ಇವತ್ತಿನ ಅಡಕೆ ರೇಟ್ | 10 ಅಕ್ಟೋಬರ್ 2021

ಶಿವಮೊಗ್ಗ ಗೊರಬಲು 16000 32450 ಬೆಟ್ಟೆ 46009 50529 ರಾಶಿ 43099 49100 ಸರಕು 50509 74996 ಸಾಗರ ಕೆಂಪುಗೋಟು 33569 38009 ಕೋಕ 26099 39169 ಚಾಲಿ 34609 45099 ಬಿಳೆ ಗೋಟು 25288 40099 ರಾಶಿ 36219 47699 ಸಿಪ್ಪೆಗೋಟು 18100 25892 ಶಿರಸಿ ಚಾಲಿ 45029 48208 ಬೆಟ್ಟೆ 12099 45299 ಬಿಳೆ ಗೋಟು 26599 42426 ರಾಶಿ 37601 47919

ಅಡಕೆಗೆ ಬಂಪರ್ ಬೆಲೆ, ಇನ್ನಷ್ಟು ಏರಿಕೆಯ ನಿರೀಕ್ಷೆ, ಧಾರಣೆ ಹೆಚ್ಚಳಕ್ಕೆ ಕಾರಣವೇನು? ಮುಂದೇನಾಗುತ್ತೆ?

areca nut

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2021

ಒಂದು ವರ್ಷದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಕೆಗೆ ಈಗ ಬಂಪರ್ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಅಡಕೆ ಬೆಲೆ 50 ಸಾವಿರದ ಕಡೆಗೆ ಮುನ್ನುಗುತ್ತಿದೆ. ಇದರಿಂದ ಬೆಳೆಗಾರರು ಖುಷ್ ಆಗಿದ್ದಾರೆ.

38 ರಿಂದ 43 ಸಾವಿರ ರೂ.ವರೆಗೆ ಇದ್ದ ಅಡಕೆ ಬೆಲೆ ಈಗ 50 ಸಾವಿರ ರೂ. ಕಡೆ ಮುನ್ನಗುತ್ತಿದೆ.  ಮಂಗಳವಾರ 1 ಕ್ವಿಂಟಾಲ್ ರಾಶಿ ಅಡಿಕೆ ಬೆಲೆ 47,700 ರೂ.ಗೆ ತಲುಪಿದೆ. ಬಿಲ್ ಇಲ್ಲದೆ ವ್ಯವಹಾರ ಮಾಡುತ್ತಿರುವವರು 49 ಸಾವಿರ ರೂ.ವರೆಗೆ ಖರೀದಿ ಮಾಡಿದ್ದಾರೆ.

ಮಲೆನಾಡಿನ ಪ್ರಮುಖ ಬೆಳೆ

ಮಲೆನಾಡಿನ ಪ್ರಮುಖ ಬೆಳೆಯಾಗಿರುವ ಅಡಕೆ ಈಗ ಬಯಲುಸೀಮೆಯಲ್ಲೂ ಪ್ರಸಿದ್ಧಿ ಪಡೆದಿದೆ. ಕಡಿಮೆ ಖರ್ಚು ಹೆಚ್ಚು ಲಾಭದ ದೃಷ್ಟಿಯ ಕಾರಣದಿಂದ ಈಗ ಎಲ್ಲಿ ನೋಡಿದರೂ ಅಡಕೆ ತೋಟಗಳೇ ಕಾಣಸಿಗುತ್ತಿವೆ. ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ಅಡಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಅಡಕೆ ಬೆಳೆ ಹೆಚ್ಚಾದರೂ ಬೆಲೆ ಮಾತ್ರ ಕುಗ್ಗಿಲ್ಲ. ಇದಕ್ಕೆ ಅನೇಕ ಅಂಶಗಳು ಅನುಕೂಲಕರವಾಗಿವೆ.

ಅಡಕೆ ಬೆಲೆ ಹೆಚ್ಚಳಕ್ಕೆ ಕಾರಣಗಳೇನು?

