ಎರಡು ಬೈಕುಗಳಿಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಲಾರಿ

Hakrekoppa-Truck-and-bike-accident

ಸಾಗರ | ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಎದುರಿನಿಂದ ಬರುತ್ತಿದ್ದ ಎರಡು ಬೈಕ್’ಗಳಿಗೆ ಡಿಕ್ಕಿ (ACCIDENT) ಹೊಡೆದು, ರಸ್ತೆ ಪಕ್ಕದ ಗುಂಡಿಗೆ ಹೋಗಿ ನಿಂತಿದೆ. ಘಟನೆಯಲ್ಲಿ ಓರ್ವ ಬೈಕ್ ಸಾವರ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಸಾಗರ ತಾಲೂಕಿನ ಹಕ್ರೆಗೊಪ್ಪ ತಿರುವಿನಲ್ಲಿ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ, ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಸಿರೆ ಗ್ರಾಮದ ಪ್ರೇಮಾನಂದ (51) ಮೃತಪಟ್ಟಿದ್ದಾರೆ. ಹೇಗಾಯ್ತು ಘಟನೆ? ಪ್ರೇಮಾನಂದ ಅವರು ತಮ್ಮ ಪತ್ನಿ ಪಾಲಾಕ್ಷಮ್ಮ ಅವರೊಂದಿಗೆ ಬುಲೆಟ್ ಬೈಕಿನಲ್ಲಿ ಬೆಳ್ಳಿಬೈಲು ಗ್ರಾಮಕ್ಕೆ … Read more

ಹೈಟೆಕ್ ಗೇಟಿಗೆ ಅಡ್ಡಿ ಅಂತಾ ನೆರಳು ನೀಡುತ್ತಿದ್ದ ಮರಗಳನ್ನೇ ಕತ್ತರಿಸಿ ಬಿಸಾಕಿದರು

Tree Cut in Front of Sahyadri College

SHIVAMOGGA LIVE NEWS | SHIMOGA | 28 ಜೂನ್ 2022 ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮುಂಭಾಗ ಐದು ಮರಗಳನ್ನು ಕಡಿತಲೆ ಮಾಡಲಾಗಿದೆ (TREE CUTTING). ಗೇಟಿಗೆ ಅಡ್ಡಲಾಗಿದೆ ಎಂಬ ಏಕೈಕ ಕಾರಣಕ್ಕೆ ಮರಗಳನ್ನು ಕತ್ತರಿಸಲಾಗಿದೆ. ವಿದ್ಯಾನಗರದ ಕಡೆಗಿರುವ ಸಹ್ಯಾದ್ರಿ ಕಾಲೇಜು ಗೇಟ್ ಮುಂಭಾಗದ ಮರಗಳನ್ನು ಕಡಿತಲೆ ಮಾಡಲಾಗಿದೆ. ಗೇಟಿಗೆ ಅಡ್ಡಲಾಗಿದೆ ಎಂಬ ಕಾರಣಕ್ಕೆ ಮರಗಳು ಕತ್ತರಿಸಿ ಹಾಕಲಾಗಿದೆ. ಒಂದೇ ದಿನ ಐದು ಮರ ಕಟ್ ಗೇಟಿನ ಮುಂಭಾಗ ಇದ್ದ ಐದು ಮರಗಳನ್ನು ಒಂದೆ ದಿನ ಕಡಿತಲೆ … Read more

ಶಿವಮೊಗ್ಗದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಫೋಟೊಗೆ ಬೆಂಕಿ

protest-against-Bollywood-Actor-ajay-devagan

SHIVAMOGGA LIVE NEWS | ACTOR | 28 ಏಪ್ರಿಲ್ 2022 ಕನ್ನಡ ಮತ್ತು ನಟ ಸುದೀಪ್ ವಿರುದ್ಧ ಅವಮಾನಕರ ಟ್ವೀಟ್ ಮಾಡಿದ ಬಾಲಿವುಡ್ ನಟ ಅಜಯ್ ದೇವಗನ್ ಅವರ ಪ್ರತಿಕೃತಿಗೆ ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿಲಾಯಿತು. ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನಟ ಅಜಯ್ ದೇವಗನ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಲಾಯಿತು. ನಟ ಸುದೀಪ್ ಅವರಿಗೆ ಅಜಯ್ ದೇವಗನ್ ಅವಮಾನಿಸಿದ್ದಾರೆ ಎಂದು … Read more

ಶಿವಮೊಗ್ಗದಲ್ಲಿ ಸಿಎಂ, ಮಲೆನಾಡು ಭಾಗದ ಅರಣ್ಯ ಭೂಮಿ ಸಮಸ್ಯೆ ಕುರಿತು ಮಹತ್ವದ ಸಭೆಗೆ ದಿನಾಂಕ ನಿಗದಿ

