ಭದ್ರಾವತಿಯಲ್ಲಿ ಯುವಕನ ಮೇಲೆ ಹಲ್ಲೆ ಬೆನ್ನಿಗೆ ವಿಡಿಯೋ ವೈರಲ್
ಭದ್ರಾವತಿ| ಮನೆ ಮುಂದಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ನಡುವೆ ಅಂದರ್ ಬಾಹರ್ ವಿಡಿಯೋ ವೈರಲ್ ಆಗಿದ್ದು, ಹಲ್ಲೆಗೆ ಇದುವೆ ಪ್ರಮುಖ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಭದ್ರಾವತಿ ನೆಹರು ನಗರ ನಿವಾಸಿ ಸುನಿಲ್ (28) ಎಂಬಾತನ ಮೇಲೆ ಹಲ್ಲೆಯಾಗಿದೆ. ಭದ್ರಾವತಿಯ ಮುಬಾರಕ್ ಅಲಿಯಾಸ್ ಡಿಚ್ಚಿ (26) ಎಂಬಾತ ಹಲ್ಲೆ ನಡೆಸಿದ್ದಾನೆ. ಕೆಲಸಕ್ಕೆ ಹೋಗಲು ಸುನಿಲ್ ತನ್ನ ಮನೆ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮುಬಾರಕ್ ಅಲಿಯಾಸ್ ಡಿಚ್ಚಿ, ಸುನಿಲನನ್ನು ಅಡ್ಡಗಟ್ಟಿದ್ದಾನೆ. … Read more