ಕಾರಣ 1 – ಈಶಾನ್ಯ ಗಡಿಗಳು ಬಂದ್

ಈಶಾನ್ಯ ಗಡಿರಾಜ್ಯಗಳಲ್ಲಿ ಸಂಘರ್ಷ ಏರ್ಪಟ್ಟಿರುವುದರಿಂದ ಕೇಂದ್ರ ಸರ್ಕಾರ ಗಡಿಗಳನ್ನು ಬ್ಲಾಕ್ ಮಾಡಿದೆ. ಹಾಗಾಗಿ ಇಂಡೋನೇಷಿಯಾ, ಮಲೇಷಿಯಾ ದೇಶಗಳಿಂದ ಬರುತ್ತಿದ್ದ ಕಳಪೆ ಅಡಕೆ ನಿಂತಿದೆ. ಇಂತಹ ಅಡಕೆ ಮೇಲೆ ಕೆಲ ಗುಟ್ಕಾ ಕಂಪನಿಗಳು ಅವಲಂಬಿತವಾಗಿವೆ. ಈಗ ಗಡಿಗಳು ಬ್ಲಾಕ್ ಆಗಿರುವುದರಿಂದ ರೈತರಿಂದಲೇ ನೇರ ಖರೀದಿ ಮಾಡುತ್ತಿವೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.

ಕಾರಣ 2 – ಹೊಸ ಅಡಕೆ ಬಂದಿಲ್ಲ

ಇಷ್ಟೊತ್ತಿಗಾಗಲೇ ಹೊಸ ಅಡಕೆ ಮಾರುಕಟ್ಟೆ ಪ್ರವೇಶ ಮಾಡಬೇಕಿತ್ತು. ಮಳೆ ಕಾರಣದಿಂದ ಕೊಯ್ಲು, ಸಂಸ್ಕರಣೆ ಸೇರಿದಂತೆ ಎಲ್ಲಾ ಕೆಲಸಗಳು ನಿಧಾನವಾಗಿದ್ದು ಹೆಚ್ಚು ಆವಕ ಇಲ್ಲ. ಮೂರು ವರ್ಷದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕೊಳೆರೋಗ ಬಾಧಿಸುತ್ತಿದೆ. ಇದು ಸಹ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಕಾರಣ 3 – ಅಕ್ರಮ, ಸಕ್ರಮದ ಮಧ್ಯೆ ಸ್ಪರ್ಧೆ

ಇತ್ತೀಚೆಗೆ ರೈತರು ಅಡಕೆ ದಾಸ್ತಾನು ಮಾಡುವ ಸೌಲಭ್ಯ ಹೊಂದಿದ್ದು ತಮಗೆ ಅನುಕೂಲಕರ ಸಮಯಕ್ಕೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ದಿಢೀರ್ ಬೆಲೆ ಏರಿಕೆ ಲಾಭ ಪಡೆಯುವ ಉದ್ದೇಶದಿಂದ ಅಕ್ರಮ-ಸಕ್ರಮ ವ್ಯವಹಾರಸ್ಥರಲ್ಲಿ ಪೈಪೋಟಿ ಏರ್ಪಟ್ಟಿರುವುದರಿಂದ ಬೆಲೆ ಏರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂಬುದು ಪಕ್ಕಾ ವ್ಯವಹಾರಸ್ಥರ ಅಭಿಪ್ರಾಯ.

AVvXsEjqI8PPMNmhmzTK72s6aHdyGOwaxgBbnPaxEgdNmEiwLVxu2qPFWOl6pNSi5TkLjb7eVIwUDa7oTDLioeFYHsTaIvxkbizculAS6mYiPjBUAXSI3yUj FPfEWxml8DJztTgufNzviEAb8 E9X6L8I0JOYK4raqr

