ಒಳ ಉಡುಪಿನಲ್ಲಿ ಗಾಂಜಾ ತಂದ ಅಧಿಕಾರಿ, ಸಿಕ್ಕಿಬಿದ್ದಿದ್ದು ಹೇಗೆ?

Shivamogga-Central-Prison-FDA-Arrested

ಶಿವಮೊಗ್ಗ: ತಪಾಸಣೆ ವೇಳೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಒಳ ಉಡುಪಿನಲ್ಲಿ ಗಾಂಜಾ ಪತ್ತೆಯಾಗಿದೆ. ಅಧಿಕಾರಿಯನ್ನು ವಶಕ್ಕೆ ಪಡೆದು ತುಂಗಾ ನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲಿನ ಎಫ್‌.ಡಿ.ಎ ಸಾತ್ವಿಕ್‌ (25) ಬಂಧಿತ. ಗುರುವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಾತ್ವಿಕ್‌ನನ್ನು ತಪಾಸಣೆ ಮಾಡಿದಾಗ ಒಳ ಉಡುಪಿನಲ್ಲಿ ಗಪ್‌ ಟೇಪ್‌ನಿಂದ ಸುತ್ತಿರುವ ವಸ್ತು ಪತ್ತೆಯಾಗಿತ್ತು. ಪರಿಶೀಲಿಸಿದಾಗ 170 ಗ್ರಾಂ ಗಾಂಜಾ ಸಿಕ್ಕಿದೆ. ಘಟನೆ ಕುರಿತು ಕೆ.ಎಸ್‌.ಐ.ಎಸ್‌.ಎಫ್‌ ಇನ್ಸ್‌ಪೆಕ್ಟರ್‌ ಜಗದೀಶ್‌, ಪಿ.ಎಸ್‌.ಐ ಪ್ರಭು, ಸಿಬ್ಬಂದಿ ಕುಪ್ಪೇರ ಬಸವರಾಜ್‌ … Read more

ಚಾಕು, ಲಾಂಗ್‌, ವಿಕೆಟ್‌ ಹಿಡಿದು ಭದ್ರಾವತಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್‌ ಮೇಲೆ ಪೊಲೀಸ್‌ ದಾಳಿ

New-Town-Police-Station-Bhadravathi

ಭದ್ರಾವತಿ: ಚಾಕು, ಲಾಂಗ್‌, ವಿಕೆಟ್‌ ಹಿಡಿದು ನಡುರಾತ್ರಿ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್‌ ಒಂದನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಶಿವರಾಮ ನಗರ ಮತ್ತು ಮಾಚೇನಹಳ್ಳಿ ನಡುವೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಅರೆಸ್ಟ್‌ (Arrest) ಮಾಡಿದ್ದಾರೆ. ಲೋಕೇಶ್‌, ಅಕಾಶ್‌, ಸುಂದರ್‌, ಸುಜಿತ್‌, ದಿಲೀಪ್‌ ಬಂಧಿತರು. ರಸ್ತೆಯಲ್ಲಿ ಓಮ್ನಿ ಕಾರು ನಿಲ್ಲಿಸಿಕೊಂಡು ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದರು. ಪೊಲೀಸರು ದಾಳಿ ನಡೆಸಿದಾಗ ಐವರು ಪರಾರಿಯಾಗಲು ಯತ್ನಿಸಿದ್ದರು. ಮಜಾ ಮಾಡೋಕೆ ದರೋಡೆ … Read more

ಶಿವಮೊಗ್ಗದ ಬಸ್‌ ನಿಲ್ದಾಣದಲ್ಲಿ ಯುವಕ ವಶಕ್ಕೆ, ಮೆಡಿಕಲ್‌ ಟೆಸ್ಟ್‌ ಬಳಿಕ ಅರೆಸ್ಟ್‌, ಕಾರಣವೇನು?

Shimoga-Private-Bus-Stand-Board

ಶಿವಮೊಗ್ಗ: ಖಾಸಗಿ ಬಸ್‌ ನಿಲ್ದಾಣದಲ್ಲಿ ಪೊಲೀಸರು ಅನುಮಾನದ ಮೇರೆಗೆ ಯುವಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಈ ಹಿನ್ನೆಲೆ ಯುವಕನನ್ನು ಬಂಧಿಸಲಾಗಿದೆ (Arrest). ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಪೊಲೀಸರು ಗಸ್ತು ಮಾಡುವಾಗ 3ನೇ ಪ್ಲಾಟ್‌ಫಾರಂನಲ್ಲಿ ದರ್ಶನ್‌ ಎಂಬಾತ ಅಮಲಿನಲ್ಲಿದ್ದಂತೆ ಕಾಣಿಸಿತು. ಆತನನ್ನು ವಶಕ್ಕೆ ಪಡೆದು ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಈ ಹಿನ್ನೆಲೆ ದೊಡ್ಡಪೇಟೆ ಠಾಣೆ ಪೊಲೀಸರು … Read more