Chief-MInister-Basavaraja-Bommai-Press-Meet-in-Shimoga

SHIVAMOGGA LIVE NEWS | CHIEF MINISTER | 20 ಏಪ್ರಿಲ್ 2022 ಮಲೆನಾಡು ಭಾಗದಲ್ಲಿ ಅರಣ್ಯ ಭೂಮಿ ಸಾಗುವಳಿ ಸಂಬಂಧದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಮೇ ಮೊದಲ ವಾರದಲ್ಲಿ ಪ್ರತ್ಯೇಕ ಸಭೆ ಕರೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರಾವಳಿ ಮತ್ತು ಮಲೆನಾಡು ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯುತ್ತಿದ್ದೇನೆ. ಮೇ ಮೊದಲ ವಾರದಲ್ಲಿ ಸಭೆ ಕರೆಯುತ್ತೇನೆ. ಶಿವಮೊಗ್ಗ ಮಾತ್ರವಲ್ಲ ಪಶ್ಚಿಮಘಟ್ಟ … Read more

ರಾಯಣ್ಣ ಪ್ರತಿಮೆ ಧ್ವಂಸ, ಕನ್ನಡ ಧ್ವಜಕ್ಕೆ ಬೆಂಕಿ, ಶಿವಮೊಗ್ಗದಲ್ಲಿ ಕುರುಬ ಸಮಾಜದ ಆಕ್ರೋಶ

181221 Kuruba Sanga Protest against sangolli rayanna pratime distraction

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಡಿಸೆಂಬರ್ 2021

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಖಂಡಿಸಿ ಶಿವಮೊಗ್ಗದಲ್ಲಿ ಜಿಲ್ಲಾ ಯುವ ಕುರುಬರ ಬಳಗ ಪ್ರತಿಭಟನೆ ನಡೆಸಿತು. ಎಂಇಎಸ್ ಗೂಂಡಾಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಲಾಗಿದೆ. ನಾಲ್ಕು ದಿನದ ಹಿಂದೆ ಕರ್ನಾಟಕದ ಧ್ವಜ ಸುಡಲಾಗಿತ್ತು. ಇಷ್ಟಾದರೂ ಎಂಇಎಸ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ. ಧ್ವಜ ಸುಟ್ಟ ಪ್ರಕರಣ ಸಂಬಂಧ ಹೋರಾಟ ನಡೆಸಿದ ಕನ್ನಡಿಗರ ವಿರುದ್ಧವೇ ಕೇಸ್ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಉಪಮೇಯರ್ ಪಾಲಾಕ್ಷಿ ಅವರು, ನಾಲ್ಕು ದಿನದ ಹಿಂದೆ ಕರ್ನಾಟಕದ ಧ್ವಜ ಸುಟ್ಟಿದ್ದಾರೆ. ಈಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ್ದಾರೆ. ಎಂಇಎಸ್ ಅನ್ನುವುದು ದೇಶದ್ರೋಹಿ ಸಂಘಟನೆಯಾಗಿದೆ. ಇದನ್ನ ಕೂಡಲೆ ನಿಷೇಧ ಮಾಡಬೇಕು. ಈ ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

AVvXsEiYLxBEz05sXnF6VEPhBn g8YV0KTMqq9s4nelteMD8pHEYYR7ErEsRAk1Py Sv48 g93 0fWACivs8CsvisUgH8PZ0 5P6SmXqWcElXkvePufgp4c2KGMT O5 h2YUd6BXdf3QD6YtPqLSgtlqzGDWFnRhhxEM r4AywcgEHFM7ePY4yHjsj5J7 QRA=s926

AVvXsEj3 6UCzNipQY1pIPsl1vK7zlyzLBzWp R01ChQe0QbvkIXiJTL5 hZiVJL hBZeVY5LjYdOiz2GuBktOGA2YDuGI489 V EV1xxpiDldyz lsuiAlFHFqjJxXI6tEBkxsSouhTfc7Yh8ii1hU kzWWp4UQUi6rS2kPomPLSOKS2DhrAyNcYTGM98ziog=s926

Read more

ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿ ಮೃತದೇಹ

Railway Shivamogga Board 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಡಿಸೆಂಬರ್ 2021 ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬಲಗೈ ಮೇಲೆ ಶಿವನ ಮೂರ್ತಿಯ ಹಚ್ಚೆ ಇದೆ ಎಂದು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ – ಭದ್ರಾವತಿ ರೈಲ್ವೆ ನಿಲ್ದಾಣದ ಮಧ್ಯೆ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ವಯಸ್ಸು 55 ರಿಂದ 60ರವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಬಲಗೈ ಮೇಲೆ ಶಿವನ ಹಚ್ಚೆ ಇದೆ. ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ … Read more

