKING-NEWS-PLATE

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 11 ಜನವರಿ 2022 70 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭದ್ರಾವತಿಯ ಬಿಳಕಿ ಗ್ರಾಮ ಪಂಚಾಯಿತಿಯ ಪಿಡಿಒ ಕೇಶವಮೂರ್ತಿ ಅವರ ಮೇಲೆ ದಾಳಿ ನಡೆಸಲಾಗಿದೆ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಜಮೀನು ಒಂದರ ಸಂಬಂಧ ಎನ್.ಒ.ಸಿ ನೀಡಲು ಕೇಶವಮೂರ್ತಿ, ಒಂದು ಲಕ್ಷ ರೂ. ಹಣಕ್ಕೆ ಬೇಡಿಕೆ … Read more

ಶಿವಮೊಗ್ಗದಲ್ಲಿ ಎಸಿಬಿ ದಾಳಿ ಕೇಸ್, ರುದ್ರೇಶಪ್ಪ ಜಾಮೀನು ಅರ್ಜಿ ವಜಾ

251121 ACB Raid rudreshappa in Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಡಿಸೆಂಬರ್ 2021 ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರ ಜಾಮೀನು ಅರ್ಜಿಯನ್ನು ಶನಿವಾರ ವಜಾಗೊಳಿಸಲಾಗಿದೆ. ರುದ್ರೇಶಪ್ಪ ಅವರನ್ನು ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನ.25ರಂದು ಎಸಿಬಿ ದಾಳಿ ಮಾಡಿ ಶಿವಮೊಗ್ಗದ ಎರಡು ಮನೆಗಳನ್ನು ಪರಿಶೀಲಿಸಿದಾಗ 9.50 ಕೆಜಿ ಚಿನ್ನಾಭರಣ, ಲಕ್ಷಾಂತರ ನಗದು ಸೇರಿ ವೇತನಕ್ಕಿಂತಲೂ ಶೇ.400ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ಕಂಡುಬಂದಿದೆ. ಈ ಕಾರಣಕ್ಕಾಗಿ … Read more

BREAKING NEWS | ಶಿವಮೊಗ್ಗದ ನವುಲೆ ಕೃಷಿ ವಿವಿ ಕ್ಯಾಂಪಸ್’ನಲ್ಲಿ ಎಸಿಬಿ ದಾಳಿ, ಅಧಿಕಾರಿ ವಶಕ್ಕೆ

Corruption-ACB-Raid-1.jpg

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಡಿಸೆಂಬರ್ 2021 ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್’ನಲ್ಲಿ ಇವತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಾಡಿಗೆ ವಾಹನದ ಹಣ ಬಿಡುಗಡೆಗೆ ಲಂಚ ಕೇಳಿದ ಕೃಷಿ ವಿವಿ ಹಣಕಾಸು ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ವಿವಿಯ ಹಣಕಾಸು ವಿಭಾಗದ ಗಣೇಶಪ್ಪ ಬಂಧಿತ. ಕೃಷಿ ವಿವಿಯಲ್ಲಿ ನವೀನ್ ಎಂಬುವವರು ವಾಹನಗಳನ್ನು ಬಾಡಿಗೆಗೆ ಬಿಟ್ಟಿದ್ದರು. ಅದರ ಹಣವನ್ನು ಬಿಡುಗಡೆ ಮಾಡಬೇಕಿತ್ತು. … Read more

ಶಿವಮೊಗ್ಗದ ಎರಡು ಮನೆಗಳ ಮೇಲೆ ಎಸಿಬಿ ದಾಳಿ ಕಂಪ್ಲೀಟ್, ಎಷ್ಟು ಕೆಜಿ ಚಿನ್ನ ಸಿಕ್ತು? ಪತ್ತೆಯಾದ ಹಣ, ಆಸ್ತಿ ವಿವರವೇನು?

241121 ACB Raid in Shmoga House

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ನವೆಂಬರ್ 2021 ಶಿವಮೊಗ್ಗದಲ್ಲಿರುವ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರ ಎರಡು ಮನೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸುತ್ತಿದ್ದ ಶೋಧ ಕಾರ್ಯ ಪೂರ್ಣಗೊಂಡಿದೆ. ಈತನಕ ಪತ್ತೆಯಾಗಿರುವ ಚಿನ್ನಾಭರಣ, ವಾಹನಗಳು, ಆಸ್ತಿ ಮತ್ತು ನಗದು ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಟಿ.ಎಸ್.ರುದ್ರೇಶಪ್ಪಗೆ ಸೇರಿದ 2 ಮನೆಗಳು, ವಿವಿಧ ಕಡೆಗಳಲ್ಲಿ ನಾಲ್ಕು ನಿವೇಶನಗಳು ಪತ್ತೆಯಾಗಿವೆ. ಶೋಧ ಕಾರ್ಯದ ವೇಳೆ 9 ಕೆ.ಜಿ. 400 ಗ್ರಾಂ ತೂಕದ … Read more

ಎಸಿಬಿ ದಾಳಿ ವೇಳೆ ಸಿಕ್ತು ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ, ಇನ್ನೂ ಮುಂದುವರೆದಿದೆ ಶೋಧ ಕಾರ್ಯ

241121 Gold and money found in Shimoga during ACB Raid

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ನವೆಂಬರ್ 2021 ಶಿವಮೊಗ್ಗದಲ್ಲಿರುವ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈಗಾಗಲೆ ಮನೆಯಲ್ಲಿ ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಚಾಲುಕ್ಯ ನಗರ ಮತ್ತು ಗೋಪಾಳದಲ್ಲಿ ರುದ್ರೇಶಪ್ಪಗೆ ಸೇರಿದ ಮನೆಗಳಿವೆ. ಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮನೆಯ ಮೂಲೆ ಮೂಲೆಯನ್ನು ಶೋಧಿಸಿದ್ದಾರೆ. ರಾಶಿ ರಾಶಿ ಚಿನ್ನ … Read more