ಆನಂದಪುರ ಠಾಣೆ ಪೊಲೀಸರ ಕಾರ್ಯಾಚರಣೆ, ಗೋವು ಸಾಗಣೆ ಮಾಡುತ್ತಿದ್ದ ಶಿಕಾರಿಪುರದ ಇಬ್ಬರ ಬಂಧನ

281123-Anandapura-Police-Station-Board.webp

ತ್ಯಾಗರ್ತಿ: ಜಾನುವಾರು (Cow) ಅಕ್ರಮ ಸಾಗಣೆ ಮಾಡುತ್ತಿದ್ದ ವಾಹನವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಆನಂದಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕಿನ ತ್ಯಾಗರ್ತಿ ಮಾರಿಕಾಂಬಾ ವೃತ್ತದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪರವಾನಗಿ ಇಲ್ಲದೆ 2 ಎಮ್ಮೆ, 1 ಕೋಣ, 2 ಹೋರಿಗಳನ್ನು ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ತುಂಬಿ ಸಾಗಿಸುತ್ತಿದ್ದರು. ಶಿಕಾರಿಪುರ ತಾಲೂಕು ಬಿಳಕಿ ಗ್ರಾಮದ ಮೆಹಬೂಬ್ ಬಾಷಾ ಹಾಗೂ ಮಕ್ಬೂಲ್ ಸಾಬ್ ಎಂಬುವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ » ಅಡಿಕೆ ಬೆಳೆಯಲ್ಲಿ ಅಂತರ, ಮಿಶ್ರ ಬೆಳೆ … Read more

ಮನೆಗೆ ನುಗ್ಗಿ ಮಹಿಳೆಯ ಅತ್ಯಾಚರಕ್ಕೆ ಯತ್ನ, ಆರೋಪಿ ಅರೆಸ್ಟ್‌

Crime-News-General-Image

ರಿಪ್ಪನ್‌ಪೇಟೆ: ಮನೆಗೆ ನುಗ್ಗಿ ಮಹಿಳೆಯೊಬ್ಬರ (woman) ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ರಿಪ್ಪನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸೆ ಗ್ರಾಮದ ಪ್ರಕಾಶ್ (48) ಬಂಧಿತ. ಮಹಿಳೆ ನೀಡಿದ ದೂರಿನ ಅನ್ವಯ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಇದನ್ನೂ ಓದಿ » ಕುವೆಂಪು ವಿವಿ ಸ್ನಾತಕೋತ್ತರ ವಿಭಾಗಕ್ಕೆ ಸೇರುವವರಿಗೆ ಗುಡ್‌ ನ್ಯೂಸ್‌ attempt on woman a man arrested

ಶಿವಮೊಗ್ಗದ ಮಣಿಕಂಠ ಕೊಲೆ ಕೇಸ್‌, ತಮ್ಮನಿಂದಲೇ ಹತ್ಯೆ, ಆರೋಪಿ ಅರೆಸ್ಟ್‌, ಕೃತ್ಯಕ್ಕೆ ಕಾರಣವೇನು?

Melina-tunga-Nagara-manikanta-issue

ಶಿವಮೊಗ್ಗ: ಮೇಲಿನ ತುಂಗಾನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಣಿಕಂಠನ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (Arrest). ಕ್ಷುಲಕ ವಿಚಾರಕ್ಕೆ ಸಹೋದರನೆ ಮಣಿಕಂಠನ ಹತ್ಯೆ ‌ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ » ಗಾಳಿ, ಮಳೆಗೆ ಹಲವೆಡೆ ಹಾನಿ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ನ್ಯೂಸ್‌ ಮಣಿಕಂಠನ ತಮ್ಮ ಸಂತೋಷ್‌ (31) ಎಂಬಾತನನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮುಂದುವರೆಸಿದ್ದಾರೆ. ಹತ್ಯೆಗೆ ಕಾರಣವೇನು? ಮೇಲಿನ ತುಂಗಾನಗರದ … Read more

ಹೊಳೆಹೊನ್ನೂರು ಪೊಲೀಸರಿಂದ ಚನ್ನಗಿರಿಯ ಬೆಂಕಿ ರಾಮಪ್ಪ ಅರೆಸ್ಟ್‌, ಕಂತೆ ಕಂತೆ ದುಡ್ಡು ವಶಕ್ಕೆ, ಏನಿದು ಕೇಸ್‌?

fake-gold-case-one-arrested-by-holehonnuru-police.