BREAKING NEWS | ಕಾನೂನು ಬಾಹಿರ ಚಟುವಟಿಕೆ, ಶಿವಮೊಗ್ಗದಿಂದ ಒಬ್ಬನ ಗಡಿಪಾರು

breaking news graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಅಕ್ಟೋಬರ್ 2021 ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಸಾಬೀತಾದ ಹಿನ್ನೆಲೆ, ಹರಿಗೆಯ ಅರುಣ ಎಂಬಾತನನ್ನು ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅರುಣ ಅಲಿಯಾಸ್ ಗೂನಾ ಎಂಬಾತನನ್ನು ಒಂದು ವರ್ಷ ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿದೆ. ಕಾನೂನು ಬಾಹಿರ ಚುಟುವಟಿಕೆಯಲ್ಲಿ ತೊಡಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಅವರು ಅರುಣನನ್ನು ಗಡಿಪಾರು ಮಾಡಿದ್ದಾರೆ. ಇವತ್ತಿನಿಂದಲೇ ಗಡಿಪಾರು ಆದೇಶ ಜಾರಿಯಾಗಲಿದೆ. ಆದ್ದರಿಂದ … Read more

ಶಿವಮೊಗ್ಗದಲ್ಲಿ ಸೇತುವೆ ಮೇಲಿಂದ ತುಂಗಾ ನದಿಗೆ ಧುಮುಕಿದ ಯುವಕ, ರಕ್ಷಣಾ ಕಾರ್ಯ ನೋಡಲು ಜನವೋ ಜನ

101021 Shimoga Youth Rescued in Tunga River

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021 ಸೇತುವೆ ಮೇಲಿನಿಂದ ತುಂಗಾ ಹೊಳೆಗೆ ಜಿಗಿದು, ನಡು ನೀರಲ್ಲಿ ಸಿಲುಕಿದ್ದ ಯುವಕನೊಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು, ಕಾರ್ಯಾಚರಣೆ ವೀಕ್ಷಿಸಲು ಭಾರಿ ಜನ ಸೇರಿದ್ದರಿಂದ ಸೇತುವೆ ಮೇಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬೆಕ್ಕಿನಕಲ್ಮಠ ಬಳಿ ಸೇತುವೆ ಮೇಲಿನಿಂದ ಯುವಕನೊಬ್ಬ ತುಂಗಾ ಹೊಳೆಗೆ ಹಾರಿದ್ದಾನೆ. ಆತನನ್ನು ತನ್ವೀರ್ ಎಂದು ಗುರುತಿಸಲಾಗಿದೆ. ಸೇತುವೆಯಿಂದ ಹಾರಿದನಂತೆ..! ತನ್ವೀರ್, ಹೊಸ ಸೇತುವೆ ಮೇಲಿಂದ ತುಂಗಾ ಹೊಳೆಗೆ ಹಾರಿದ್ದಾನೆ … Read more

ಶಿವಮೊಗ್ಗದಲ್ಲಿ ಮತ್ತೊಂದು ರೂಪಾಂತರಿ ಕರೋನ ಕೇಸ್, ಭಯ ಬೇಡ ಅಂತಿದೆ ಆರೋಗ್ಯ ಇಲಾಖೆ

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 MARCH 2021 ಲಂಡನ್‍ನಿಂದ ಹಿಂತಿರುಗಿದವರಲ್ಲಿ ಕಾಣಿಸಿಕೊಂಡಿದ್ದ ರೂಪಾಂತರಿ ವೈರಸ್‍ನಿಂದ ಜನರು ಆತಂಕಕ್ಕೀಡಾಗಿದ್ದರು. ಈಗ ದಕ್ಷಿಣ ಆಫ್ರಿಕಾದ ರೂಪಾಂತರಿ ಕರೋನ ವೈರಸ್ ಪತ್ತೆಯಾಗಿದೆ. ಶಿವಮೊಗ್ಗಕ್ಕೆ ಹಿಂತಿರುಗಿದ್ದ ವ್ಯಕ್ತಿಯೊಬ್ಬರಲ್ಲಿ ಈ ವೈರಸ್‍ ಕಾಣಿಕೊಂಡಿದೆ ಎಂದು ಹೇಳಲಾಗುತ್ತಿದೆ. 18 ದಿನದ ಹಿಂದೆ ದಕ್ಷಿಣ ಆಫ್ರಿಕಾದಿಂದ ಶಿವಮೊಗ್ಗದ ಜೆ.ಪಿ.ನಗರಕ್ಕೆ ಈ ವ್ಯಕ್ತಿ ಹಿಂತಿರುಗಿದ್ದರು. ಇವರಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ. ಇವರಿಗೆ … Read more