ಗೋಪಾಳದಲ್ಲಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಪೆಟ್ಟು, ಆಗಿದ್ದೇನು?

Shimoga-News-update

ಶಿವಮೊಗ್ಗ: ಗೋಪಾಳದ ಪ್ರೆಸ್‌ ಕಾಲೋನಿಯಲ್ಲಿ ಮರ ಕತ್ತರಿಸುವ ಕಾಮಗಾರಿ ವೇಳೆ ಅವಘಡ ಉಂಟಾಗಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಗಾಯವಾಗಿದೆ. ಘಟನೆ ಸಂಬಂಧ ಮೇಸ್ತ್ರಿ ಮತ್ತು ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಮಿಕ ಹನುಮನಂತಪ್ಪ ಎಂಬುವವರು ಗಾಯಗೊಂಡಿದ್ದಾರೆ. ಗೋಪಾಳದಲ್ಲಿರುವ ಸುರೇಶ್ ಎಂಬುವವರ ಮನೆ ಬಳಿ ಮರದ ಬುಡವನ್ನು ಗ್ರಾನೈಟ್ ಕಟ್ ಮಾಡುವ ಮಿಷನ್‌ನಿಂದ ಕತ್ತರಿಸುವ ಕೆಲಸ ಮಾಡಿಸಲಾಯಿತು. ಮಿಷನ್ ನಿಯಂತ್ರಣ ತಪ್ಪಿ ಹಿಂದಕ್ಕೆ ಬಂದು ಹನುಮಂತಪ್ಪ ಅವರ ಮರ್ಮಾಂಗಕ್ಕೆ ಬಡಿದಿದೆ ಎಂದು ಆರೋಪಿಸಲಾಗಿದೆ. ಕೂಡಲೆ ಅವರನ್ನು ಮೆಗ್ಗಾನ್‌ … Read more

ಶಿವಮೊಗ್ಗದ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

SUDA-Building-in-Shimoga

ಶಿವಮೊಗ್ಗ: ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು (ಸೂಡಾ) ತನ್ನ ವ್ಯಾಪ್ತಿಯ ಖಾಸಗಿ ಬಡಾವಣೆಗಳಲ್ಲಿ ಲಭ್ಯವಿರುವ ನಿವೇಶನಗಳನ್ನು (Site Sale) ಹಂಚಿಕೆ ಮಾಡುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್‌ 6ರವರೆಗೆ ವಿಸ್ತರಿಸಿದೆ. ಜುಲೈ 29ರಂದು ಪ್ರಕಟಣೆ ಹೊರಡಿಸಿ, ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಆ. 29 ಕಡೆಯ ದಿನವೆಂದು ತಿಳಿಸಿತ್ತು. ಆದರೆ ಕಾರಣಾಂತರದಿಂದ ಈ ಅವಧಿಯನ್ನು ಸೆ.6ರವರೆಗೆ ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್ ಹಾಗೂ ಮೊಬೈಲ್‌ ಸಂಖ್ಯೆ: 99800 05678ಗೆ ಸಂಪರ್ಕಿಸಬಹುದು ಎಂದು ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ … Read more

ಕಾರ್‌ ಗ್ಲಾಸ್‌ ಪೀಸ್‌ ಪೀಸ್‌, ಹೌಹಾರಿದ ಶಾಸಕ, ಹೋಮ್‌ ಮಿನಿಸ್ಟರ್‌ ವಾರ್ನಿಂಗ್‌, ಇಡೀ ದಿನ ಏನೇನಾಯ್ತು?

