ಸಾಗರದಲ್ಲಿ ಭೀಕರ ಅಪಘಾತದ ಬೆನ್ನಿಗೆ ಸ್ಪೀಡ್ ಬ್ರೇಕರ್’ಗಾಗಿ ಆಗ್ರಹ
ಶಿವಮೊಗ್ಗ ಲೈವ್.ಕಾಂ | SAGARA NEWS | 20 ನವೆಂಬರ್ 2021 ಇಂದಿರಾ ಗಾಂಧಿ ಕಾಲೇಜು ಬಳಿ ಸಂಭವಿಸಿದ ಭೀಕರ ಅಪಘಾತದ ಬೆನ್ನಿಗೆ, ಸಾಗರದಲ್ಲಿ ವಿದ್ಯಾರ್ಥಿಗಳು ಸ್ಪೀಡ್ ಬ್ರೇಕರ್’ಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಇಂದಿರಾ ಗಾಂಧಿ ಕಾಲೇಜು ಸಮೀಪ ಅಪಘಾತ ಸಂಭವಿಸಿ, ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತವೆ. … Read more