ಬೆಲೆ ಏರಿಕೆ ಹಾದಿ

ಫೆಬ್ರವರಿ 2020ರಲ್ಲಿ 39 ಸಾವಿರ ಆಸುಪಾಸಿನಲ್ಲಿದ್ದ ಅಡಕೆ ಕೆಲವೇ ತಿಂಗಳಲ್ಲಿ 42, 43 ಸಾವಿರಕ್ಕೆ ಸ್ಥಿರಗೊಂಡಿತು. 2021ರ ಆಗಸ್ಟ್ ವರೆಗೂ 38 ರಿಂದ 43 ಸಾವಿರವರೆಗೆ ಬೆಲೆ ಕಾಯ್ದುಕೊಂಡಿದೆ. ಆ.10ರ ರಾಶಿಯ ಗರಿಷ್ಟ ಬೆಲೆ 44,099, 16ರಂದು 44,299 ರೂ., 19ರಂದು 44,099 ರೂ., 23ರಂದು 46,599 ರೂ., 24ರಂದು 47,500 ರೂ.ಗೆ ವಹಿವಾಟು ನಡೆದಿದೆ. ರೈತರಿಂದ ನೇರ ಖರೀದಿಸುವ ವ್ಯವಹಾರಸ್ಥರು 49 ಸಾವಿರಕ್ಕೆ ಖರೀದಿ ಮಾಡಿ ದಾಖಲೆ ಬರೆದಿದ್ದಾರೆ.

ವ್ಯಾಪಾರಿಗಳಲ್ಲಿ ಹೆಚ್ಚುತ್ತಿದೆ ಆತಂಕ

ಬೆಲೆ ಏರಿಕೆಯು ಒಂದೆಡೆ ಖುಷಿಯ ವಿಚಾರವಾಗಿದ್ದರೆ ವ್ಯಾಪಾರಸ್ಥರಲ್ಲಿ ಆತಂಕ ಹುಟ್ಟಿಸುತ್ತಿದೆ. 43 ಸಾವಿರಕ್ಕೆ ಖರೀದಿ ಮಾಡಿದ ಅಡಕೆ 48 ಸಾವಿರಕ್ಕೆ ಬಿಕರಿಯಾದರೆ ಲಾಭವಾಗುತ್ತದೆ. ಅದೇ 49 ಸಾವಿರಕ್ಕೆ ಖರೀದಿ ಮಾಡಿದ ಅಡಕೆ 43 ಸಾವಿರಕ್ಕೆ ಬಿಕರಿಯಾದರೆ ದೊಡ್ಡ ನಷ್ಟವಾಗಲಿದೆ. ಮಾರುಕಟ್ಟೆ ಬೆಲೆ ಸ್ಥಿರತೆ ಕಾಪಾಡಿಕೊಳ್ಳದಿದ್ದರೆ ಎಲ್ಲರಿಗೂ ದೊಡ್ಡ ನಷ್ಟವಾಗಲಿದೆ. 2014ರಲ್ಲಿ 18 ಸಾವಿರ ಇದ್ದ ಅಡಕೆ ಬೆಲೆ 90 ಸಾವಿರವರೆಗೂ ಏರಿಕೆಯಾಗಿತ್ತು. ಒಂದೇ ಸಾರಿ ಮಾರುಕಟ್ಟೆ ಬಿದ್ದು ಅನೇಕ ವ್ಯಾಪಾರಿಗಳು ಬೀದಿಪಾಲಾದರು.

ಹಾಗಾಗಿ ಅಡಕೆ ಧಾರಣೆ ಏರಿಕೆ ಒಂದೆಡೆ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಮುಂದಿನ ವಹಿವಾಟು ಕುರಿತು ಆತಂಕವನ್ನು ಮೂಡಿಸಿದೆ.

240389864 1181422792337629 3783538181483720992 n.jpg? nc cat=104&ccb=1 5& nc sid=730e14& nc ohc=Cj3EIM570B0AX CPZbk& nc ht=scontent.fblr1 4

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಅಡಿಕೆ ಧಾರಣೆ | 23 ಸೆಪ್ಟೆಂಬರ್ 2020 | ಶಿವಮೊಗ್ಗ ಮತ್ತು ಸಿದ್ದಾಪುರ ಮಾರುಕಟ್ಟೆ

APMC-Shimoga-General-Image-1.jpg

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಸೆಪ್ಟಂಬರ್ 2020 ಶಿವಮೊಗ್ಗ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಬೆಟ್ಟೆ 36099 39810 ಗೊರಬಲು 16510 25633 ರಾಶಿ 32169 37344 ಸರಕು 48000 67740   ಸಿದ್ಧಾಪುರ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಕೆಂಪುಗೋಟು 21669 24299 ಕೋಕ 17399 24112 ಚಾಲಿ 30939 33099 ತಟ್ಟಿಬೆಟ್ಟೆ 29019 30699 ಬಿಳೆ ಗೋಟು 23399 27779 ರಾಶಿ 33099 37299