300524 Shimoga Hosamane car glass break

SHIVAMOGGA LIVE NEWS | 30 MAY 2024 SHIMOGA : ಹೊಸಮನೆ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ (Attack) ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ಬೆನ್ನಿಗೆ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದರು. ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ ಪೊಲೀಸ್‌ ಚೌಕಿಗಾಗಿ ಬಡಾವಣೆಯ ಮಾಜಿ ಕಾರ್ಪೊರೇಟರ್‌ ಆಗ್ರಹಿಸಿದ್ದಾರೆ. ಬೆಳಗ್ಗೆಯಿಂದ ಏನೇನಾಯ್ತು ಬೆಳವಣಿಗೆ? ಕಳೆದ ರಾತ್ರಿ ಹೊಸಮನೆ ಬಡಾವಣೆಯ ಮೂರನೇ ಅಡ್ಡರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ವಾಹನಗಳು, ಮನೆ ಮುಂದಿನ ವಸ್ತುಗಳ ಮೇಲೆ … Read more

ಶಿವಮೊಗ್ಗದಲ್ಲಿ ಶ್ರದ್ಧೆ ಭಕ್ತಿಯ ದೊಡ್ಡಮ್ಮ ಜಲದುರ್ಗಮ್ಮ ದೇವಿ ಜಾತ್ರೆ, ಕೆಂಡಾರ್ಚನೆ, ಹೇಗಿತ್ತು ವೈಭವ?

doddamma-jaladurgamma-jathre-in-Shimoga-city.

SHIVAMOGGA LIVE NEWS | 23 MAY 2024 SHIMOGA : ಹೊಸಮನೆ ಬಡಾವಣೆಯ ದೊಡ್ಡಮ್ಮ ಜಲದುರ್ಗಮ್ಮ ದೇವಿ ಜಾತ್ರೆ (Jathre) ಮಹೋತ್ಸವ ಮತ್ತು ಕೆಂಡಾರ್ಚನೆ ಮಹೋತ್ಸವ ಶ್ರದ್ಧೆ ಭಕ್ತಿಯಿಂದ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಇದನ್ನೂ ಓದಿ – ಭದ್ರಾವತಿಯಲ್ಲಿ ಗಂಗೆ ಪೂಜೆಗೆ ತರೆಳಿದ್ದವರ ಮೇಲೆ ಹೆಜ್ಜೇನು ದಾಳಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ಉತ್ಸವ ಮೆರವಣಿಗೆ ನಡೆಯಿತು. ಹಲವು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಂಡಾರ್ಚನೆ ಮಹೋತ್ಸವಕ್ಕೆ ಕಲತ್ತಗಿರಿಯಿಂದ ಪಾದಯಾತ್ರೆ ಮೂಲಕ ಜಲದುರ್ಗಮ್ಮ ಮತ್ತು ಗಂಗೆಯನ್ನು … Read more

BREAKING NEWS – ಶಿವಮೊಗ್ಗದಲ್ಲಿ ಆಪರೇಷನ್‌ ಕರಡಿ ಯಶಸ್ವಿ, ಅರಣ್ಯ ಇಲಾಖೆ ಪರ ಜೈಕಾರದ ಘೋಷಣೆ

280224 Operation Bear in Shimoga Gopalagowda Layout

SHIVAMOGGA LIVE NEWS | 28 FEBRUARY 2024 SHIMOGA : ಗೋಪಾಲಗೌಡ ಬಡಾವಣೆಯಲ್ಲಿ ಬೆಳಗ್ಗೆ ಕಾಣಿಸಿಕೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಇಲ್ಲಿನ ಡಿವಿಜಿ ಪಾರ್ಕ್‌ ಮುಂಭಾಗದ ಖಾಲಿ ನಿವೇಶನದಲ್ಲಿ ಕರಡಿ ಇತ್ತು. ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ಆತಂಕಗೊಂಡಿತ್ತು. ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ತುಕಾರಾಂ ಶೆಟ್ಟಿ ಎಂಬುವವರ ಮೇಲೆ ದಾಳಿ ನಡಸಿತ್ತು. ಡಿವಿಜಿ ಪಾರ್ಕ್‌ ಎದುರು ನಿವೇಶನದಲ್ಲಿ ಗಿಡಗಳ ಮಧ್ಯೆ ಅವಿತು ಕುಳಿತಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ‘ಆಪರೇಷನ್‌ ಕರಡಿ’ ಆರಂಭಿಸಿದ್ದರು. … Read more