ಹೊಳೆಹೊನ್ನೂರು: ನಕಲಿ ಬಂಗಾರ (Gold) ನೀಡಿ ಲಕ್ಷಾಂತರ ವಂಚಿಸಿದ್ದ ಆರೋಪ ಸಂಬಂಧ ರಾಮಪ್ಪ ಅಲಿಯಾಸ್‌ ಬೆಂಕಿ ರಾಮಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ರಾಮಪ್ಪ ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿ ರಾಜೇಶ್ ಅವರಿಗೆ ಸುರೇಶ್ ಎಂದು ಪರಿಚಯಿಸಿಕೊಂಡಿದ್ದ. ನಂತರ, ಕಾಮಗಾರಿ ವೇಳೆ ನನಗೆ ಬಂಗಾರ ಸಿಕ್ಕಿದೆ. ಅದನ್ನು ನಿಮಗೆ ಮಾರಾಟ ಮಾಡುತ್ತೇನೆ ಎಂದು ಅವರನ್ನು ನಂಬಿಸಿದ್ದ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಜಾಹೀರಾತುಗಳ ಕೆಳಗೆ ಸುದ್ದಿ ಇನ್ನೂ ಇದೆ)   ಬಂಗಾರ ಕೊಡುವುದಾಗಿ ಹೇಳಿ … Read more

ಓಮ್ನಿ ಕಾರು ಅಡ್ಡಗಟ್ಟಿ ಲಕ್ಷ ಲಕ್ಷದ ಗುಜರಿ ವಸ್ತು ದರೋಡೆ, ನಾಲ್ವರು ಅರೆಸ್ಟ್‌, ಏನಿದು ಕೇಸ್‌?

Scrap-theft-case-four-arrested-by-bhadravathi-police

ಭದ್ರಾವತಿ : ಕಾರು ಅಡ್ಡಗಟ್ಟಿ 3.50 ಲಕ್ಷ ರೂ. ಮೌಲ್ಯದ ತಾಮ್ರ ಮತ್ತು ಹಿತ್ತಾಳೆಯ ಗುಜರಿ (Scrap) ವಸ್ತುಗಳನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಗುಜರಿ ವಸ್ತುಗಳು ಸೇರಿ ಒಟ್ಟು 7.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ » ಕೆಎಫ್‌ಡಿ ಸೋಂಕು, ತೀರ್ಥಹಳ್ಳಿಯ ಬಾಲಕ ಮಣಿಪಾಲದಲ್ಲಿ ಸಾವು ಭದ್ರಾವತಿ ಹೊಸಮನೆಯ ಭೋವಿ ಕಾಲೋನಿಯ ಕವಿರಾಜ್‌ (21), ಶಿವಮೊಗ್ಗದ ಮೇಲಿನ ತುಂಗಾನಗರದ ಮುಬಾರಕ್‌ (24), ಭದ್ರಾವತಿ ಬಾರಂದೂರಿನ ಅಜಿತ್‌ ಅಲಿಯಾಸ್‌ … Read more

ಒಂದು ಲಕ್ಷ ರೂ. ಲಂಚದ ಜೊತೆ ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ ಚೀಫ್‌ ಇಂಜಿನಿಯರ್‌, ಏನಿದು ಕೇಸ್‌?

Lokayuktha-Raid-General-Image

ಶಿವಮೊಗ್ಗ : ಒಂದು ಲಕ್ಷ ರೂ. ಲಂಚ (Bribe) ಪಡೆಯುತ್ತಿದ್ದ ಸಂದರ್ಭ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಭಾರ ಚೀಫ್‌ ಇಂಜಿನಿಯರ್‌ ಕೃಷ್ಣಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 11 ಲಕ್ಷ ರೂ. ಮೊತ್ತದ ಬಿಲ್‌ ಪಾವತಿಗೆ ಕೃಷ್ಣಪ್ಪ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇವತ್ತು ಹಣ ಪಡೆಯುವ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಎಕ್ಸ್‌ಟ್ರೀಮ್‌ ಮೀಡಿಯಾ ಸಂಸ್ಥೆಯ ಎಕ್ಸಿಕ್ಯೂಟಿವ್‌ ಸೈಟ್‌ ಇಂಜಿನಿಯರ್‌ ಪವನ್‌ ಅವರಿಂದ ಸ್ಮಾರ್ಟ್‌ ಸಿಟಿಯ ಪ್ರಭಾರ … Read more

BREAKING NEWS – ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ ಗೌಡ ಅರೆಸ್ಟ್‌

RM-Manjunatha-Gowda-with-ED-Officials.

ಬೆಂಗಳೂರು : ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬಂಧನವಾಗಿದೆ (ARREST). ತೀವ್ರ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ದಿನವು ಮುಂದುವರೆದ ಇ.ಡಿ ದಾಳಿ, ಎಲ್ಲೆಲ್ಲಿ ದಾಳಿಯಾಗಿದೆ? ಮಂಜುನಾಥ ಗೌಡ ಅವರನ್ನು 14 ದಿನ ಇ.ಡಿ. ವಶಕ್ಕೆ ನೀಡಲಾಗಿದೆ. ಬೆಂಗಳೂರಿನ 1ನೇ ಸಿಸಿಹೆಚ್‌ ನ್ಯಾಯಾಲಯಕ್ಕೆ ಮಂಜುನಾಥ ಗೌಡ ಅವರನ್ನು ಹಾಜರುಪಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಅಪೆಕ್ಸ್‌ ಬ್ಯಾಂಕ್‌ … Read more