ಮುಷ್ಕರದ ಎಫೆಕ್ಟ್, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೆಟ್ರೋಲ್, ಡಿಸೇಲ್’ಗಾಗಿ ಮುಗಿಬಿದ್ದ ಜನ

Heavy-rush-Petrol-Bunk-in-Shiralakoppa

SHIVAMOGGA LIVE NEWS | PETROL | 30 ಮೇ 2022 ಪೆಟ್ರೋಲ್ ಬಂಕ್ ಮಾಲೀಕರು ಒಂದು ದಿನ ಪೆಟ್ರೋಲ್ ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ವಿವಿಧ ಪೆಟ್ರೋಲ್ ಬಂಕ್’ಗಳಲ್ಲಿ ಇವತ್ತು ಇಂಧನಕ್ಕಾಗಿ ಜನರು ಮುಗಿಬಿದ್ದರು. ಒಂದು ದಿನದ ಮುಷ್ಕರದಿಂದಾಗಿ ಮೂರ್ನಾಲ್ಕು ದಿನ ಪೆಟ್ರೋಲ್, ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ಹಿನ್ನೆಲೆ ಜನರು ಪೆಟ್ರೋಲ್, ಡಿಸೇಲ್’ಗೆ ಮುಗಿಬಿದ್ದರು. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಪೆಟ್ರೋಲ್ ಬಂಕ್ … Read more

ಭಾರತ್ ಬಂದ್ | ಶಿವಮೊಗ್ಗ ಸಿಟಿಯಲ್ಲಿ ನೀರಸ, ಬಸ್ಸು, ಆಟೋ, ವಾಹನ ಸಂಚಾರವಿದೆಯಾ?

270921 Shimoga Private Bus Stand During Bharat Band

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಸೆಪ್ಟೆಂಬರ್ 2021 ಸಂಯುಕ್ತ ಕಿಸಾನ್ ಮಂಚ್ ಕರೆ ನೀಡಿರುವ ಭಾರತ್ ಬಂದ್’ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್, ಆಟೊ, ಟ್ರಾಕ್ಸ್ ಸಂಚಾರ ಎಂದಿನಂತೆ ಇದೆ. ಜನಜೀವನದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಭಾರತ್ ಬಂದ್’ಗೆ ಖಾಸಗಿ ಬಸ್ ಮಾಲೀಕರು, ಆಟೊ ಚಾಲಕರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. ರಸ್ತೆಗಿಳಿದ ಸರ್ಕಾರಿ, ಖಾಸಗಿ ಬಸ್ ಖಾಸಗಿ ಬಸ್ಸುಗಳು ಶಿವಮೊಗ್ಗ ಜಿಲ್ಲೆಯ … Read more

200 ಸಂಘಟನೆಗಳಿಂದ ಭಾರತ್ ಬಂದ್, ಸ್ಥಬ್ಧವಾಗಲಿದೆಯಂತೆ ಸಂಪೂರ್ಣ ಗ್ರಾಮೀಣ ಕರ್ನಾಟಕ

ಶಿವಮೊಗ್ಗ ಲೈವ್.ಕಾಂ | SHIMOGA | 2 ಜನವರಿ 2020 ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜನವರಿ 8ರಂದು ಭಾರತ್ ಬಂದ್ ಮಾಡಲಾಗುತ್ತಿದೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಬಂದ್’ಗೆ ಕರೆ ನೀಡಿದ್ದು, ಗ್ರಾಮೀಣ ಕರ್ನಾಟಕವು ಸಂಪರ್ಣವಾಗಿ ಬಂದ್ ಆಗಲಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಆರ್.ಬಸವರಾಜಪ್ಪ, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಭಾರತ್ ಬಂದ್ ಮಾಡಲಾಗುತ್ತಿದೆ. ಆ ದಿನ ಗ್ರಾಮೀಣ ಕರ್ನಾಟಕವು ಬಂದ್ … Read more