ಶಿವಮೊಗ್ಗದ ಬಡವರು, ಮಧ್ಯಮ ವರ್ಗದವರಿಗೆ ಸಿಗಲಿ ಸೈಟ್‌, ಖಾಸಗಿ ಬಡಾವಣೆಗೆ ಬ್ರೇಕ್‌, ತಾಕೀತು ಮಾಡಿದ ಮಿನಿಸ್ಟರ್‌

301023-Minister-Byrati-Suresh-meeting-in-Shimoga-MLA-Channabasappa.webp

SHIVAMOGGA LIVE NEWS | 30 OCTOBER 2023 SHIMOGA : ಉಳಿದ ನಗರಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗದಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಅತ್ಯಂತ ಕಡಿಮೆ ಬಡಾವಣೆಗಳನ್ನು (Layout) ನಿರ್ಮಿಸಿದೆ. ಆದ್ದರಿಂದ ಇನ್ಮುಂದೆ ಖಾಸಗಿ ಲೇಔಟ್‌ಗಳಿಗೆ ಅನುಮತಿ ನೀಡದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಿಸಬೇಕು. ಬಡವರು, ಮಧ್ಯಮ ವರ್ಗದವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಸೂಚಿಸಿದರು. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಕೆಯುಐಡಿಎಫ್‌ಸಿ, ನೀರು ಸರಬರಾಜು ಮತ್ತು ಒಳ … Read more

ಮಳೆ ಬಂದರೆ ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆ ನಿವಾಸಿಗಳಿಗೆ ನಿದ್ರೆ ಹಾರಿ ಹೋಗುತ್ತೆ

Gopalagowda-Layout-C-Block-Water-logging-problem

ಶಿವಮೊಗ್ಗ| ಮಳೆಗಾಲ ಶುರುವಾಗುತ್ತಿದ್ದಂತೆ ಗೋಪಾಲಗೌಡ ಬಡಾವಣೆ (GOPALA GOWDA LAYOUT) ನಿವಾಸಿಗಳು ನಿದ್ರೆಯೆ ಹಾರಿ ಹೋಗುತ್ತದೆ. ಪ್ರತಿ ಮಳೆಗೂ (RAIN) ಜನರು ಆತಂಕ ಪಡುವಂತಾಗಿದೆ. ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಿವಾಸಿಗಳಿಗೆ ಮಳೆಗಾಲ ಆರಂಭವಾಗುತ್ತಿದ್ದಂತೆ ನಡುಕ ಹುಟ್ಟುತ್ತದೆ. ಮಳೆ (RAIN) ಪ್ರಮಾಣ ಸ್ವಲ್ಪ ಹೆಚ್ಚಾದರೂ, ಮನೆಗಳು ಜಲಾವೃತವಾಗಲಿವೆ. ಸಮಸ್ಯೆ ಪರಿಹರಿಸಿಕೊಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಪರಿಹಾರ ಸಿಕ್ಕಿಲ್ಲ. ಕೆಳಗಿನ ಮನೆಯವರಿಗೆ ಸಂಕಷ್ಟ ಸಿ ಬ್ಲಾಕ್’ನಲ್ಲಿರುವ ನೆಲ ಅಂತಸ್ತಿನ ಮನೆಗಳ ನಿವಾಸಿಗಳಿಗೆ ಮಳೆಗಾಲ ದೊಡ್ಡ ಸಂಕಷ್ಟ … Read more

ಶಿವಮೊಗ್ಗದ ಹೊಸಮನೆಯಲ್ಲಿ ಯುವಕನಿಗೆ ಚಾಕು ಇರಿತ

crime name image

SHIVAMOGGA LIVE NEWS | SHIMOGA | 8 ಜೂನ್ 2022 ಹಳೆ ವೈಷಮ್ಯಕ್ಕೆ ಹೊಸಮನೆ ಬಡಾವಣೆಯಲ್ಲಿ ಯುವಕನ ಮೇಲೆ ಚಾಕುಗಳಿಂದ ದಾಳಿ (ASSAULT) ನಡೆಸಲಾಗಿದೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೋಪಾಳದ ರಂಗನಾಥ ಬಡಾವಣೆಯ ರೂಪೇಶ (29) ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ಹೊಸಮನೆ ದೊಡ್ಡಮ್ಮನ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ಏನಿದು ಘಟನೆ? ಸೋಮವಾರ ರಾತ್ರಿ ದರ್ಶನ್ ಎಂಬಾತ ಕರೆ ಮಾಡಿ, ಮಾತನಾಡುವುದಿದೆ ಎಂದು ರೂಪೇಶನನ್ನು ಹೊಸಮನೆ ಬಡಾವಣೆಗೆ ಕರೆಸಿಕೊಂಡಿದ್ದಾನೆ. … Read more

ಹೊಸಮನೆಯಲ್ಲಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ, ಮೂವರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

Shimoga District Court

SHIVAMOGGA LIVE NEWS | JAIL | 28 ಮೇ 2022 ಹಳೆ ದ್ವೇಷದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಆರೋಪಿಗಳಿಗೆ ಜೈಲು ಶಿಕ್ಷೆಯಾಗಿದೆ. ವಿಚಾರಣೆ ನಡೆಸಿದ ಶಿವಮೊಗ್ಗ ನ್ಯಾಯಾಲಯದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟಿಸಿದ್ದಾರೆ. ಹರೀಶ್ (24) ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಮಂಜುನಾಥ ಅಲಿಯಾಸ್ ಕಟ್ಟಿಂಗ್ ಶಾಪ್ ಮಂಜ, ಅನಿಲ, ಪ್ರಶಾಂತ್ ಅಲಿಯಾಸ್ ಕೊಡ್ಲಿ ಪ್ರಶಾಂತ್ ಎಂಬುವವರಿಗೆ ಜೈಲು ಶಿಕ್ಷೆಯಾಗಿದೆ. ಏನಿದು ಪ್ರಕರಣ? … Read more

ಮಳೆ ಅವಾಂತರ 5 | ಮತ್ತೆ ಮುಳುಗಿದ ಹೊಸಮನೆ, ಕೊಚ್ಚಿ ಹೋಯ್ತು ಬದುಕು

Rain-At-Hosamane-Badavane-in-Shimoga

SHIVAMOGGA LIVE NEWS | RAIN EFFECT | 19 ಮೇ 2022 ಭಾರಿ ಮಳೆ ಹಿನ್ನೆಲೆ ಹೊಸಮನೆ ಬಡಾವಣೆ ಪುನಃ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಬೆಳಗ್ಗೆಯಿಂದ ಸುರಿದ ಮಳೆಗೆ ಹೊಸಮನೆ ಬಡಾವಣೆಯ ಕೆಲವು ಕಡೆ ನೀರು ನುಗ್ಗಿದೆ. ಮನೆಗಳು ಜಲಾವೃತವಾಗಿವೆ. ದಿನಸಿ ಸೇರಿದಂತೆ ಮನೆಯೊಳಗಿದ್ದ ಹಲವು ವಸ್ತುಗಳು ಪೀಠೋಪಕರಣಗಳು ಹಾನಿಯಾಗಿವೆ. ಪಕ್ಕದ ಚಾನೆಲ್ ತುಂಬಿ ಹರಿದಿದ್ದರಿಂದ ನೀರು ಬಡಾವಣೆಗೆ ನುಗ್ಗಿದೆ. ಚರಂಡಿ ನೀರು ಕೂಡ ಸರಾಗವಾಗಿ ಮುಂದೆ ಸಾಗದೆ ಇದ್ದಿದ್ದರಿಂದ … Read more